ಕುಡಿದ ಮತ್ತಿನಲ್ಲಿ ಭಾರೀ ಗಾತ್ರದ ವಾಹನ ಯದ್ವಾತದ್ವಾ ಚಾಲನೆ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!

Published : Nov 22, 2023, 01:36 PM IST
ಕುಡಿದ ಮತ್ತಿನಲ್ಲಿ ಭಾರೀ ಗಾತ್ರದ ವಾಹನ ಯದ್ವಾತದ್ವಾ ಚಾಲನೆ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!

ಸಾರಾಂಶ

ಕುಡಿದ ಮತ್ತಿನಲ್ಲಿ ಚಾಲಕನೋರ್ವ ಭಾರೀ ಗಾತ್ರದ ವಾಹನವನ್ನು ಯದ್ವಾತದ್ವಾ ಚಲಾಯಿಸಿ ತುಮಕೂರಿನ ಶೆಟ್ಟಿಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನುಗ್ಗಿಸಿದ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಬ್ಬಿಣದ ಕಂಬಿ ಬಿಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದೆ. 

ತುಮಕೂರು (ನ.22): ಕುಡಿದ ಮತ್ತಿನಲ್ಲಿ ಚಾಲಕನೋರ್ವ ಭಾರೀ ಗಾತ್ರದ ವಾಹನವನ್ನು ಯದ್ವಾತದ್ವಾ ಚಲಾಯಿಸಿ ತುಮಕೂರಿನ ಶೆಟ್ಟಿಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನುಗ್ಗಿಸಿದ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಬ್ಬಿಣದ ಕಂಬಿ ಬಿಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದೆ. 

ರಾಮನಗರ ಮೂಲದ ಲಾರಿ ಚಾಲಕ ಶಂಕರ್ ಬಂಧಿತ ಆರೋಪಿ. ತುಮಕೂರಿನ ಶೆಟ್ಟಿಹಳ್ಳಿ ರಿಂಗ್ ರಸ್ತೆಯಿಂದ ಎಪಿಎಂಸಿ ಮಾರ್ಕೆಟ್ ಕಡೆಗೆ ತೆರಳುತ್ತಿದ್ದ KA42A7244 ವಾಹನ. ರೈಲ್ವೆ ಅಂಡರ್ ಪಾಸ್ ಬಳಿ ಬಾರಿ ಗಾತ್ರದ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಿದ್ದರೂ ಅಂಡರ್‌ಪಾಸ್ ಒಳಗೆ ಹೋಗಲು ಯತ್ನಿಸಿರುವ ಚಾಲಕ. ಈ ವೇಳೆ ಭಾರಿ ಗಾತ್ರದ ವಾಹನ ಸಂಚಾರಗಳ ತಡೆಗೆ ಅಳವಡಿಸಿದ್ದ ಕಂಬಿಗೆ ಸಿಲುಕಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಕಬ್ಬಿಣ ಕಂಬಿ. ಈ ವೇಳೆ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಬ್ಬಿಣದ ಕಂಬಿ ಬಿಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ.

ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!

ಕೆಲ ಕಾಲ ಟ್ರಾಫಿಕ್ ಜಾಮ್

ಬೃಹತ್ ಗಾತ್ರ ಕಬ್ಬಿಣದ ಕಂಬಿ ರಸ್ತೆ ಉರುಳಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಬಂದ ತುಮಕೂರಿನ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಳಿಕ ವಾಹನ ಚಾಲಕ ಶಂಕರನನ್ನು ವಶಕ್ಕೆ ಪಡೆದ ಪೊಲೀಸರು.

 

ವಿದ್ಯುತ್‌ ಅಪಘಾತ ತಡೆಗೆ ಮಾರ್ಗಸೂಚಿಗೆ ಸಮಿತಿ; ಇಂಧನ ಇಲಾಖೆ ಆದೇಶ

ಮದ್ಯಪಾನ ಮಾಡಿ ಚಾಲನೆ

ಆರೋಪಿಯನ್ನು ಬಂಧಿಸಿ ಮದ್ಯಪಾನ ಸೇವಿಸಿದ ಬಗ್ಗೆ ಪರೀಕ್ಷೆಗೊಳಪಡಿಸಲಾಯಿತು ಈ ವೇಳೆ ಶಂಕರ್ ಕಂಠಪೂರ್ತಿ ಕುಡಿದೇ ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡು, ರೈಲ್ವೆ ಅಂಡರ್ ಪಾಸ್ ಬಳಿ ಸಿಲುಕಿದ್ದ ವಾಹನವನ್ನ ಹೊರತೆಗೆದ ಪೊಲೀಸರು. ತುಮಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!