
ಬೆಂಗಳೂರು (ಅ.17) : ಲಗ್ಗೆರೆ ವಾರ್ಡ್ ವ್ಯಾಪ್ತಿಯ ರಾಕ್ಷಸಿ ಹಳ್ಳ ಎಂಬಲ್ಲಿ ಡಾ ಅಂಬರೀಶ್ ಈಜುಕೊಳ, ಡಾ ರಾಜಕುಮಾರ್ ಉದ್ಯಾನವನ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಆಟದ ಮೈದಾನ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಅವರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕೆರೆ ವಾರ್ಡ್ ವ್ಯಾಪ್ತಿಯ ರಾಕ್ಷಸಿ ಹಳ್ಳದಲ್ಲಿ ಶಾಲಾ ಕಟ್ಟಡ ಕಾಮಗಾರಿ ಹಾಗೂ ಲವಕುಶ ನಗರದಲ್ಲಿ ಮಳೆ ನೀರು ಕಾಲುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಮಿಷನ್ ಆರೋಪ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ ಮುನಿರತ್ನ ಕೇಸ್!
ಹಾಗೆಯೇ ಬಡ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತಿದ್ದೇವೆ. ಕೊರೋನಾ ಮಹಾಮಾರಿಯಿಂದ ರಾಜ್ಯದ ಜನ ತತ್ತರಿಸಿದ ಸಂದರ್ಭದಲ್ಲಿ ಪೋಷಕರು ಖಾಸಗಿ ಶಾಲೆಯ ಹಣ ಕಟ್ಟಲಾಗದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿತ್ತು. ಇಂತಹ ಸಂದರ್ಭದಲ್ಲಿ ಬಡ, ಮಧ್ಯಮ ಕುಟುಂಬದವರಿಗೆ ಸಹಾಯವಾಗಲೆಂದು ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಬಿಬಿಎಂಪಿ ಮಾಜಿ ಸದಸ್ಯ ಸಿದ್ದೇಗೌಡ ಮಾತನಾಡಿ, ಮುನಿರತ್ನ ಅವರು ಶಾಸಕರಾಗಿ, ಈಗ ಸಚಿವರಾಗಿ ಕ್ಷೇತ್ರದಲ್ಲಿ ಹಿಂದೆಂದೂ ನಡೆಯದಂತಹ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಗೊಂಡಿರುವುದರಿಂದ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು. ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮೇಕಾಂತ ರೆಡ್ಡಿ, ಮುಖಂಡರಾದ ರವೀಂದ್ರ, ವೇಲು ನಾಯಕ್, ತಿಮ್ಮರಾಜು, ಗೋವಿಂದರಾಜು ಮತ್ತು ರಾಜು ಉಪಸ್ಥಿತರಿದ್ದರು
Bengaluru Heavy rains: ರಾಜಧಾನಿಯಲ್ಲಿ ಸರ್ವಕಾಲಿಕ ದಾಖಲೆ ಮಳೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ