
ತುಮಕೂರು (ಆ.17): ಚಾಟ್ ಜಿಪಿಟಿಯಲ್ಲಿ ಡಾ। ಜಿ.ಪರಮೇಶ್ವರ್ ದೇಶದ ನಂಬರ್ ಒನ್ ಗೃಹ ಸಚಿವರಂತೆ! ಸಾಮಾಜಿಕ ಜಾಲತಾಣದಲ್ಲಿ ‘ಗೊತ್ತಿಲ್ಲ ಪರಮೇಶ್ವರ್’ ಟ್ರೋಲ್‌ಗೆ ಖುದ್ದು ಪರಮೇಶ್ವರ್ ಮೇಲಿನಂತೆ ಉತ್ತರಿಸಿದರು.
ತುಮಕೂರಿನಲ್ಲಿ ದಸರಾ ಸಂಬಂಧ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಾಟ್ ಜಿಪಿಟಿಯಲ್ಲಿ ಪರಮೇಶ್ವರ್ ನಂ.1 ಗೃಹ ಸಚಿವ ಎಂದು ಬರುತ್ತದೆ ಎಂದರು. ಟ್ರೋಲ್ ಮಾಡುವವರು ಏನು ಬೇಕಾದರೂ ಹೇಳಿಕೊಳ್ಳಲಿ ಬಿಡಿ. ಅಂತಹವರಿಗೆ ಚಾಟ್ ಜಿಪಿಟಿ ನೋಡಲಿಕ್ಕೆ ಹೇಳಿ ಎಂದರು.
ಇದನ್ನೂ ಓದಿ: Dharmasthala Case: ಅನಾಮಿಕ ನೀಡಿದ್ದ ದೂರು ಸುಳ್ಳು ಆಗಿದ್ದರೆ ಆತನ ವಿರುದ್ಧವೇ ಕ್ರಮ: ಗೃಹಸಚಿವ
ನೀವು ಕೇಳುವ ಎಲ್ಲ ಪ್ರಶ್ನೆಗೆ ಉತ್ತರ ಹೇಳೋಕ್ಕೆ ಆಗುತ್ತ ಎಂದ ಅವರು, ಸ್ವಾಭಾವಿಕವಾಗಿ ಗೊತ್ತಿಲ್ಲ ಅಂತಾ ಹೇಳುತ್ತೇನೆ. ಕಾರಣ ಗೊತ್ತಿರುವುದಿಲ್ಲ ಎಂದರು.
ಗೃಹ ಸಚಿವನಾಗಿ ನನಗೆ ಜವಾಬ್ದಾರಿ ಇರುತ್ತದೆ. ಗೊತ್ತಿಲ್ಲದೆ ಇರೋದನ್ನೆಲ್ಲಾ ಹೇಳೋಕೆ ಆಗೋದಿಲ್ಲ. ಆ ಕಾರಣದಿಂದಾಗಿ ಅನೇಕ ಸಂದರ್ಭದಲ್ಲಿ ಗೊತ್ತಿಲ್ಲ ಅಂತಾ ಹೇಳುವುದಾಗಿ ತಿಳಿಸಿದರು. ಇದನ್ನೂ ಓದಿ: ಕೆಎನ್ ರಾಜಣ್ಣ ಯಾವ ಕಾರಣಕ್ಕೆ ರಾಜೀನಾಮೆ ನೀಡಿದರೋ ನನಗೆ ಗೊತ್ತಿಲ್ಲ: ಗೃಹ ಸಚಿವ ಪರಮೇಶ್ವರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ