ವಿಜಯನಗರ ಜಿಲ್ಲೆಯಲ್ಲಿ ಭೂಕಂಪ: ರಿಕ್ಟರ್‌ ಮಾಪಕದಲ್ಲಿ ದಾಖಲು

By Sathish Kumar KH  |  First Published Mar 28, 2023, 7:32 PM IST

ಅಯ್ಯನಹಳ್ಳಿಯಲ್ಲಿ ಸಂಭವಿಸಿದ ಭೂಕಂಪನ ತೀವ್ರತೆ ಕಡಿಮೆ
ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಅನುಭವ
ಜನರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಡಳಿತ ಮನವಿ


ವಿಜಯನಗರ (ಮಾ.28): ಇತ್ತೀಚೆಗೆ ದೆಹಲಿ, ನಾಗಪುರದಲ್ಲಿ ಭೂಕಂಪ ಸಂಭವಿಸಿ ದೇಶದ ಜನರು ಆತಂಕಗೊಂಡಿದ್ದರು. ಕರ್ನಾಟಕದಲ್ಲಿ ಭೂಕಂಪದ ಆಗುವುದಿಲ್ಲವೆಂದು ನಿಶ್ಚಿಂತೆಯಿಂದ ಜನತೆಗೆ ಮಧ್ಯ ಕರ್ನಾಟಕದ ಭಾಗವಾದ ವಿಜಯನಗರ ಜಿಲ್ಲೆ ಡಣಾಪುರ ಗ್ರಾಮದಲ್ಲಿ ಭೂಕಂಪನ ಉಂಟಾಗಿದ್ದು, ಆತಂಕ ಶುರುವಾಗಿದೆ.

ಹೌದು, ವಿಜಯನಗರ ಜಿಲ್ಲೆಯಲ್ಲಿ ಭೂಕಂಪ ಆಗಿರುವ ಬಗ್ಗೆ ರಿಕ್ಟರ್‌ ಮಾಪನದಲ್ಲಿ ವರದಿ ಆಗಿದೆ. ಭೂಕಂಪ ಸಂಭವಿಸಿದ ಬಗ್ಗೆ ರಿಕ್ಟರ್ ಮಾಪನದಲ್ಲಿಯೂ ದಾಖಲಾಗಿದೆ. ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನ ಸಂಭವಿಸಿದೆ ಎಂದು ರಿಕ್ಟರ್ ಮಾಪನದಲ್ಲಿ ದಾಖಲು ಆಗಿದೆ. ಅಯ್ಯನಹಳ್ಳಿ ಭೂಕಂಪನ ಕೇಂದ್ರದಿಂದ 15 ರಿಂದ 20 ಕಿಮೀ ಸುತ್ತಳತೆ ಪ್ರದೇಶ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

Tap to resize

Latest Videos

undefined

Breaking ದೆಹಲಿಯಲ್ಲಿ ಮತ್ತೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲು!

ಭೂಕಂಪನದ ತೀವ್ರತೆ ಕಡಿಮೆ: ಇನ್ನು ರಾಜ್ಯದ ಹೊಸಪೇಟೆ ತಾಲೂಕಿನಲ್ಲಿ ನಡೆದ ಭೂಕಂಪನದ ತೀವ್ರತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಇನ್ನು ಭೂಮಿಯ ಮೇಲ್ಭಾಗವೂ ಕೂಡ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಅನುಭವ ಉಂಟಾಗಿದೆ. ಇದರಿಂದ ಜನರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಈಗ ಯಾವುದೇ ಸಮಸ್ಯೆ ಆಗಿಲ್ಲ ಎಂದು ವಿಜಯನಗರ ಜಿಲ್ಲಾಡಳಿತವು ಗ್ರಾಮಸ್ಥರು ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಮಾಹಿತಿಯನ್ನು ನೀಡಿದೆ.

ಬಂಜಾರ ಸಮುದಾಯದಿಂದ ಪ್ರತಿಭಟನೆ: ಇನ್ನು ರಾಜ್ಯದಲ್ಲಿ ಗೊಂದಲ ವಿಚಾರವಾಗಿರುವ ಒಳಮೀಸಲಾತಿ ಕುರಿತಂತೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಬಂಜಾರ ಸಮುದಾಯದಿಂದ ಪ್ರತಿಭಟನೆ ಮಾಡಲಾಯಿತು. ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಕೂಗಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ತಹಶಿಲ್ದಾರರ ಕಚೇರಿಯವರೆಗೆ ಬೃಹತ್ ಮೆರವಣಿಗೆ ಮಾಡಲಾಯಿತು. ಬಂಜಾರ ಪೀಠದ ಶ್ರೀ ಸೇವಾಲಾಲ್ ಮಹಾರಾಜ್ ಸೇರಿದಂತೆ, ಬಂಜಾರ ಸಮುದಾಯದ ಸ್ವಾಮೀಜಿಗಳು ಭಾಗಿಯಾಗಿದ್ದರು. ಬಂಜಾರ, ಭೋವಿ, ಕೊರಚ, ಕೊರಮ ಜನಾಂಗಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ರ್ಯಾಲಿಗೆ ಸಮಸ್ಯೆ ಆಗದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಇರಾನ್‌ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಭೂಕಂಪ: 165 ಮಂದಿಗೆ ಗಾಯ

ಮಾ.21ರಂದು ದೆಹಲಿಯಲ್ಲಿ ಪ್ರಭಲ ಭೂಕಂಪ: ರಿಕ್ಟರ್‌ ಮಾಪಕದಲ್ಲಿ 6.6ರಷ್ಟುಭಾರೀ ತೀವ್ರತೆ ಹೊಂದಿದ್ದ ಭೂಕಂಪವೊಂದು ಮಂಗಳವಾರ ರಾತ್ರಿ (ಮಾ.21) ಸಂಭವಿಸಿತ್ತು. ಭೂಕಂಪನದ ಕೇಂದ್ರಬಿಂದು ಆಷ್ಘಾನಿಸ್ತಾನದ ಹಿಂದುಕುಷ್‌ ಪರ್ವತದಲ್ಲಿತ್ತು ಎಂದು ಮೂಲಗಳು ತಿಳಿಸಿವೆ. ಭೂಕಂಪ ಭಾರೀ ತೀವ್ರತೆ ಹೊಂದಿದ್ದ ಕಾರಣ ಅದರ ಅನುಭವ ನೆರೆಹೊರೆಯ ದೇಶಗಳಾದ ತುರ್ಕೇಮೇನಿಸ್ತಾನ, ಭಾರತ, ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಆಷ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಆಗಿದೆ. ಮಂಗಳವಾರ ರಾತ್ರಿ 10.17ರ ವೇಳೆಗೆ ಭೂಕಂಪ ಸಂಭವಿಸಿದ್ದು, ಈ ವೇಳೆ ಮನೆ, ಕಚೇರಿಯೊಳಗಿದ್ದ ಸಾವಿರಾರು ಜನರು ಹೊರಗೆ ಓಡಿಬಂದು ರಸ್ತೆಯಲ್ಲಿ ಆತಂಕಿತರಾಗಿ ನಿಂತಿದ್ದ ದೃಶ್ಯಗಳು ದೆಹಲಿ, ಪಂಜಾಬ್‌, ಹರ್ಯಾಣ,ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಕಂಡುಬಂದಿತು. ಸುಮಾರು ಒಂದು ನಿಮಿಷಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.

click me!