ಇನ್ಮುಂದೆ ವಿದ್ಯುತ್ ಬಿಲ್ ಲೆಕ್ಕಾಚಾರ ಬದಲು! ಹಗಲು, ರಾತ್ರಿ ಬಳಕೆಗೆ ಪ್ರತ್ಯೇಕ ದರ, 2027ರಿಂದ ಕೇಂದ್ರದ ಹೊಸ ನಿಯಮ ಜಾರಿ

Gowthami K   | Kannada Prabha
Published : Nov 27, 2026, 10:50 AM IST
Electricity Bill

ಸಾರಾಂಶ

ಇನ್ಮುಂದೆ ನೀವು ಎಷ್ಟು ಯುನಿಟ್ ವಿದ್ಯುತ್ ಬಳಸಿದ್ದೀರಿ ಎನ್ನುವುದಷ್ಟೇ ನಿಮ್ಮ ವಿದ್ಯುತ್ ಬಿಲ್ ನಿರ್ಧರಿಸುವುದಿಲ್ಲ. ಬದಲಾಗಿ ವಿದ್ಯುತ್‌ ಬಳಕೆಯ ಸಮಯ ಆಧರಿಸಿ ಪ್ರತ್ಯೇಕ ಶುಲ್ಕ ನಿಗದಿಪಡಿಸುವ ‘ಟೈಮ್‌ ಆಫ್‌ ದಿ ಡೇ ಶುಲ್ಕ’ ಯೋಜನೆ ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡಸಿದೆ.

ನವದೆಹಲಿ: ಬೇಡಿಕೆ ಮತ್ತು ಪೂರೈಕೆಗನುಗುಣವಾಗಿ ವಿದ್ಯುತ್‌ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್‌ ಸಚಿವಾಲಯವು ‘ಟೈಮ್ ಆಫ್‌ ದಿ ಡೇ’(ದಿನದ ಅವಧಿ) ದರ ನಿಗದಿ ನಿಯಮಾವಳಿ ಜಾರಿಗೆ ಮುಂದಾಗಿದ್ದು, ಅದರಂತೆ ಗ್ರಾಹಕರು ದಿನದ ಯಾವ ಅವಧಿಯಲ್ಲಿ ವಿದ್ಯುತ್‌ ಬಳಸಿದ್ದಾರೆ ಎನ್ನುವ ಆಧಾರದ ಮೇಲೆ ವಿದ್ಯುತ್‌ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ.

ಹೊಸ ನಿಯಮದ ಪ್ರಕಾರ ವಿದ್ಯುತ್‌ ಬೇಡಿಕೆಗನುಗುಣವಾಗಿ ದಿನದಲ್ಲಿ ಬೇರೆ ಬೇರೆ ಸ್ಲಾಟ್‌ಗಳನ್ನು ನಿಗದಿಪಡಿಸಿ, ಈ ಅವಧಿಯಲ್ಲಿ ಬೇರೆ ಬೇರೆ ಶುಲ್ಕಗಳನ್ನು ನಿಗದಿಪಡಿಸಲಾಗುತ್ತದೆ. ಇದರಿಂದ ರಾತ್ರಿ ವೇಳೆ ಬಳಸುವ ವಿದ್ಯುತ್‌ಗೂ ದಿನದ ಅವಧಿಯಲ್ಲಿ ಬಳಸುವ ವಿದ್ಯುತ್‌ಗೂ ವಿಧಿಸುವ ಶುಲ್ಕದಲ್ಲಿ ವ್ಯತ್ಯಾಸವಿರಲಿದೆ. ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ಹೆಚ್ಚು ಹಾಗೂ ಕಡಿಮೆ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ಕಡಿಮೆ ಶುಲ್ಕ ವಿಧಿಸಲು ಈ ನಿಯಮ ಅವಕಾಶ ಮಾಡಿಕೊಡಲಿದೆ.

ಈ ಕುರಿತ ಕರಡು ನಿಯಮಾವಳಿ ಈಗಾಗಲೇ ಸಿದ್ಧವಾಗಿದ್ದು, ಏ.1, 2027ರಿಂದ ಅನುಷ್ಠಾನಕ್ಕೆ ಬರಲಿದೆ. 2029ರ ಏಪ್ರಿಲ್‌ನಿಂದ ಬಹುತೇಕ ಎಲ್ಲಾ ಗ್ರಾಹಕರನ್ನುೂ ಈ ನಿಯಮದಡಿ ತರುವ ಗುರಿ ಹೊಂದಲಾಗಿದೆ.

ಆರಂಭದಲ್ಲಿ 10 ಕಿ.ವ್ಯಾಟ್‌ಗಿಂತ ಹೆಚ್ಚು ಗರಿಷ್ಠ ಬೇಡಿಕೆಯ ಗ್ರಾಹಕರನ್ನು ಆ ದಿನದ ಶುಲ್ಕ ನಿಯಮದಡಿ ತರಲು ಉದ್ದೇಶಿಸಲಾಗಿದ್ದು, ಏ.1, 2028ರೊಳೆಗ ಈಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇತರೆ ಗ್ರಾಹಕರು ಏ.1, 2029ರೊಳಗೆ ಈ ನಿಯಮದಡಿ ತರಲು ಉದ್ದೇಶಿಸಲಾಗಿದೆ. ಕೃಷಿಕ ಗ್ರಾಹಕರನ್ನು ಈ ನಿಮಯದಿಂದ ಹೊರಗಿಡಲಾಗಿದೆ.

ದರ ನಿಗದಿ ಮತ್ತು ಸ್ಲಾಟ್‌ಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಲು ಹೊಣೆಗಾರಿಕೆ ರಾಜ್ಯದ ವಿದ್ಯುತ್‌ ಆಯೋಗಗಳಿಗೆ ನೀಡಲಾಗಿದೆ.

ಹೊಸ ನಿಯಮದಂತೆ ನೀವು ಮತ್ತು ನಿಮ್ಮ ಮನೆಯ ಪಕ್ಕದವರು ಸಮಾನ ಯುನಿಟ್‌ನಷ್ಟೇ ವಿದ್ಯುತ್‌ ಬಳಸಿದರೂ ವಿದ್ಯುತ್‌ ಶುಲ್ಕ ಮಾತ್ರ ಬೇರೆ ಬೇರೆ ರೀತಿಯಾಗಿ ಬರಲಿದೆ.

ಸೋಲಾರ್‌ನಂಥ ನವೀಕೃತ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವವರು ಏ.1, 2028ರಿಂದ ವಿದ್ಯುತ್‌ ಸಂಗ್ರಹಿಸುವ ಅಗತ್ಯವೂ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.

ಪರಿಣಾಮ ಏನು?:

- ಈ ನಿಯಮಾವಳಿಯಿಂದಾಗಿ ಹೆಚ್ಚಿನ ಬೇಡಿಕೆ ಇರುವ ಅವಧಿಯಲ್ಲಿ ಬಳಸುವ 50 ಯುನಿಟ್‌ ವಿದ್ಯುತ್‌ಗೂ ಕಡಿಮೆ ಬೇಡಿಕೆ ಇರುವ ಅವಧಿಯಲ್ಲಿ ಬಳಸುವ 50 ಯುನಿಟ್‌ ವಿದ್ಯುತ್‌ಗೂ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.

- ಈ ಮೂಲಕ ವಾಷಿಂಗ್‌ ಮೆಷಿನ್, ವಾಟರ್‌ ಪಂಪ್‌ಗಳ ಬಳಕೆ, ಎಲೆಕ್ಟ್ರಿಕ್‌ ವಾಹನ ಚಾರ್ಚಿಂಗ್‌ನಂಥ ಕಾರ್ಯಗಳನ್ನು ಗ್ರಾಹಕರು ಕಡಿಮೆ ಬೇಡಿಕೆಯ ಅವಧಿಯಲ್ಲಿ ಕೈಗೊಳ್ಳಲು ಸರ್ಕಾರ ಉತ್ತೇಜನ ನೀಡಲಿದೆ.

  • ಕೇಂದ್ರದಿಂದ ಟೈಮ್‌ ಆಫ್‌ ದಿ ಡೇ ಶುಲ್ಕ ಜಾರಿಗೆ ಸಿದ್ಧತೆ
  • ಬೇಡಿಕೆ ಮೇಲೆ ಒಂದೇ ಯುನಿಟ್‌ಗೆ ಬೀಳಲಿದೆ ವಿಭಿನ್ನ ಶುಲ್ಕ
  • ಬೇಡಿಕೆ ಹೆಚ್ಚಿದ್ದಾಗ ಹೆಚ್ಚು, ಕಡಿಮೆ ಇದ್ದಾಗ ಕಡಿಮೆ ಶುಲ್ಕ
  • ಏ.1, 2029ರಿಂದ ಎಲ್ಲಾ ಗ್ರಾಹಕರಿಗೂ ನಿಯಮ ಜಾರಿ ಗುರಿ
  • ಕೃಷಿ ಬಳಕೆದಾರರಿಗೆ ಈ ನಿಯಮಾವಳಿಯಿಂದ ವಿನಾಯ್ತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದಿನಿಂದ ರಾಜ್ಯಾದ್ಯಂತ ಕುಕ್ಕುಟ ಉದ್ಯಮಿಗಳ ಪ್ರತಿಭಟನೆ: ಕೆ.ಜಿಗೆ ₹10 ಬೇಡಿಕೆ, ಕೋಳಿ, ಮೊಟ್ಟೆ ಬೆಲೆ ಏರಿಕೆಯ ಆತಂಕ
ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತ ಇಂದು, ನಾಡಿದ್ದು ಸಂಚಾರ ಮಾರ್ಪಾಡು, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ