Karnataka: ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿಗೆ ಚಾಲನೆ

Kannadaprabha News   | Asianet News
Published : Feb 05, 2022, 05:00 AM ISTUpdated : Feb 05, 2022, 05:02 AM IST
Karnataka: ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿಗೆ ಚಾಲನೆ

ಸಾರಾಂಶ

*   ಪಕ್ಷ ಸಂಘಟನಾ ಕಾರ್ಯ *   ಮಾ.31ರೊಳಗೆ 50 ಲಕ್ಷ ಸದಸ್ಯತ್ವ ಗುರಿ *  ರಾಜಕೀಯ ಪ್ರಾಬಲ್ಯತೆ ಸದಸ್ಯ ಸಂಖ್ಯೆಯಿಂದ ನಿರ್ಧಾರ: ಸಿದ್ದು  

ಬೆಂಗಳೂರು(ಫೆ.05):  ರಾಜ್ಯ ಕಾಂಗ್ರೆಸ್‌(Congress) ವತಿಯಿಂದ ಮಾ.31ರೊಳಗಾಗಿ 50 ಲಕ್ಷ ಸದಸ್ಯತ್ವ ಗುರಿಯೊಂದಿಗೆ ಹಮ್ಮಿಕೊಂಡಿರುವ ‘ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿ’(Congress Digital Membership Registration) ಅಭಿಯಾನಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಸದಸ್ಯತ್ವ ನೋಂದಣಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಪದಾಧಿಕಾರಿಗಳು ಮಾ.31ರೊಳಗಾಗಿ 50 ಲಕ್ಷ ಸದಸ್ಯತ್ವ ಗುರಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಇಬ್ಬರೂ ನಾಯಕರು ಸ್ಪಷ್ಟಪಡಿಸಿದರು.

Rivers Linking ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಸಿದ್ದರಾಮಯ್ಯ ವಿವರಿಸಿದ್ದು ಹೀಗೆ

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ(Siddaramaiah), ಪ್ರತಿ ಬೂತ್‌ಗೆ ಇಬ್ಬರು ನೋಂದಣಿದಾರರನ್ನು ಆಯ್ಕೆ ಮಾಡಲಾಗುತ್ತದೆ. ಅವರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಬಗ್ಗೆ ಒಲವು, ಪಕ್ಷದ ಸಿದ್ಧಾಂತದ ಬಗ್ಗೆ ನಂಬಿಕೆ, ವಿಶ್ವಾಸ ಇರುವವರನ್ನು ನೋಂದಣಿ ಮಾಡಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಬೇಕು. ಒಂದು ರಾಜಕೀಯ ಪಕ್ಷದ(Political Party) ಪ್ರಾಬಲ್ಯತೆ ಅದರ ಸದಸ್ಯರ ಸಂಖ್ಯೆಯಿಂದ ನಿರ್ಧರಿತವಾಗುತ್ತದೆ. ಹೀಗಾಗಿ ನಮಗೆ ನೀಡಿರುವ ಮಾ.31ರ ಗಡುವಿನ ಒಳಗಾಗಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡಬೇಕು. ಇದಕ್ಕಾಗಿ ಎಲ್ಲರೂ ಸಕ್ರಿಯವಾಗಿ ದುಡಿಯಬೇಕು ಎಂದು ಹೇಳಿದರು.

ಡಿಜಿಟಲ್ ಸದಸ್ಯತ್ವ ನೋಂದಣಿ ಏಐಸಿಸಿ ಉಸ್ತುವಾರಿ ರಾಜು, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ(KH Muniyappa0, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಧ್ರುವನಾರಾಯಣ, ಡಿಜಿಟಲ್‌ ನೋಂದಣಿ ಕರ್ನಾಟಕದ ಮುಖ್ಯ ಸಮನ್ವಯಕಾರ ರಘುನಂದನ್‌ ರಾಮಣ್ಣ, ಸದಸ್ಯತ್ವ ನೋಂದಣಿ ರಾಜ್ಯ ಸಂಚಾಲಕ ಆರ್‌.ವಿ. ವೆಂಕಟೇಶ್‌ ಸೇರಿದಂತೆ ಹಲವರು ಹಾಜರಿದ್ದರು.

ಕಾಲಮಿತಿ ವಿಸ್ತರಣೆಯಿಲ್ಲ: ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಡಿ.ಕೆ.ಶಿವಕುಮಾರ್‌(DK Shivakumar) ಮಾತನಾಡಿ, ಈ ಅಭಿಯಾನಕ್ಕೆ(Campaign) ಒಂದೂವರೆ ತಿಂಗಳ ಕಾಲಾವಕಾಶ ಇದ್ದು, ಯಾವುದೇ ಕಾರಣಕ್ಕೂ ಕಾಲಮಿತಿ ವಿಸ್ತರಣೆಯಾಗುವುದಿಲ್ಲ. ಈಗಾಗಲೇ 7 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮುಖ್ಯ ನೋಂದಣಿದಾರರನ್ನಾಗಿ ಮಾಡಲು ಮನವಿ ಬಂದಿದೆ. 5548 ಮಂದಿಯನ್ನು ಎಐಸಿಸಿ ನೇಮಕ ಮಾಡಿರುವ ಸಮಿತಿಯು ಮುಖ್ಯ ನೋಂದಣಿದಾರರನ್ನಾಗಿ ಮಾಡಿದೆ. ಉಳಿದ 1405 ಮಂದಿಯನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲಿದ್ದು, ಆದಷ್ಟುವೇಗವಾಗಿ ಸದಸ್ಯತ್ವ ನೋಂದಣಿ ಮಾಡಬೇಕು ಎಂದು ಕರೆ ನೀಡಿದರು.

ವಾಪಸ್ ಕಾಂಗ್ರೆಸ್ ಗೆ ಹೋಗೋ ಪ್ರಶ್ನೆಯೇ ಇಲ್ಲ: ಬಿಸಿ ಪಾಟೀಲ್

ಪ್ರತಿ ಬೂತ್‌ನಲ್ಲಿ ಒಬ್ಬೊಬ್ಬ ಮಹಿಳಾ ಸದಸ್ಯೆಯನ್ನು ನೇಮಕ ಮಾಡಲು ಚಿಂತನೆ ನಡೆಸಲಾಗಿದೆ. ಮನೆಗಳಿಗೆ ಹೋಗಿ ಗಂಡಸರು ಹೆಣ್ಣುಮಕ್ಕಳ ಫೋಟೋ, ಮೊಬೈಲ್‌ ಸಂಖ್ಯೆ ಕೇಳುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರ ಜವಾಬ್ದಾರಿಯನ್ನು ಮಹಿಳಾ ಕಾಂಗ್ರೆಸ್‌, ಸ್ತ್ರೀ ಶಕ್ತಿ ಸಂಘಟನೆಗೆ ನೀಡಲಾಗಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಒಬ್ಬೊಬ್ಬ ಮಹಿಳೆಯರನ್ನು ನೇಮಕ ಮಾಡಿದ್ದೇವೆ. ಪ್ರತಿ ಬೂತ್‌ ಮಟ್ಟದಲ್ಲಿ ಮಹಿಳೆಯರ ನೇಮಕ ಆದರೆ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ ಎಂದರು.

ಈ ಅಭಿಯಾನ ಸಂಬಂಧ ನಿಮಗೆ ತರಬೇತಿ ನೀಡಲು ತಂಡಗಳು ಆಗಮಿಸಲಿವೆ. ನಾನು ಕೂಡ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಮುಖ್ಯ ನೋಂದಾಣಿದಾರರನ್ನು ಭೇಟಿ ಮಾಡುತ್ತೇನೆ. ಇಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಸದಸ್ಯತ್ವ ಎಲ್ಲರ ಹಕ್ಕು. ಹೀಗಾಗಿ ಎಲ್ಲ ಮುಖ್ಯ ಘಟಕಗಳಿಗೂ ಅವಕಾಶ ನೀಡಲಾಗಿದೆ. ಹೆಚ್ಚು ಸದಸ್ಯರಿದ್ದಷ್ಟೂ ನೀವು ಬಲಶಾಲಿಯಾಗುತ್ತೀರಿ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Bengaluru - ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ