ಬೋಯಿಂಗ್‌ನ ನೂತನ ಕ್ಯಾಂಪಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿದ್ದ ಭಾಷಣ ಮಾಡುವ ವೇಳೆ ಎಲ್ಲಾ ಪುಟಗಳು ಇಲ್ಲದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಬೆಂಗಳೂರು (ಜ.20): ಬೋಯಿಂಗ್‌ನ ನೂತನ ಕ್ಯಾಂಪಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿದ್ದ ಭಾಷಣ ಮಾಡುವ ವೇಳೆ ಎಲ್ಲಾ ಪುಟಗಳು ಇಲ್ಲದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಮೂರು ಪುಟಗಳ ಭಾಷಣವನ್ನು ಮಾಡುತ್ತಿದ್ದರು. ಒಂದು ಪುಟ ಮುಗಿಸಿದ ಬಳಿಕ ಮುಂದಿನ ಪುಟಕ್ಕೆ ತಿರುವಿದರು. ಆದರೆ, ಭಾಷಣದ ಮುಂದಿನ ಪ್ರತಿಗಳು ಇರಲಿಲ್ಲ. ಹೀಗಾಗಿ ‘ಇಲ್ಲಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್, ಜೈ ಕರ್ನಾಟಕ’ ಎಂದು ಹೇಳಿ ಭಾಷಣ ಮುಗಿಸಿದರು.
ಪ್ರಧಾನಿ ಮೋದಿ ಕಲಬುರಗಿಗೆ ಬಂದ್ರೂ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ!
ಮೋದಿ ಮೋದಿ ಕೂಗು, ಸಿದ್ದುರತ್ತ ಮೋದಿ ನೋಟ
ಪ್ರಧಾನಿ ಮೋದಿಯವರ ಭಾಷಣದ ನಡುವೆ ನೆರೆದಿದ್ದ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ನೋಡಿದ ಪ್ರಧಾನಿಯವರು, ‘ಮುಖ್ಯಮಂತ್ರಿಗಳೇ, ಆಗಾಗ ಈ ರೀತಿ ಆಗುತ್ತಿರುತ್ತದೆ’ ಎಂದು ಹಾಸ್ಯಭರಿತವಾಗಿ ಮಾತನಾಡಿ ತಮ್ಮ ಭಾಷಣ ಮುಂದುವರೆಸಿದರು.