ಇಡಿ ಅಧಿಕಾರಿಗಳು ಮುಡಾ ಅಧ್ಯಕ್ಷರ ಕಚೇರಿಯಲ್ಲೇ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಮುಗಿಸಿದ್ದಾರೆ. ವೈಟ್ನರ್ ಹಾಕಿರುವ ಮೂಲ ದಾಖಲಾತಿಗಾಗಿ ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ. ಎಷ್ಟೇ ಹುಡುಕಿದರು ವೈಟ್ನರ್ ಮೂಲ ಪ್ರತಿ ಸಿಗುತ್ತಿಲ್ಲ.
ಮೈಸೂರು(ಅ.18): ಮುಡಾ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಇಂದು(ಶುಕ್ರವಾರ) ಬೆಳಗ್ಗೆ 11 ಗಂಟೆಯಿಂದ ನಿರಂತರವಾಗಿ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಸತತ 12 ಗಂಟೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಇಡಿ ಅಧಿಕಾರಿಗಳು ಮುಡಾ ಅಧ್ಯಕ್ಷರ ಕಚೇರಿಯಲ್ಲೇ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಮುಗಿಸಿದ್ದಾರೆ. ವೈಟ್ನರ್ ಹಾಕಿರುವ ಮೂಲ ದಾಖಲಾತಿಗಾಗಿ ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ. ಎಷ್ಟೇ ಹುಡುಕಿದರು ವೈಟ್ನರ್ ಮೂಲ ಪ್ರತಿ ಸಿಗುತ್ತಿಲ್ಲ.
ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ, ಗೌರವಯುತವಾಗಿ ರಾಜೀನಾಮೆ ಕೊಡಲಿ: ವಿಜಯೇಂದ್ರ
ತಹಸಿಲ್ದಾರ್ ಕಚೇರಿಯಲ್ಲೂ ಪರಿಶೀಲನಾ ಕಾರ್ಯ ಮುಂದುವರೆದಿದೆ. ವೈಟ್ನರ್ ಹಿಂದಿರುವ ಅಕ್ಷರಗಳ ಪತ್ತೆಹಚ್ಚಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ವೈಟ್ನರ್ ಮೂಲ ದಾಖಲಾತಿ ಪತ್ತೆಯಾದ್ರೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ಸಂಕಷ್ಟ ಗ್ಯಾರಂಟಿ ಎಂದು ಹೇಳಲಾಗುತ್ತದೆ.