ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ಅವಿರತ ಪ್ರಯತ್ನವಿರಲಿ: ರಿಷಬ್‌ ಶೆಟ್ಟಿ

By Kannadaprabha News  |  First Published Aug 28, 2023, 8:21 AM IST

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಮಾರೋಪ ಸಮಾರಂಭ ಕಾವೇರಿ ವನ್ಯಜೀವಧಾಮದ ತಟದ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿತು. 


ಕನಕಪುರ (ಆ.28): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಸಮಾರೋಪ ಸಮಾರಂಭ ಕಾವೇರಿ ವನ್ಯಜೀವಧಾಮದ ತಟದ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿತು. ಸಮಾರಂಭಕ್ಕೆ ಅಭಿಯಾನದ ರಾಯಭಾರಿ, ಚಿತ್ರನಟ ರಿಷಬ್‌ ಶೆಟ್ಟಿ ಯಾದಿಯಾಗಿ ಗಣ್ಯರು, ಹಳ್ಳಿಗಾಡಿನ ಜನರು ಹಾಗೂ ಶಾಲಾ ಕಾಲೇಜು ಮಕ್ಕಳು ಸಾಕ್ಷಿಯಾದರು. ಇದೇ ವೇಳೆ ಅಭಿಯಾನದ ಅಂಗವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ಜನರೊಟ್ಟಿಗೆ ಸಂವಾದವೂ ಜರುಗಿತು. ಅಭಿಯಾನದ ನಾಲ್ಕನೇ ಆವೃತ್ತಿಯ ಸಮಾರೋಪ ಸಮಾರಂಭವನ್ನು ಚಿತ್ರನಟ ರಿಷಬ್‌ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವನ್ಯಜೀವಿ-ಮಾನವ ಸಂಘರ್ಷವೂ ನಿರಂತರವಾಗಿದ್ದು, ಇದರ ಪರಿಹಾರಕ್ಕೆ ಅವಿರತ ಪ್ರಯತ್ನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಂದಿಗ್ಧತೆಯಲ್ಲಿ ರೈತ: ರೈತರನ್ನು ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ಇಂದು ರೈತನ ಬೆನ್ನೆಲುಬು ನೋವಿನಿಂದಲೇ ಕುಗ್ಗಿಹೋಗಿದೆ. ಒಂದೆಡೆ ಮಳೆ ಕೊರತೆಯಿಂದ ಬೆಳೆ ಬೆಳೆಯಲು ರೈತ ಪರಿತಪಿಸಿದರೆ, ಇನ್ನೊಂದೆಡೆ ಉತ್ತಮ ಮಳೆ ಬಂದು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳು ತಿಂದು ನಾಶಪಡಿಸುತ್ತಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತ ನರಳುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

Tap to resize

Latest Videos

ದೇವೇಗೌಡರ ಬದುಕಿನ ತಪಸ್ಸಿಗೆ ಫಲ ಸಿಗಲಿದೆ: ನಿರ್ಮಲಾನಂದನಾಥ ಶ್ರೀ

ಎಲ್ಲೆಡೆ ಸಮಸ್ಯೆ ಒಂದೇ: ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ನಾವು ವಿವಿಧ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ರೈತರು, ಅರಣ್ಯ ಇಲಾಖೆ ಸಿಬ್ಬಂದಿಯೊಂದಿ ಗೆ ಚರ್ಚೆ ನಡೆಸಿದ್ದೇವೆ. ಆ ಊರುಗಳು ಬೇರೆ ಬೇರೆ ಇರಬಹುದು ಆದರೆ, ಎಲ್ಲ ಕಡೆ ಇರುವ ಸಮಸ್ಯೆಗಳು ಬಹುತೇಕ ಒಂದೇ ರೀತಿಯವು ಎಂದ ಅವರು, ರೈತ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ಷಣಾರ್ಧಲ್ಲಿ ಪ್ರಾಣಿಗಳು ನಾಶ ಪಡಿಸುತ್ತಿವೆ. ಇನ್ನು, ರೈತರ ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಈ ನಿಟ್ಟಿನಲ್ಲಿ ಬೆಳೆ ನಷ್ಟಅನುಭವಿಸಿದ ರೈತರಿಗೆ ಮಾರುಕಟ್ಟೆದರದಂತೆ ಪರಿಹಾರ ನೀಡಬೇಕಿದೆ ಎಂದವರು ಪ್ರತಿಪಾದಿಸಿದರು.

ಇದಲ್ಲದೆ, ವಿದ್ಯುತ್‌ ಕಣ್ಣಾಮುಚ್ಚಾಲೆಯೂ ರೈತನ ಪ್ರಮುಖ ಸಮಸ್ಯೆಯಾಗುತ್ತಿದೆ. ಇಂಥವೇ ಹತ್ತು ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, 22 ಅಂಶಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಸರಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಪರಿಹಾರಕ್ಕೆ ಕೈಜೋಡಿಸಿ: ಕಾವೇರಿ ವನ್ಯಜೀವಿ ವಲಯದಲ್ಲಿ ಇಂದು ಸಮೃದ್ಧಿಯಾದ ಅರಣ್ಯ ಸಂಪತ್ತು ಕಾಣಲು ಸಿಗುತ್ತಿದೆ ಎಂದರೆ ಅರಣ್ಯ ಇಲಾಖೆಯಷ್ಟೇ ಕಾಡಂಚಿನ ರೈತರೂ ಇದಕ್ಕೆ ಕಾರಣರಾಗಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಲ್ಪಿಸುವುದು ಬರೀ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಂಸದ ಸುರೇಶ್‌ ತಿಳಿಸಿದರು. ಈ ಸಮಸ್ಯೆಯನ್ನು ಸರ್ಕಾರ ಒಂದರಿಂದಲೇ ಬಗೆಹರಿಸಲು ಸಾಧ್ಯವಿಲ್ಲ, ರೈತರು, ಅರಣ್ಯ ಇಲಾಖೆಯ ಜೊತೆಗೆ ಸ್ವಯಂ ಸೇವಾಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

‘ಏಷ್ಯಾನೆಟ್‌’ಉತ್ತಮ ಕಾರ‍್ಯ: ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಅಭಿಪಾಯಪಟ್ಟರು. ಕಾಡಂಚಿನ ರೈತರ ಕಷ್ಟವನ್ನ ಅರಿಯಲು ಕಾಡಂಚಿನ ಗ್ರಾಮಕ್ಕೆ ಬಂದು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಕಷ್ಟವನ್ನು ಆಲಿಸುವುದರ ಜೊತೆಗೆ ಕಂಡು ಕೊಳ್ಳಬೇಕಾದ ಪರಿಹಾರದ ಬಗ್ಗೆ ಬೆಳಕು ಚೆಲ್ಲುವಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

ಪ್ರಕೃತಿ ಇರೋವರೆಗೂ‘ಸಂಘರ್ಷ’: ಮಾನವ-ವನ್ಯಜೀವಿ ಸಂಘರ್ಷವನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲ. ಪ್ರಕೃತಿ ಇರುವವರೆಗೆ ಈ ಸಮಸ್ಯೆ ಇರುತ್ತದೆ. ಆದರೆ, ಸಮಸ್ಯೆಯ ಕುರಿತು ಕೊರಗದೇ, ಸಮಸ್ಯೆಯನ್ನು ದೂಷಿಸದೇ ಸಹಬಾಳ್ವೆ ಮಾಡಬೇಕು ಎನ್ನುವುದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ವನ್ಯಜೀವಿ ಸಂರಕ್ಷಣಾ ಅಭಿಯಾನದ ಮೂಲ ಉದ್ದೇಶ ವಾಗಿದೆ ಎಂದು ಕನ್ನಡಪ್ರಭ ಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.

ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ಸಮಾರಂಭದಲ್ಲಿ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣೆಯ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆಯ ಸಹಯೋಗದೊಂದಿಗೆ ಅಭಿಯಾನ ನಡೆಸಿ ಕೊಂಡು ಬರಲಾಗುತ್ತಿದೆ. ಈ ವೇಳೆ ಕಂಡು ಬಂದ ಸಮಸ್ಯೆಗಳು ಹಾಗೂ ಸಲಹೆಗಳನ್ನು, ಪ್ರಮುಖ ಅಂಶಗಳನ್ನು ಕ್ರೋಢಿಕರಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದರು.

click me!