ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತ ಇಂದು, ನಾಡಿದ್ದು ಸಂಚಾರ ಮಾರ್ಪಾಡು, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

Published : Nov 27, 2026, 09:29 AM IST
Bangalore traffic diversion

ಸಾರಾಂಶ

ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್ 27 ಮತ್ತು 29ರಂದು ನಡೆಯಲಿರುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಟ್ರಾಫಿಕ್ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದು, ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಬೆಂಗಳೂರು (ನ.27): ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ಮತ್ತು ನಾಳೆ (ನವೆಂಬರ್ 27, 29) ಹಲವು ಕಾರ್ಯಕ್ರಮಗಳ ನಿಗದಿಯಾಗಿರುವ ಹಿನ್ನೆಲೆ ವಾಹನಗಳ ದಟ್ಟಣೆ ತಪ್ಪಿಸಲು ಸಂಚಾರ ಪೊಲೀಸರು ಸಂಚಾರ ಬದಲಾವಣೆ ಮಾಡಿದ್ದಾರೆ.

ವಾರಂತ್ಯದಲ್ಲಿ ಅರಮನೆ ಮೈದಾನದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು, ಗಣ್ಯರು ಆಗಮಿಸಲಿರುವ ಸಾಧ್ಯತೆಯಿದೆ. ಹೀಗಾಗಿ ಇಂದು ಮತ್ತು ನಾಳೆ ತ್ರಿಪುರವಾಸಿನಿ, ಬಳ್ಳಾರಿ ರಸ್ತೆ, ಸಿವಿ ರಾಮನ್ ರಸ್ತೆ, ಜಯಮಹಲ್ ರಸ್ತೆಯ ಸುತ್ತಲೂ ಸಂಚಾರ ದಟ್ಟಣೆ ಹೆಚ್ಚಲಿದೆ. ಈ ಹಿನ್ನೆಲೆ ವಾಹನ ಸವಾರರಿಗೆ ತೊಂದರೆಯಾಗದಿರಲು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನ ಸೂಚಿಸಿದ್ದಾರೆ.

ವಾಹನ ಸವಾರರು ಯಾವ ಮಾರ್ಗ ಬಳಸಬೇಕು?

ಸಂಚಾರ ಪೊಲೀಸರು ಸೂಚನೆಯಂತೆ ನವೆಂಬರ್ 27ರಂದು ಮದ್ಯಾಹ್ನ 2 ರಿಂದ ತಡರಾತ್ರಿ 11ಗಂಟೆವರೆಗೆ ಹಾಗೂ ನಾಳೆ ನಾಡಿದ್ದು ನವೆಂಬರ್ 29ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಸಂಚಾರ ಮಾರ್ಗ ನಿರ್ಬಂಧವಿರುತ್ತದೆ. ಹೀಗಾಗಿ ವಾಹನ ಸವಾರರು ಸಂಚಾರ ಪೊಲೀಸರು ಸೂಚಿಸಿದ ಪರ್ಯಾಯ ಮಾರ್ಗ ಬಳಸಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ತೆರಳುವ ವಾಹನಗಳು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲು ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ಮಾರ್ಗವಾಗಿ ಹೋಗಬೇಕು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ, ನಾಗವಾರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಬೇಕು. ಅಲ್ಲಿಂದ ಬಂಬೂ ಬಜಾರ್ ಹಾಗೂ ಕ್ವೀನ್ಸ್ ರಸ್ತೆಯ ಮೂಲಕ ಬರಬೇಕು.

ಇನ್ನೊಂದು ಪರ್ಯಾಯ ಮಾರ್ಗವಾಗಿ ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ವೃತ್ತ ಹಾಗೂ ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ತೆರಳಿ, ಡಾ. ರಾಜ್‌ಕುಮಾರ್ ರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ತಲುಪಬಹುದು.

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಿ, ಮತ್ತಿಕೆರೆ ರಸ್ತೆ ಮೂಲಕ ರಿಂಗ್ ರಸ್ತೆ ತಲುಪಬೇಕು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಯಶವಂತಪುರದಿಂದ ನಗರದ ಕಡೆಗೆ ಬರುವವರು ಡಾ. ರಾಜ್‌ಕುಮಾರ್ ರಸ್ತೆಯನ್ನು ಬಳಸಬಹುದು.

ಇನ್ನು ಹಲಸೂರು ಹಾಗೂ ಓಲ್ಡ್ ಏರ್‌ಪೋರ್ಟ್ ರಸ್ತೆಯಿಂದ ಹೆಬ್ಬಾಳದ ಕಡೆಗೆ ತೆರಳುವ ವಾಹನಗಳಿಗೂ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ವಾಹನಗಳು ಹಲಸೂರು ಕೆರೆ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ಸಂಚರಿಸಬೇಕು.

ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?

ಹೆಬ್ಬಾಳದಿಂದ ಬಳ್ಳಾರಿ ರಸ್ತೆಯ ಕಡೆಗೆ ಹೋಗುವ ಭಾರೀ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ಟ್ರಾಫಿಕ್ ಪೊಲೀಸರು ನಿರ್ಬಂಧಿಸಿದ್ದಾರೆ. ಇಂತಹ ವಾಹನಗಳ ಬಂದರೆ ಹೆಬ್ಬಾಳ ಜಂಕ್ಷನ್‌ನಲ್ಲೇ ತಡೆದು, ಔಟರ್ ರಿಂಗ್ ರೋಡ್ ಮೂಲಕ ಬೇರೆ ಮಾರ್ಗದಲ್ಲಿ ಕಳುಹಿಸಲಾಗುತ್ತದೆ.

ಹೈ ಗ್ರೌಂಡ್ಸ್ ಕಡೆಯಿಂದ ಬರುವ ಭಾರೀ ಸರಕು ಸಾಗಣೆ ವಾಹನಗಳು ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲು ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ಮಾರ್ಗವಾಗಿ ಹೋಗಬಹುದು. ಸಂಚಾರ ನಿರ್ಬಂಧ ಜಾರಿಯಲ್ಲಿರುವ ಸಮಯದಲ್ಲಿ ಯಶವಂತಪುರದಿಂದ ಸಿ.ವಿ. ರಾಮನ್ ರಸ್ತೆಯ ಕಡೆಗೆ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಅರಮನೆ ಮೈದಾನದ ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

ಅರಮನೆ ಮೈದಾನದ ಸುತ್ತಮುತ್ತಲಿನ ಆರು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ಆ ರಸ್ತೆಗಳ ವಿವರ ಇಲ್ಲಿದೆ:

  • ಅರಮನೆ ರಸ್ತೆ
  • ಬಳ್ಳಾರಿ ರಸ್ತೆ
  • ಜಯಮಹಲ್ ರಸ್ತೆ
  • ನಂದಿದುರ್ಗ ರಸ್ತೆ
  • ಸಿ.ವಿ. ರಾಮನ್ ರಸ್ತೆ
  • ಗುಟ್ಟಹಳ್ಳಿ ರಸ್ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದಿನಿಂದ ರಾಜ್ಯಾದ್ಯಂತ ಕುಕ್ಕುಟ ಉದ್ಯಮಿಗಳ ಪ್ರತಿಭಟನೆ: ಕೆ.ಜಿಗೆ ₹10 ಬೇಡಿಕೆ, ಕೋಳಿ, ಮೊಟ್ಟೆ ಬೆಲೆ ಏರಿಕೆಯ ಆತಂಕ
ಈಗ ಸಂವಿಧಾನ ಜಪ ಮಾಡೋ ಕಾಂಗ್ರೆಸ್ ಅಂಬೇಡ್ಕರ್‌ರನ್ನ 2 ಬಾರಿ ಸೋಲಿಸಿತ್ತು, ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ!