ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಡಿವೈಎಸ್ಪಿ ಯಲಿಗಾರ್: ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ

Published : Jul 01, 2025, 12:40 PM IST
dysp yaligar

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳನ್ನ ರಚಿಸಿದ್ದರು. ಅಂತಹ ವಚನಗಳನ್ನ ವಿಜಯಪುರ ವಿಭಾಗದ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದಾರೆ.

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.01): ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಭೀಮಾತೀರದ ಕುಖ್ಯಾತಿ ಹೊಂದಿರುವ ಜಿಲ್ಲೆ. ಇಲ್ಲಿನ ಪೊಲೀಸರಿಗೆ ಅಪರಾಧ ತಡೆಯೋದೆ ದೊಡ್ಡ ಕೆಲಸ. ರಾತ್ರಿ ಹಗಲು ಎನ್ನದೆ ಕೆಲಸ ಮಾಡಬೇಕು. ಅಂತಹ ಜಿಲ್ಲೆಯ ಪೊಲೀಸ್ ಅಧಿಕಾರಿ ಸದ್ದಿಲ್ಲದೆ ಬಸವಣ್ಣನ ವಚನಗಳು ವಿಶ್ವಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ.

ಲಾಠಿ ಹಿಡಿಯೋ ಕಯ್ಯಲ್ಲಿ ಪೆನ್ನು ; ವಚನಗಳ ಇಂಗ್ಲಿಷ್‌ಗೆ ಭಾಷಾಂತರ..!
ವಿಜಯಪುರ ಜಿಲ್ಲೆ ಅಂದ್ರೆ ಸಾಕು ಕ್ರೈಂ ಜಿಲ್ಲೆ ಅನ್ನುವಂತಹ ಪರಿಸ್ಥಿತಿಯಲ್ಲಿದೆ. ಇಲ್ಲಿನ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋದು ದೊಡ್ಡ ಸವಾಲು. ಅಂತಹ ಸವಾಲಿನ ಕೆಲಸದ ನಡುವೇಯೆ ಜಿಲ್ಲೆಯ ಪೊಲೀಸ್ ಅಧಿಕಾರಿ ಮಾಡಿರುವ ಕಾರ್ಯ ವಿಶ್ವಗುರು ಬಸವಣ್ಣನ ಭಕ್ತರಿಗೆ ಸಂತಸ ತರಿಸಿದೆ. 12ನೇ ಶತಮಾನದಲ್ಲಿ ಬಸವಣ್ಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳನ್ನ ರಚಿಸಿದ್ದರು. ಅಂತಹ ವಚನಗಳನ್ನ ವಿಜಯಪುರ ವಿಭಾಗದ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದಾರೆ. 808 ಪುಟಗಳ ಈ ಪುಸ್ತಕದಲ್ಲಿ ಬಸವಣ್ಣನವರ 959 ಷಟಸ್ಥಲ ವಚನಗಳು ಹಾಗೂ ಅಷ್ಣಾವರ್ಣ ಕೂಡಾ ಬರೆಯಲಾಗಿದೆ.

ಷಟಸ್ಥಲ ವಚನಗಳ ತರ್ಜುಮೆ ; ಡಿವೈಎಸ್ಪಿ ಎಲಿಗಾರರ ಪ್ರಥಮ ಹೆಜ್ಜೆ..!
ದೇಶದಲ್ಲಿ ಈವರೆಗೆ ಹಲವರು ಆಯ್ದೆ ಕೆಲ ವಚನಗಳನ್ನ ಮಾತ್ರ ಇಂಗ್ಲಿಷ್ ಸೇರಿದಂತೆ ‌ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯೊಬ್ಬರು 959 ಷಟಸ್ಥಲ ವಚನಗಳನ್ನು ಇಂಗ್ಲಿಷ್ ಗೆ ಅನುವಾಧಿಸಿದ್ದಾರೆ. ಇದು ಬಸವಣ್ಣವರ ಅನುಯಾಯಿಗಳಿಗೆ ಸಂತಸ ತಂದಿದೆ.

ಸಚಿವರು, ಮಠಾಧೀಶರಿಂದ ಪುಸ್ತಕ ಲೋಕಾರ್ಪಣೆ..!
ವಿಜಯಪುರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಚಿವ ಎಂಬಿ ಪಾಟೀಲ್ ಸೇರಿದಂತೆ ನಾಡಿನ ವಿವಿಧ ಮಠಾಧಿಶರು, ಬಸವ ಭಕ್ತರು ಸೇರಿದಂತೆ ಸಾವಿರಾರು ಜ‌ನ ಇದಕ್ಕೆ ಸಾಕ್ಷಿಯಾದರು. ಸತತ ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ ವಚನಗಳನ್ನ ಅನುವಾಧಿಸಿದಕ್ಕೆ ಜಿಲ್ಲೆಯ ಜನ ಅಭಿನಂದನೆ ಸಲ್ಲಿಸಿದರು.

ಜಗತ್ತಿನ ಮೂಲೆ ಮೂಲೆಗೆ ತಲುಪಲಿ ಅಣ್ಣನ ವಚನ..!
ಬಸವಣ್ಣನವರ ವಚನ ಕೇವಲ ಕರ್ನಾಟಕಕ್ಕೆ, ಭಾರತಕ್ಕೆ, ಸಿಮಿತವಾಗಿರದೆ ಜಗತ್ತಿಗೆ ತಲುಪಲು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟ ಮಾಡುವುದು ಅಗತ್ಯವಾಗಿತ್ತು. ಇದನ್ನ ಸಾಕಾರಾ ಮಾಡಿದ ಪೊಲೀಸ್ ಅಧಿಕಾರಿಗೆ ಸ್ವಾಮೀಜಿಗಳು ಹಾಗೂ ಸಚಿವರು ಧನ್ಯವಾದ ಸಲ್ಲಿಸಿದರು. ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡು ಬಸವಣ್ಣನ ವಿಚಾರಗಳನ್ನ ಇಂಗ್ಲಿಷ್ ಮೂಲಕ ಬೇರೆ ದೇಶದ ಜನರಿಗೆ ತಲುಪುವಂತೆ ಮಾಡಿದ್ದ ಬಸವಣ್ಣನ ತವರು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ‌ವಿಶ್ವಕ್ಕೆ ಬಸವ ವಚನ ತಲುಪಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌