ಕೇರಳದ ಚಿನ್ನದ ವ್ಯಾಪಾರಿ ಮೇಲೆ ಇಡಿ ದಾಳಿ, ಈತನ ಕಾರ್‌ ಮೇಲೆ ಕರ್ನಾಟಕ ಶಾಸಕ ಎನ್‌ಎ ಹ್ಯಾರಿಸ್‌ ಸ್ಟಿಕ್ಕರ್‌!

By Santosh NaikFirst Published Mar 20, 2024, 6:39 PM IST
Highlights

ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮದ್‌ ಹಫೀಜ್‌ಗೆ ಸಂಬಂಧಪಟ್ಟ 9 ಸ್ಥಳಗಳ ಮೇಲೆ ಇಡಿ ಬುಧವಾರ ದಾಳಿ ನಡೆಸಿದೆ. ಈ ವೇಳೆ ಕರ್ನಾಟಕದ ಶಾಂತಿನಗರ ಎಂಎಲ್‌ಎ ಎನ್‌ಎ ಹ್ಯಾರಿಸ್‌ಗೆ ಸಂಬಂಧಪಟ್ಟ ಕಾರ್‌ನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ಎನ್ನುವ ವಿಚಾರ ಬಹಿರಂಗವಾಗಿದೆ.
 


ನವದೆಹಲಿ (ಮಾ.20): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೊಚ್ಚಿ ವಲಯದ ಜಾರಿ ನಿರ್ದೇಶನಾಲಯ ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮದ್‌ ಹಫೀಜ್‌ಗೆ ಸಂಬಂಧಪಟ್ಟ ಕರ್ನಾಟಕ, ಕೇರಳ ಹಾಗೂ ಗೋವಾದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ. ಮಾರ್ಚ್‌ 14, 15 ಹಾಗೂ 16 ರಂದು ಮೊಹಮದ್‌ ಹಫೀಜ್‌ ಹಾಗೂ ಇತರರ ವಿರುದ್ಧ ದಾಳಿ ನಡೆದಿತ್ತು. ಶೋಧ ಕಾರ್ಯ ನಡೆಸುವ ವೇಳೆ 1 ಕೆಜಿ 672 ಗ್ರಾಂ ಚಿನ್ನ, 12 ಲಕ್ಷ ಮೌಲ್ಯದ 7 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಅದರೊಂದಿಗೆ ಬ್ಯಾಂಕ್‌ ಖಾತೆಗಳಲ್ಲಿದ್ದ 4.4 ಕೋಟಿ ಹಣವನ್ನು ಇಡಿ ಫ್ರೀಜ್‌ ಮಾಡಿದೆ. ಅದರೊಂದಿಗೆ ವಿವಿಧ ದಾಖಲೆಗಳನ್ನೂ ಇಡಿ ವಶಪಡಿಸಿಕೊಂಡಿದೆ.

ಇನ್ನು ಮೊಹಮದ್‌ ಹಫೀಜ್‌ ಕುರಿತಾದ ಶೋಧ ಕಾರ್ಯಾಚರಣೆಯ ವೇಳೆ ಮಹತ್ವದ ಬೆಳವಣಿಗೆ ಆಗಿದೆ ಎಂದೂ ಇಡಿ ತಿಳಿಸಿದೆ.  ಕರ್ನಾಟಕ ವಿಧಾನಸಭೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕರಾಗಿರುವ ಎನ್‌ಎ ಹ್ಯಾರಿಸ್‌ ಅವರಿಗೆ ನೀಡಲಾದ  ಅಧಿಕೃತ ಪ್ರೊಟೊಕಾಲ್ ಸ್ಟಿಕ್ಕರ್ ಪತ್ತೆಯಾಗಿದೆ. ಕರ್ನಾಟಕ ವಿಧಾನಸಭೆಯಿಂದ ಶಾಸಕರಿಗೆ ನೀಡಿರುವ ಸ್ಟಿಕ್ಕರ್‌ ಇದಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ, ಎನ್‌ಎ ಹ್ಯಾರಿಸ್‌ ಅವರ ಪುತ್ರನಾಗಿರುವ ಮೊಹಮದ್‌ ನಲಪಾಡ್‌ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದು, ಅದನ್ನು ಎನ್‌ಎ ಹ್ಯಾರಿಸ್‌ ಅವರ ಆಪ್ತ ಸಂಬಂಧಿಯಾಗಿರುವ ನಫೀಹಾ ಮೊಹಮದ್‌ ನಾಸಿರ್‌ ಹೆಸರಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಮೊಹಮದ್‌ ಹ್ಯಾರಿಸ್‌ ನಲಪಾಡ್‌ ಪ್ರಸ್ತುತ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದಾರೆ. ದಾಳಿಗೊಳಗಾದ ಮೊಹಮ್ಮದ್ ಹಫೀಜ್ ನಲಪಾಡ್ ಆಪ್ತ ಸ್ನೇಹಿತ ಎಂದೂ ಇಡಿ ತಿಳಿಸಿದೆ. ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಡಿ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪ; ನಲಪಾಡ್‌ ವಿರುದ್ಧದ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌

ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕಾರ್‌ಅನ್ನು ಖರೀದಿ ಮಾಡಿದ್ದಾರೆ.  ಇದನ್ನು ನಫಿ ಮೊಹಮ್ಮದ್ ನಸೀರ್ ಹೆಸರಲ್ಲಿ ನೋಂದಣಿ ಮಾಡಲಾಗಿದೆ. ಈನಫಿ ಮೊಹಮದ್‌ ನಸೀರ್‌ ಎನ್‌ಎ ಹ್ಯಾರಿಸ್‌ಗೆ ಬಹಳ ಆಪ್ತ ಸಂಬಂಧಿಯಾಗಿದ್ದಾರೆ. ವಂಚನೆ ಪ್ರಕರಣದಲ್ಲಿ ದಾಳಿ ಮಾಡಲಾಗಿತ್ತು. ವಂಚನೆ ಬಗ್ಗೆ ಕೇರಳ, ಕರ್ನಾಟಕ ಹಾಗೂ ಗೋವಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಹಫೀಜ್ ಹಾಗೂ ಆತನ ಸಹಚರರ ವಿರುದ್ಧ ದೂರು ದಾಖಲಾಗಿತ್ತು. ದುರ್ಬಳಕೆ, ದಾಖಲೆಗಳ ನಕಲು, ದಾಖಲೆಗಳ ತಯಾರಿ ಸೇರಿದಂತೆ ಹಲವು ಆರೋಪವನ್ನು ಹಫೀಜ್‌ ಮೇಲೆ ಹೊರಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪ: ನಲಪಾಡ್‌ ವಿರುದ್ಧದ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌

click me!