ಸಾಹಿತಿ ಡಿ.ವಿ.ಗುಂಡಪ್ಪ ಅವರು ಹುಟ್ಟಿಬೆಳೆದ ಜಾಗವಾದ ಮುಳಬಾಗಿಲು ನಗರದ ಕುಂಬಾರಪಾಳ್ಯದಲ್ಲಿ ನಿರ್ಮಾಣವಾಗಿದ್ದ ‘ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯನ್ನು ದಾನಿಗಳ ನೆರವಿನಿಂದ .2.45 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದ್ದು, ಬುಧವಾರ ಲೋಕಾರ್ಪಣೆ ಮಾಡಲಾಯಿತು.
ಮುಳಬಾಗಿಲು (ಜು.06): ಸಾಹಿತಿ ಡಿ.ವಿ.ಗುಂಡಪ್ಪ ಅವರು ಹುಟ್ಟಿಬೆಳೆದ ಜಾಗವಾದ ಮುಳಬಾಗಿಲು ನಗರದ ಕುಂಬಾರಪಾಳ್ಯದಲ್ಲಿ ನಿರ್ಮಾಣವಾಗಿದ್ದ ‘ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯನ್ನು ದಾನಿಗಳ ನೆರವಿನಿಂದ .2.45 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದ್ದು, ಬುಧವಾರ ಲೋಕಾರ್ಪಣೆ ಮಾಡಲಾಯಿತು.
ಡಿವಿಜಿ ಅವರ ನೆನಪಿಗಾಗಿ ಅವರು ಹುಟ್ಟಿ ಬೆಳೆದ ಜಾಗವನ್ನು ಸರ್ಕಾರಿ ಶಾಲೆಗೆ ದಾನವಾಗಿ ನೀಡಲಾಗಿತ್ತು. ಅಲ್ಲಿದ್ದ ಹಳೆಯ ಸರ್ಕಾರಿ ಶಾಲೆ ಕಟ್ಟಡದ ಜಾಗದಲ್ಲಿ 10 ತರಗತಿ, 1 ಕಚೇರಿ, 1 ಸಿಬ್ಬಂದಿ ಕೊಠಡಿ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಗೋದಾಮು, ಅಡುಗೆ ಮನೆ, ಸಭಾಂಗಣವನ್ನೊಳಗೊಂಡ ಮೂರಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅನಿವಾಸಿ ಭಾರತೀಯರು ಅಮೆರಿಕದಲ್ಲಿ ಸ್ಥಾಪಿಸಿರುವ ಓಸ್ಸಾಟ್ ಸಂಸ್ಥೆ ಮೂಲಕ ಈ ಶಾಲೆ ಅಭಿವೃದ್ಧಿಪಡಿಸಿದ್ದು, ಶಾಸಕ ಸಮೃದ್ಧಿ ವಿ.ಮಂಜುನಾಥ್ ಅವರು ಲೋಕಾರ್ಪಣೆ ಮಾಡಿದ್ದಾರೆ.
undefined
ಅಧಿವೇಶನದ ಬಳಿಕ ಮೀಸಲಾತಿ ಗೊಂದಲ ಪರಿಹಾರ: ಸಿಎಂ ಸಿದ್ದರಾಮಯ್ಯ ಭರವಸೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಊರಿಗೊಂದು ಸರ್ಕಾರಿ ಶಾಲೆ ಇರಬೇಕು. ಆದರೆ ಬಹುತೇಕ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆ ತಲುಪಿ ಮೂಲ ಸೌಲಭ್ಯ ವಂಚಿತವಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದಿರುವುದೇ ಕಾರಣ ಎಂದರು. ಇದೇ ವೇಳೆ ಅವರು ಒಸ್ಸಾಟ್ ಸಂಸ್ಥೆಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಓಸ್ಸಾಟ್ ಸಂಸ್ಥೆಯ ಟ್ರಸ್ಟಿ ವಾದಿರಾಜ್ ಭಟ್ ಮಾತನಾಡಿ ಇದು ಡಿವಿಜಿ ಹೆಸರು ಉಳಿಸಲು, ಪರಂಪರೆ ಮುಂದುವರೆಸಲು ನೆರವಾಗುವ ಸ್ಮಾರಕ. ಎಲ್ಲರಿಗೂ ಮುಕ್ತ ಪ್ರವೇಶ ಹೊಂದಿರುವಂಥ ಡಿವಿಜಿ ಗ್ರಂಥಾಲಯ ಒಳಗೊಂಡ ಭವ್ಯಕಟ್ಟಡ. ಇದಕ್ಕೆ ಓಸ್ಸಾಟ್ ಸಂಸ್ಥೆಯ ಮಹಾದಾನಿಗಳು ಅಮೂಲ್ಯ ನೆರವು ಕೊಟ್ಟಿದ್ದಾರೆ ಎಂದರು.
ಬಿಜೆಪಿ ಕಚೇರಿಗೆ ಯುವ ‘ಕಾಂಗ್ರೆಸ್’ಪಡೆ ಮುತ್ತಿಗೆ ಯತ್ನ: ನಲಪಾಡ್ ನೇತೃತ್ವದಲ್ಲಿ ಧರಣಿ
ನಟ ರಮೇಶ್ ಅರವಿಂದ್ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪ್ಪ-ಮಕ್ಕಳಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಡಿ.ವಿ.ಗುಂಡಪ್ಪ, ಬಿಜಿಎಲ್ ಸ್ವಾಮಿ ಸಲ್ಲಿಸಿದ ಸೇವೆ ಅಮರ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ 945 ಎಫಿಸೋಡ್‌ಗಳನ್ನು ತೋರಿಸುವಷ್ಟುಆಗಾದವಾದ ಜ್ಞಾನ ಹೊಂದಿದೆ ಎಂದರು. ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ್, ಜಿಲ್ಲಾಧಿಕಾರಿ ಅಕ್ರಂ ಪಾಷಾ ಇತರರು ಇದ್ದರು.