ದೀಪಾವಳಿ ಸಮಯದಲ್ಲಿ ಪೊಲೀಸ್‌ ಕುಟುಂಬಕ್ಕೆ ಗುಡ್‌ನ್ಯೂಸ್‌ ನೀಡಿದ ಸರ್ಕಾರ

Published : Oct 18, 2024, 08:14 PM ISTUpdated : Oct 18, 2024, 08:15 PM IST
ದೀಪಾವಳಿ ಸಮಯದಲ್ಲಿ ಪೊಲೀಸ್‌ ಕುಟುಂಬಕ್ಕೆ ಗುಡ್‌ನ್ಯೂಸ್‌ ನೀಡಿದ ಸರ್ಕಾರ

ಸಾರಾಂಶ

ದೀಪಾವಳಿ ಹಬ್ಬದ ಸಮಯದಲ್ಲಿ ರಾಜ್ಯದಲ್ಲಿರುವ ಪೊಲೀಸ್‌ ಕುಟುಂಬಗಳಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯ ಪೊಲೀಸರ ಗುಂಪು ವಿಮಾ ಯೋಜನೆಯ ಮೊತ್ತವನ್ನು ಏರಿಕೆ ಮಾಡಿ ಆದೇಶ ನೀಡಿದೆ.

ಬೆಂಗಳೂರು (ಅ.18): ದೀಪಾವಳಿ ಸಮಯದಲ್ಲಿ ರಾಜ್ಯ ಪೊಲೀಸ್‌ ಕುಟುಂಬಗಳಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯ ಪೊಲೀಸರಿಗೆ ಇದ್ದ ವಿಶೇಷ ಗುಂಪು ವಿಮಾ ಯೋಜನೆ ಮೊತ್ತ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಲ್ಲಿಯವರೆಗೂ ಗುಂಪು ವಿಮಾನ ಯೋಜನೆಯ ಮೊತ್ತ 20 ಲಕ್ಷ ರೂಪಾಯಿ ಆಗಿತ್ತು. ಈಗ ಈ ಮೊತ್ತವನ್ನು 50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕರ್ತವ್ಯದಲ್ಲಿ ಇರುವಾಗ ಪೊಲೀಸರು ಆಕಸ್ಮಿಕವಾಗಿ/ ಅಪಘಾತದಲ್ಲಿ ಮೃತಪಟ್ಟರೆ ನೀಡುವ ವಿಮಾ ಮೊತ್ತ ಇದಾಗಿದೆ. ಫಾಲೋವರ್, ಪಿಸಿಯಿಂದ ಡಿಜಿ & ಐಜಿಪಿವರೆಗೆ ವಿಮಾ ಯೋಜನೆ ಅನ್ವಯವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗ ಚಾಲ್ತಿಯಲ್ಲಿರುವ ಗುಂಪು ವಿಮಾನ ಯೋಜನೆ ಅಕ್ಟೋಬರ್‌ 10ಕ್ಕೆ ಮುಕ್ತಾಯಗೊಂಡಿದೆ.ಅಕ್ಟೋಬರ್‌ 11 ರಿಮದ ಅನ್ವಯವಾಗುವಂತೆ ರಾಜ್ಯ ಎಲ್ಲಾ ಪೊಲೀಸ್‌ ಅಧಿಕಾರಿಗಳು ಆಕಸ್ಮಿಕವಾಗಿ/ ಅಪಘಾತದಲ್ಲಿ ಮೃತಪಟ್ಟರೆ, ಮೃತರ ಕುಟುಂಬಕ್ಕೆ ವಿಶೇಷ ಗುಂಪು ವಿಮಾನ ಮೊತ್ತ 50 ಲಕ್ಷ ರೂಪಾಯಿಯನ್ನು ನೇರವಾಗಿ ಇಲಾಖೆಯಿಂದಲೇ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಸ್ವಾಭಾವಿಕ ಮರಣಗಳಾದ ಕಾಯಿಲೆ, ಹೃದಯಾಘಾತ ಹಾಗೂ ಆತ್ಮಹತ್ಯೆಯಂಥ ಪ್ರಕರಣಗಳನ್ನು ಇದರಲ್ಲಿ ಹೊರತುಪಡಿಸಲಾಗಿದೆ.

ಮೀಲ್‌ ಕೂಪನ್‌ ಅನ್ನು ಟೂಥ್‌ಪೇಸ್ಟ್‌, ಡಿಟರ್ಜಂಟ್‌ ಖರೀದಿಸಲು ಬಳಕೆ, 24 ಉದ್ಯೋಗಿಗಳ ವಜಾ ಮಾಡಿದ ಮೆಟಾ!

ಘಟಕಾಧಿಕಾರಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯನ್ನು ಈ-ಮೇಲ್‌/ಫ್ಯಾಕ್ಸ್‌ ssactco@ksp.gov.in ಮೂಲಕ ಅಥವಾ ಖುದ್ದಾಗಿ ನಿಗದಿತ ಸಮಯದೊಳಗೆ ನೀಡಬೇಕಿರುತ್ತದೆ. ಕ್ಲೈಮ್‌ಗೆ ಸಂಬಂಧಿಸಿದಂತೆ ಪ್ರಕರಣವು ಅರ್ಹ ಪ್ರಕರಣವೇ ಎಂಬ ಬಗ್ಗೆ ಪರಿಶೀಲಿಸಿ, ಸಂಪೂರ್ಣ ಮಾಹಿತಿಯನ್ನು ಮೇಲಧಿಕಾರಿಗಳ ಶಿಫಾರಸಿನೊಂದಿಗೆ ಅಗತ್ಯ ದಾಖಲೆಗಳನ್ನು 30 ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ನಿಗದಿತ ಸಮಯದಲ್ಲಿ ಸಲ್ಲಿಕೆ ಮಾಡದೇ ವಿನಾ ಕಾರಣ ವಿಳಂಬ ಮಾಡಿದಲ್ಲಿ ಅದಕ್ಕೆ ಘಟಕಾಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ.

54 ರೂಪಾಯಿ ಷೇರಿನಿಂದ ಅಮೀರ್‌ ಖಾನ್‌ ಗಳಿಸಿದ್ದು 72 ಲಕ್ಷ!‌ ಶಾರುಖ್‌-ಸಲ್ಮಾನ್‌ ಮಾಡಿಕೊಂಡಿರೋ ಲಾಭವೆಷ್ಟು?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ