ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆ ಕಳೆದೊಂದು ವಾರದಿಂದ ಕೇಸರಿಮಯವಾಗಿದ್ದ ನಗರ ಈಗ ಈದ್ ಮಿಲಾದ್ ಆಚರಣೆ ಹಿನ್ನೆಲೆ ಹಸಿರುಮಯವಾಗಿದೆ.
ಶಿವಮೊಗ್ಗ (ಅ.1): ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆ ಕಳೆದೊಂದು ವಾರದಿಂದ ಕೇಸರಿಮಯವಾಗಿದ್ದ ನಗರ ಈಗ ಈದ್ ಮಿಲಾದ್ ಆಚರಣೆ ಹಿನ್ನೆಲೆ ಹಸಿರುಮಯವಾಗಿದೆ.
ಸೆ.28ರಂದು ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಂ ಸಮುದಾಯದವರು ಹಿಂದೂ ಮಹಾಗಣಪತಿ ಮೆರವಣಿಗೆ ಹಿನ್ನೆಲೆ ಅ.1ಕ್ಕೆ ಮುಂದೂಡಿಕೊಂಡಿದ್ದರು. ಹಳೇ ಶಿವಮೊಗ್ಗ ಬಡಾವಣೆಗಳಲ್ಲಿ ಹಸಿರು ಬಾವುಟ, ಬಂಟಿಂಗ್ಸ್‌ಗಳು, ಟಿಪ್ಪು ಸುಲ್ತಾನ್‌ನ ವಿಶೇಷ ಅಲಂಕಾರಗಳು ನೋಡುಗರ ಮನವನ್ನು ಆಕರ್ಷಿಸುತ್ತಿವೆ. ರಸ್ತೆ ಬದಿಗಳು, ಗಲ್ಲಿ ಗಲ್ಲಿಗಳಲ್ಲಿ ಹಸಿರು-ಬಿಳಿ ಬಂಟಿಂಗ್ಸ್, ಧ್ವಜಗಳನ್ನು ಅಳವಡಿಸುವ ಮೂಲಕ ಮೆರವಣಿಗೆಗೆ ಮೆರಗು. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಮಕ್ಕಾ, ಮದೀನ, ಮಿನಾರ್, ಮಸೀದಿ ಹಾಗೂ ಟಿಪ್ಪು ಸುಲ್ತಾನ್ ಮಾದರಿ ಕಲಾಕೃತಿ ಪ್ರದರ್ಶನ.
ರಾಷ್ಟ್ರಧ್ವಜದ ಮೇಲೆ ಗುಂಬಜ್, ಮುಸ್ಲಿಂ ಧರ್ಮದ ಘೋಷಣೆ ಬರೆದು ಅವಮಾನ: ಆರೋಪಿ ಬಂಧನ
ಇಂದು ಮಧ್ಯಾಹ್ನ 3 ರಿಂದ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಅಮೀರ್ ಅಹಮ್ಮದ್ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳು, ವೃತ್ತಗಳಲ್ಲಿ ಹಸಿರು ಬಟ್ಟೆ ತೋರಣ ಕಟ್ಟಿ ಸಿಂಗಾರ. ರಾತ್ರಿ ವೇಳೆ ಆಕರ್ಷಕ ದೀಪಗಳನ್ನು ಹಾಕಲಾಗಿದೆ ಮಸೀದಿಯ ಮಿನಾರುಗಳು ರಾತ್ರಿ ವೇಳೆ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾ ಮತ್ತು ಮದೀನದ ಪ್ರತಿಕೃತಿ ನೋಡುಗರ ಆಕರ್ಷಣೆ ಹೆಚ್ಚು ಮಾಡಿದೆ. ಇದರೊಂದಿಗೆ ಮೈಸೂರು ಸಂಸ್ಥಾನದ ರಾಜ ಟಿಪ್ಪು ಸುಲ್ತಾನ್ ಖಡ್ಗ ಹಿಡಿದ ಮಾದರಿಯ ಪ್ರತಿಕೃತಿ ಜಗಮಗಿಸುವ ಲೈಟಿಂಗ್ಸ್ ಮಧ್ಯೆ ಕಂಗೊಳಿಸುತ್ತಿದೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ.
ಈದ್ ಮಿಲಾದ್ ಹಬ್ಬಕ್ಕೆ ಊರಿಗೆ ಹೊರಟವನು ಹೆಣವಾದ: ಆತ ಸತ್ತು 24 ಗಂಟೆಗಳಲ್ಲೇ ಕೊಲೆಗಾರನೂ ಆತ್ಮಹತ್ಯೆಗೆ ಶರಣಾದ!