ಬಿಜೆಪಿ ಅವಧಿಯಲ್ಲಿನ ಟೆಂಡರ್‌ ರದ್ದುಗೊಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಸಂಕಷ್ಟದಲ್ಲಿ ಎಸ್ಕಾಂ ಗುತ್ತಿಗೆದಾರರು

By Sathish Kumar KH  |  First Published Nov 22, 2023, 1:27 PM IST

ರೈತರ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಬಿಜೆಪಿ ಅವಧಿಯಲ್ಲಿ ಕರೆಯಲಾಗಿದ್ದ ಟೆಂಡರ್‌ ಅನ್ನು ಕಾಂಗ್ರೆಸ್‌ ಸರ್ಕಾರ ರದ್ದುಗೊಳಿಸಿ ಹೊಸ ಟೆಂಡರ್‌ ಕರೆಯಲು ಮುಂದಾಗಿರುವುದಕ್ಕೆ ಕಾಂಟ್ರಾಕ್ಟರ್ಸ್‌ ಆಕ್ರೋಶ ಹೊರಹಾಕಿದ್ದಾರೆ.


ಬೆಂಗಳೂರು (ನ.22): ರಾಜ್ಯದಲ್ಲಿ ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಕರೆದಿರುವ ಟೆಂಡರ್ ಮಾರ್ಚ್ ತಿಂಗಳಲ್ಲಿ (ಬಿಜೆಪಿ ಅವಧಿಯ ಸರ್ಕಾರ) ಟೆಂಡರ್ ಕರೆಯಲಾಗಿದ್ದರೂ ಕಾರ್ಯಾದೇಶ ನೀಡಿಲ್ಲ. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಮದ ನಂತರ ಟೆಂಡರ್‌ ರದ್ದುಗೊಳಿಸಿ ಹೊಸ ಟೆಂಡರ್‌ ಕರೆಯಲು ಮುಂದಾಗುತ್ತಿದೆ. ಇದರಿಂದ ಟೆಂಡರ್‌ ಪಡೆದು ಸಾಮಾಗ್ರಿಗಳನ್ನು ಖರೀದಿ ಮಾಡಿದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಎಲೆಕ್ಟ್ರಿಕಲ್ ಇಪಿಸಿ ಕಾಂಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಸದಸ್ಯ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಎಸ್ಕಾಂಗಳಿಂದ ಟೆಂಡರ್‌ ಕರೆದು ಅದನ್ನು ಅಂತಿಮಗೊಳಿಸಿದ್ದರೂ ಕಾರ್ಯಾದೇಶ ನೀಡಲು ವಿಳಂಬ ಮಾಡಲಾಗುತ್ತಿದೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ (ಮಾರ್ಚ್‌ 2023) ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಟೆಂಡರ್ ಕರೆದು ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಚುನಾವಣಾ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾರ್ಯಾದೇಶ ನೀಡುವುದನ್ನು ತಡೆಹಿಡಿಯಲಾಗಿತ್ತು. ನಂತರ ಬರುವ ಸರ್ಕಾರ ಕಾರ್ಯಾದೇಶ ನೀಡುತ್ತದೆ ಎಂದು ಕಾದು ಕುಳಿತರೂ ನಮಗೆ ಕೆಲಸ ಮಾಡಲು ಗ್ರೀನ್‌ ಸಿಗ್ನಲ್‌ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

Tap to resize

Latest Videos

ಈಗಾಗಲೇ ಎಲ್ಲ ಗುತ್ತಿಗೆದಾರರು ಪಂಪ್ ಸೆಟ್ ನಿರ್ಮಾಣಕ್ಕೆ ಬೇಕಾಗುವ ಸಾಮಾಗ್ರಿ ಖರೀದಿಸಿದ್ದಾರೆ. ನೂತನ ರಾಜ್ಯ ಸರ್ಕಾರ ಜಾರಿ ಬಂದ ಬಳಿಕ ಕಾರ್ಯಾದೇಶವೇ ಕೊಟ್ಟಿಲ್ಲ.ಈಗ ಸರ್ಕಾರ ಹೊಸ ಟೆಂಡರ್ ಕರೆಯುವ ಯೋಜನೆಯಲ್ಲಿದೆ. ಹೀಗಾಗಿ, ಎಲೆಕ್ಟ್ರಿಕಲ್ ಇಪಿಸಿ ಕಾಂಟ್ರ್ಯಾಕ್ಟರ್ಸ್ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಎಸ್ಕಾಂಗಳ ವಿರುದ್ದ ಸುಮಾರು 200 ಗುತ್ತಿಗೆದಾರರು ಸರ್ಕಾರದ ವಿರುದ್ಧ  ಹೋರಾಟಕ್ಕಿಳಿಯಲು ಉಂದಾಗಿದ್ದಾರೆ. ಈಗಾಗಲೇ ಹಲವು ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಸರ್ಕಾರದಿಂದ ಲಿಖಿತ ಆದೇಶ ಕೊಟ್ಟರೂ ಕಾರ್ಯಾದೇಶ ಕೊಡದ ಅಧಿಕಾರಿಗಳು: ಕೃಷಿಕರಿಗೆ ಕೊಡುವ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಕಾಂಟ್ರಾಕ್ಟ್ ಗಾಗಿ ನಾವು ಟೆಂಡರ್ ತೆಗೆದುಕೊಂಡಿದ್ದೆವು. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಟೆಂಡರ್ ಆಗಿದ್ದರೂ ಕೆಲಸ ಮಾಡಿರಲಿಲ್ಲ. ಆಮೇಲೆ ಚುನಾವಣೆ ಮುಗಿದ ಬಳಿಕ ಒಡಿ ಆಗಿದೆ ಅನ್ನೋ ಕಾರಣಕ್ಕೆ ಕೆಲಸ ಮಾಡಿದ್ದೇವೆ. ಇಲಾಖೆಯಿಂದ ಅನುಮೋದನೆ ಪಡೆದವರಿಂಲೇ ಐಟಂ ಪರ್ಚೇಸ್ ಮಾಡಿದ್ದೇವೆ. ಈಗ ಹೊಸ ಸರ್ಕಾರ ಜಾರಿ ಆದ ಬಳಿಕ ಹಳೆ ಟೆಂಡರ್‌ದಾರರಿಗೆ ಕೊಡಬೇಡಿ ಅಂದಿದಾರಂತೆ. ಆ ಬಳಿಕ ನಾವು ಮನವಿ ಮಾಡಿದ ಬಳಿಕ ಲಿಖಿತ ಆದೇಶ ಕೊಟ್ಟಿದ್ದರು ಎಂದು ತಿಳಿಸಿದರು.

ಟೆಂಡರ್‌ ಕೊಡದೇ ಲಂಚಕ್ಕೆ ಬೇಡಿಕೆಯಿಡುತ್ತಿರುವ ಅಧಿಕಾರಿಗಳು: ಲಿಖಿತ ಆದೇಶವನ್ನು ಕೊಟ್ಟ ನಂತರವೂ ಅಧಿಕಾರಿಗಳ ಬಳಿ ಹೋದ್ರೆ ಮೌಖಿಕ ಆದೇಶ ಇದೆ ಕೊಡಬೇಡಿ ಅಂತ ಹೇಳಿದ್ದಾರೆಂದು ಇಲ್ಲಿ ಹಾರಿಕೆ ಉತ್ತರ ನೀಡುತ್ತಾರೆ. ಒಟ್ಟಿನಲ್ಲಿ ನಮ್ಮ ಹಣಕ್ಕಾಗಿ ಲಂಚ ಕೊಡ್ಬೇಕು ಅಂತ ಇಂಡೈರೆಕ್ಟ್ ಆಗಿ ಕೇಳ್ತಿದಾರೆ. ವಾಪಾಸ್ ವಿಧಾನಸೌಧಕ್ಕೆ ಬಂದರೆ ಅನುಮೋದನೆಗೆ ಕೊಟ್ಟಿರೋ ಲೆಟರ್ ತೋರಿಸ್ತಾರೆ. ನಾವೀಗ ಎಲ್ಲಿಗೆ ಹೋಗೋದು ಅಂತ ಕಾಂಟ್ರಾಕ್ಟರ್ ಅಸೋಸಿಯೇಷನ್ ಸದಸ್ಯ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜೊತೆಗೆ, ಎಸ್ಕಾಂ ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಒಡ್ಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

click me!