ED Raids: ಆನ್‌ಲೈನ್‌ ಗೇಮಿಂಗ್‌ ಹೆಸರಲ್ಲಿ ಭಾರೀ ಮೋಸ; ಗೇಮ್ಸ್‌ ಕ್ರಾಫ್ಟ್‌ ಮೇಲೆ ಇ.ಡಿ ದಾಳಿ, ₹526 ಕೋಟಿ ವಶಕ್ಕೆ

Kannadaprabha News   | Kannada Prabha
Published : May 15, 2026, 04:22 AM IST
ED Raid on Gameskraft

ಸಾರಾಂಶ

ED raids Gameskraft seizes Rs 526 crore ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡಿದ ಆರೋಪದ ಮೇಲೆ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಧಿಕಾರಿಗಳು 526 ಕೋಟಿ ರು. ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ. 

  • ಆನ್‌ಲೈನ್‌ ಗೇಮಿಂಗ್‌ ಹೆಸರಲ್ಲಿ ಭಾರಿ ಮೋಸ
  • ಇತ್ತೀಚೆಗೆ ಮೂವರನ್ನು ಬಂಧಿಸಿದ್ದ ತನಿಖಾ ದಳ

ಬೆಂಗಳೂರು (ಮೇ.15): ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಭಾರಿ ಮೋಸ ಮಾಡಿದ್ದ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಕಂಪನಿಯ ಮೂವರನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ ಮತ್ತು 11 ಲಕ್ಷ ನಗದು ಸೇರಿ 526.49 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ.

ಆನ್‌ಲೈನ್‌ ರಮ್ಮಿ ಗೇಮಿಂಗ್‌ ಸಂಸ್ಥೆಗೆ ದೇಶಾದ್ಯಂತ 3 ಕೋಟಿ ಬಳಕೆದಾರರಿದ್ದಾರೆ. ರಿಯಲ್‌ ಮನಿ ಗೇಮಿಂಗ್‌ ನಿಷೇಧವಿರುವ ರಾಜ್ಯಗಳಲ್ಲೂ ಸೇವೆ ನೀಡಿದೆ. ಆದರೆ ಬಾಟ್‌ಗಳ ವಿರುದ್ಧ ಆಡಿ ₹1154 ಕೋಟಿ ಹಣವನ್ನು ಬಳಕೆದಾರರು ಕಳೆದುಕೊಂಡಿದ್ದರು. ಹೀಗಾಗಿ ಇ.ಡಿ. ತನಿಖೆ ನಡೆಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bidadi Ai City: ಜೆಡಿಎಸ್‌ಗೆ ಸೇರಿದ್ಮೇಲೆ 9000 ಫಲವತ್ತಾದ ಎಕರೆ ಗುಳುಂ ವಿಷಯಕ್ಕೆ ಬಂದ ಬಿಗ್‌ ಬಾಸ್‌ ಜಾನ್ವಿ!
ರೈತನ ಬೆಳೆದ ಜೋಳದ ಫಸಲಿನ ₹17 ಸಾವಿರ ಹಣ ಜಮೀನಲ್ಲೇ ಕಳೆದೋಯ್ತು; 4 ತಿಂಗಳ ಬಳಿಕ ಮಣ್ಣಲ್ಲಿ ಸಿಕ್ತು ನೋಟಿನ ಕಂತೆ!