ಸಾವಿನ ಬಗ್ಗೆ ಮುಗಿಯದ ಕುತೂಹಲ: ಜಗದೀಶ್ ಶರ್ಮಾ

Published : Oct 17, 2022, 11:52 AM ISTUpdated : Oct 17, 2022, 12:16 PM IST
ಸಾವಿನ ಬಗ್ಗೆ ಮುಗಿಯದ ಕುತೂಹಲ: ಜಗದೀಶ್ ಶರ್ಮಾ

ಸಾರಾಂಶ

ಸಾವಿನ ಬಗ್ಗೆ ಮುಗಿಯದ ಕುತೂಹಲ: ಶರ್ಮಾ ಸಾವಿನ ಬಗ್ಗೆ ತಿಳಿದುಕೊಳ್ಳದಿರುವುದೇ ಭಯಕ್ಕೆ ಕಾರಣ: ಸಂಸ್ಕೃತ ವಿದ್ವಾಂಸ ಜೋಗಿ ವಿರಚಿತ ಸಾವು ಕೃತಿ ಲೋಕಾರ್ಪಣೆ

ಬೆಂಗಳೂರು (ಅ.17) : ‘ಸಾವು ದಿ ಆರ್ಟ್ ಆಫ್‌ ಡೈಯಿಂಗ್‌’ ಪುಸ್ತಕ ಸಾವಿನ ಕುರಿತ ಮಿನಿ ವಿಶ್ವಕೋಶವೇ ಆಗಿದ್ದು, ಸಾವಿನ ಬಗೆಗಿನ ಕುತೂಹಲ ಅಂಶಗಳನ್ನು ಲೇಖಕ ಜೋಗಿ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಂಸ್ಕೃತ ವಿದ್ವಾಂಸ ಜಗದೀಶ ಶರ್ಮಾ ತಿಳಿಸಿದ್ದಾರೆ.

ಸ್ಕಾಚ್ ವಿಸ್ಕಿ ಕುಡಿಯುವವನಿಗೆ ಇಲ್ಲ ಮಾರ್ಯಾದೆ! ಎಲ್ಲಿಗೆ ಬಂತು ಕಾಲ?

ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆದ ಸಾವಣ್ಣ ಪ್ರಕಾಶನದ ಜೋಗಿ ಅವರು ರಚಿಸಿರುವ ‘ಸಾವು; ದಿ ಆರ್ಟ್ ಆಫ್‌ ಡೈಯಿಂಗ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮನುಷ್ಯರಿಗೆ ಸಾವಿನ ಕುರಿತು ಸಾಕಷ್ಟುಭಯವಿದೆ. ಸಾವಿನ ಬಗ್ಗೆ ತಿಳಿದುಕೊಳ್ಳದಿರುವುದೇ ಆ ಭಯಕ್ಕೆ ಕಾರಣ. ಸಾವು ಹೇಗೆ ಬರುತ್ತದೆ, ಅದರ ಹಾದಿ, ನಂಬಿಕೆಗಳು, ನಂತರ ಏನು ಎಂಬ ಕುತೂಹಲದ ಅಂಶಗಳು ಬಹುತೇಕರಲ್ಲಿದ್ದು, ಅವುಗಳಿಗೆ ವ್ಯಕ್ತಿಗಳ ಅನುಭವಗಳು, ಸಾಹಿತ್ಯ, ಪುರಾಣಗಳು, ಆಧುನಿಕ ವಿಜ್ಞಾನ, ಮನೋವೈಜ್ಞಾನಿಕ ಕ್ಷೇತ್ರದ ಅಂಶಗಳನ್ನು ಕಲೆಹಾಕಿ ಪುಸ್ತಕದಲ್ಲಿ ಉತ್ತರ ನೀಡಲಾಗಿದೆ. ಈ ಮೂಲಕ ಕೃತಿಯು ಸಾವಿನ ಕುರಿತ ಮಿನಿ ವಿಶ್ವಕೋಶವೇ ಆಗಿದೆ ಎಂದರು.

ಏಷ್ಯಾನೆಟ್‌ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಸಾವು ಅಂದರೆ ದೇಹ ನಿಶ್ಕ್ರಿಯವಾಗುವ ಒಂದು ವಿಧಾನ. ಆದರೆ, ಸಾವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸಾವು ಎಂದರೆ, ವೈದ್ಯನಿಗೆ ಶಸ್ತ್ರಚಿಕಿತ್ಸೆ ವೈಫಲ್ಯ ಎಂದಾದರೆ, ಪೊಲೀಸರಿಗೆ ಸಹಜ ಅಸಹಜ ಸಾವು ಎಂಬಿತ್ಯಾದಿ ಆಯ್ಕೆಯಾಗಿರುತ್ತದೆ. ವಕೀಲನಿಗೆ ಹೊಸ ಪ್ರಕರಣವಾದರೆ, ಶವಗಾರದ ಸಿಬ್ಬಂದಿಗೆ ಒಂದಿಷ್ಟುಕಾಸಾಗಿರುತ್ತದೆ. ಇನ್ನು ಸ್ಮಶಾಣ ಕಾಯುವವರಿಗೆ ಅನ್ನವಾಗಿರುತ್ತದೆ. ಅದೇ ಮಾಧ್ಯಮದವರಿಗೆ ಸಾವು ಟಿಅರ್‌ಪಿಯಾಗಿರುತ್ತದೆ. ಹಲವರ ಸಾವನ್ನು ಕೆಲ ದಿನಗಳಲ್ಲಿಯೇ ಮರೆಯುತ್ತೇವೆ. ಕೆಲವರ ಸಾವು ದೀರ್ಘ ಕಾಲದವರೆಗೂ ಕಾಡುತ್ತಿರುತ್ತದೆ. ಇದಕ್ಕೆ ಕಾರಣ ಅವರು ಬದುಕಿದ ರೀತಿಯಾಗಿದೆ. ಈ ಮೂಲಕ ವ್ಯಕ್ತಿಯು ಬದುಕುವ ಹಾದಿಯು ಸಾವಿಗೆ ಒಂದು ವ್ಯಾಖ್ಯಾನ ನೀಡುತ್ತದೆ. ಅದು ಗೌರವ ಅಥವಾ ನಿರ್ಲಕ್ಷ್ಯವು ಆಗಿರಬಹುದು ಎಂದರು.

ಕನ್ನಡ ಪುಸ್ತಕೋದ್ಯಮದ ಸಾವಾಗುತ್ತಿದೆ ಎಂಬ ಕಾಲವಿತ್ತು. ಸಾವಣ್ಣ ಪ್ರಕಾಶನ ನೋಡಿದರೆ ಆ ರೀತಿ ಅನ್ನಿಸುವುದಿಲ್ಲ. ಅವರು ಹೊರ ತರುತ್ತಿರುವ ಪುಸ್ತಕಗಳಲ್ಲಿ ಜೀವನೋತ್ಸವ ಕಂಡುಬರುತ್ತದೆ. ಕನ್ನಡ ಪುಸ್ತಕಗಳಿಗೆ ಸ್ಟಾರ್‌ ಪಟ್ಟತಂದುಕೊಟ್ಟಿದ್ದು, ಏಕತಾನತೆಯನ್ನು ಕಡಿಮೆ ಮಾಡಿದ್ದಾರೆ. ಸಾವಣ್ಣ ಪ್ರಕಾಶನದ ಮುಂದಿನ ಹಾದಿಯು ಇದೇ ರೀತಿ ಇರಲಿ ಆಶಿಸಿದರು.

ಕಾರ್ಯಕ್ರಮದಲ್ಲಿ ಪ್ರಕಾಶಕ ಜಮೀಲ್‌ ಸಾವಣ್ಣ, ಲೇಖಕ ಗೋಪಾಲಕೃಷ್ಣ ಕುಂಟಿನಿ ಹಾಗೂ ಕನ್ನಡಪ್ರಭ ಸಾಪ್ತಾಹಿಕ ಪುರವಣಿ ಸಂಪಾದಕ ಜೋಗಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ವೈಎನ್‌ಕೆ ಅವರ ಸಾವಿನ ಬಗ್ಗೆ ಈಗಲೂ ಅನುಮಾನ’

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, ವೈಎನ್‌ಕೆ ಸಾವಿನ ಬಗ್ಗೆ ಇಂದಿಗೂ ಅನುಮಾನಗಳಿವೆ. ಅವರ ಪುಣ್ಯ ಸ್ಮರಣೆ ದಿನದಂದೇ ಜೋಗಿಯವರ ಪುಸ್ತಕ ಸಾವು ಬಿಡುಗಡೆಯಾಗುತ್ತಿರುವುದು ವಿಚಿತ್ರ ಹಾಗೂ ಕಾಕತಾಳೀಯವಾಗಿದೆ. ಮನುಷ್ಯ ಸಾವಿನ ಕಡೆಗೆ ನಿರಂತರ ಹೆಜ್ಜೆ ಹಾಕುತ್ತಲಿದ್ದು, ಅದರ ಬಗ್ಗೆ ಸಾಕಷ್ಟುಭಯ ಮಾತ್ರವಲ್ಲದೆ ಕುತೂಹಲಗಳಿವೆ. ಜೋಗಿ ಅವರು ಪುಸಕ್ತದಲ್ಲಿ ಕೇವಲ ಸಾವಿನ ಬಗ್ಗೆ ಶುಷ್ಕವಾಗಿ ಹೇಳದೇ ಬದುಕನ್ನು ಗಾಢವಾಗಿ ಪ್ರೀತಿಸುವವರ ಬಗ್ಗೆ ಹೇಳಿದ್ದಾರೆ ಎಂದರು.

ಲೇಖಕಿ ಕುಸುಮಾ ಆಯರಹಳ್ಳಿ ಮಾತನಾಡಿ, ಮನುಷ್ಯರೆಲ್ಲರೂ ಬದುಕಿನ ವ್ಯಾಪಾರ ಮಾಡುವ ಶೆಟ್ಟಿಗಳೇ ಆಗಿದ್ದು, ಸಾವು ಬದುಕಿನ ಬ್ಯಾಲೆನ್ಸ್ ಶೀಟ್‌ ತೆರೆದಿಡುತ್ತದೆ. ಕೆಲವರು ಸತ್ತ ಬದುಕುತ್ತಾರೆ, ಇನ್ನು ಕೆಲವರು ಬದುಕಿದ್ದು ಸತ್ತಂತಿರುತ್ತಾರೆ. ಭೂಮಿಯ ಮೇಲೆ ಒಬ್ಬರು ನೆನಸಲಿಲ್ಲ ಎಂದರೆ ಅದು ನಿಜವಾದ ಸಾವು. ಲೇಖಕ ಜೋಗಿ ಅವರು ಪುಸ್ತಕದ ಮೂಲಕ ಸಾವಿನ ಕುತೂಹಲ ಅಂಶಗಳನ್ನು ತೆರದಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ

75, 150ರ ಸಂಭ್ರಮ

‘ಸಾವು’ ಕನ್ನಡಪ್ರಭ ಪುರಾವಣಿ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಅವರ 75ನೇ ಕೃತಿಯಾಗಿದ್ದು, ಸಾವಣ್ಣ ಪ್ರಕಾಶನದ 150ನೇ ಕೃತಿಯಾಗಿದೆ. ಕಾರ್ಯಕ್ರಮದಲ್ಲಿ ಪ್ರಕಾಶನಕ್ಕೆ ದುಡಿದ ಪ್ರಮುಖರಿಗೆ ಸನ್ಮಾನಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್