ಮದ್ಯ ಪ್ರಿಯರ ಮೋಜು ಮಸ್ತಿ; ರೈತರಿಗೆ ಸಂಕಟ! ಪಾರ್ಟಿ ಮಾಡಿ ಹೊಲಗಳಲ್ಲೇ ಬಾಟಲಿ ಎಸೆಯುತ್ತಿರುವ ಕುಡುಕರು!

By Kannadaprabha News  |  First Published Aug 23, 2024, 9:54 AM IST

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎನ್ನುವ ಮಾತು ಇದೆ. ಇದೀಗ ಈ ಮಾತು ಬಳ್ಳಾರಿ ರೈತರ ಪಾಲಿಗೆ ಅಕ್ಷರಶಃ ಹೊಲಿಕೆಯಾಗ್ತಿದೆ. ಯಾಕೆಂದರೆ ಮದ್ಯದ ದರ ಹೆಚ್ಚಿಗೆ ಅಗಿರೋದು ಕುಡುಕರಿಗಷ್ಟೇ ಅಲ್ಲ ರೈತರ ಮೇಲೂ ಪರಿಣಾಮ ಬೀರಿದೆ. ಮದ್ಯದ ದರ ಏರಿಕೆಗೂ ರೈತರಿಗೂ ಏನು ಸಂಬಂಧ ಅಂತೀರಾ..? ಇಲ್ಲಿ ನೋಡಿ


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.23): ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎನ್ನುವ ಮಾತು ಇದೆ. ಇದೀಗ ಈ ಮಾತು ಬಳ್ಳಾರಿ ರೈತರ ಪಾಲಿಗೆ ಅಕ್ಷರಶಃ ಹೊಲಿಕೆಯಾಗ್ತಿದೆ. ಯಾಕೆಂದರೆ ಮದ್ಯದ ದರ ಹೆಚ್ಚಿಗೆ ಅಗಿರೋದು ಕುಡುಕರಿಗಷ್ಟೇ ಅಲ್ಲ ರೈತರ ಮೇಲೂ ಪರಿಣಾಮ ಬೀರಿದೆ. ಮದ್ಯದ ದರ ಏರಿಕೆಗೂ ರೈತರಿಗೂ ಏನು ಸಂಬಂಧ ಅಂತೀರಾ..? ಹೌದು ಮದ್ಯದ ದರ ಏರಿಕೆ ಹಿನ್ನೆಲೆ ಬಾರ್ & ರೆಸ್ಟೋರೆಂಟ್ ಗೆ ಹೋದರೆ ದರ ಹೆಚ್ಚಿಗೆ ಅಗುತ್ತದೆ ಎಂದು ಜನರು ಬಾಟಲಿ ಖರೀದಿ ಮಾಡಿಕೊಂಡು  ಹೊಲಗಳಲ್ಲಿ ಬಂದು ಕುಡಿಯುತ್ತಿದ್ದಾರೆ. ಇದರ ಪರಿಣಾಮ ಹೊಲ ಹಾಳಾಗೋದಲ್ಲದೇ ಬಾಟಲಿ ಎಸೆಯುವ ಪರಿಣಾಮ ಗಾಜುಗಳು ಕೃಷಿ ಕೂಲಿಗೆ ಬಂದವರ ಕಾಲಿಗೆ ಚುಚ್ಚುವ ಹಿನ್ನೆಲೆ ರೈತರು ಕುಡುಕರಿಗೆ ಹಿಡಿ ಶಾಪ ಹಾಕುವಂತಾಗಿದೆ.

Tap to resize

Latest Videos

undefined

ದರ ಏರಿಕೆ ಎಫೆಕ್ಟ್ ಹೊಲಕ್ಕೆ ಬರುತ್ತಿರೋ ಮದ್ಯ ಪ್ರಿಯರು

ಗಣಿ ನಾಡು ಬಳ್ಳಾರಿಯಲ್ಲಿ ಮದ್ಯ ಪ್ರಿಯರ ಹಾವಳಿಗೆ ರೈತರು ತತ್ತರಿಸಿದ್ದಾರೆ ರೈತರು. ನಿರಂತರವಾಗಿ ಮದ್ಯದ ದರ ಏರಿಕೆ ಹಿನ್ನೆಲೆ ಬಾಟಲಿದರದ ಜೊತೆಗೆ ರೆಸ್ಟೋರೆಂಟ್ ಗಳಲ್ಲಿನ ಊಟ ಸ್ಯಾಕ್ಸ್  ದರವನ್ನು ಕೂಡ ಬೇಕಾ ಬಿಟ್ಟಿ ಏರಿಕೆ ಮಾಡಲಾಗಿದೆ. ಇದರಿಂದ ನಿತ್ಯ ಕುಡಿಯುವ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ‌. ಹೀಗೆ ಹೆಚ್ಚು ಹೆಚ್ಚು ಹಣ ನೀಡಿ ಕುಡಿಯಲಾಗದ ಪರಿಸ್ಥಿತಿ ಬಂದ ಹಿನ್ನೆಲೆ ಕಡಿಮೆ ಖರ್ಚಿನಲ್ಲಿ ಮೋಜು ಮಸ್ತಿಗೆ ಹೊಸ ಮಾರ್ಗ ಹಿಡಿದಿದ್ದಾರೆ.  ಖರ್ಚು ಕಡಿಮೆ ಮಾಡಲು ನಗರ ಮತ್ತು ಗ್ರಾಮೀಣ ಭಾಗದ ಸುತ್ತಮುತ್ತಲಿನ ಹೊಲ ಗಳ ಬಳಿ ನಿತ್ಯ ಕುಡಿಯಲು ಹೋಗುತ್ತಿದ್ದಾರೆ. ಬಾರ್,  ರೆಸ್ಟೋರೆಂಟ್,  ಬಿಟ್ಟು ರೈತರ ಜಮೀನುಗಳಲ್ಲೇ ಮದ್ಯ ಪ್ರಿಯರು ಪಾರ್ಟಿ ಮಾಡ್ತಿದ್ದಾರೆ.  ಜಮೀನುಗಳಲ್ಲಿ ಸಂಜೆಯಾದ್ರೆ ಸಾಕು ಎಣ್ಣೆ ಪಾರ್ಟಿ ಮಾಡುವ ಮೊಲಕ ಮೋಜು‌ಮಸ್ತಿ ಮಾಡ್ತಿದ್ದಾರೆ.
ಎಂಎಸ್ ಐ ಎಲ್ ಮದ್ಯದ ಅಂಗಡಿಗಳಲ್ಲಿ  ಖರೀದಿಸಿ ನೇರವಾಗಿ ಊರ ಹೊರಗಿನ ಜಮೀನಿಗೆ ಲಗ್ಗೆ ಇಡುತ್ತಿದ್ದಾರೆ. ಬಳ್ಳಾರಿ ಗ್ರಾಮೀಣ ಭಾಗದ ಮೋಕಾ , ಸಿರಿವಾರ, ಸಂಗನಕಲ್ಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಮದ್ಯ ಪ್ರಿಯರ ಹಾವಳಿಗೆ ರೈತ ಕಂಗಾಲಾಗಿದ್ದಾರೆ.

ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ, ಸೆ.1ರಿಂದ ಮದ್ಯದ ದರ ಇಳಿಸಿದ ಕರ್ನಾಟಕ ಸರ್ಕಾರ!

ಕುಡಿದ ಬಳಿಕ ಎಲ್ಲಿಂದಲ್ಲಿ ಬಾಟಲಿ ಎಸೆಯುತ್ತಾರೆ

ಇನ್ನೂ ಇಲ್ಲಿ ಬಂದ ಮದ್ಯ ಪ್ರಿಯರು ಕೇವಲ ಪಾರ್ಟಿ ಮಾಡೋದಷ್ಟೇ ಅಲ್ಲದೇ ಮದ್ಯದ ಖಾಲಿ ಬಾಟಲಿ ಗಳಲ್ಲಿ ಒಡೆದು ಜಮೀನಲ್ಲಿ ಎಸೆದು ದುಂಡಾವರ್ತನೆ ಮಾಡ್ತಿದ್ದಾರೆ. ಜಮೀನಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುವ ಕಾರಣದಿಂದಾಗಿ ಭತ್ತ ನಾಟಿ ಮಾಡುವಾಗ ಮತ್ತು ನೆಲ ಹದ ಮಾಡುವಾಗ ಬಾಟಲಿಯ ಗಾಜು ಕಾಲಿಗೆ ಚುಚ್ಚುತ್ತವೆ ಎನ್ನುತ್ತಾರೆ ರೈತ ಕೃಷ್ಣಪ್ಪ.  ಬಾಟಲಿಗಳನ್ನು ಎತ್ತಿ ಹೊರಗೆ  ಹಾಕಬಹುದು. ಆದರೆ ಮಣ್ಣಿನಲ್ಲಿ ಹುದುಗಿ ಹೋದ ಗಾಜುಗಳನ್ನ ಹುಡುಕಲು ಸಾದ್ಯವಿಲ್ಲ. ಗಾಜುಗಳು ಚುಚ್ಚುವ ಆತಂಕದಿಂದ ಜಮೀನಿಗೆ ಇಳಿಯಲು ಹೆದರುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

click me!