ಕಾಂಗ್ರೆಸ್‌ನವರೇ ಕೋಮುವಾದಿಗಳು; ಸಿದ್ದರಾಮಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ

By Kannadaprabha News  |  First Published Dec 6, 2023, 4:07 AM IST

ಸಿಎಂ ಸಿದ್ದರಾಮಯ್ಯ ಒಂದೇ ಆಡಳಿತ ಕೊಡಬೇಕು. ಅವರು ಎಲ್ಲ ಸಮುದಾಯಕ್ಕೂ ಸಮನಾಗಿ ನೋಡಿಕ್ಕೊಳ್ಳಬೇಕು. ಆದರೆ, ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ‌ ಪುಷ್ಟಿಕರಣ ಮಾಡುತ್ತಾರೆ. ಕಾಂಗ್ರೆಸ್‌ನವರು ಕೋಮುವಾದಿಗಳು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.


ಬೆಳಗಾವಿ (ಡಿ.6) :  ಸಿಎಂ ಸಿದ್ದರಾಮಯ್ಯ ಒಂದೇ ಆಡಳಿತ ಕೊಡಬೇಕು. ಅವರು ಎಲ್ಲ ಸಮುದಾಯಕ್ಕೂ ಸಮನಾಗಿ ನೋಡಿಕ್ಕೊಳ್ಳಬೇಕು. ಆದರೆ, ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ‌ ಪುಷ್ಟಿಕರಣ ಮಾಡುತ್ತಾರೆ. ಕಾಂಗ್ರೆಸ್‌ನವರು ಕೋಮುವಾದಿಗಳು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲರನ್ನೂ ಸಮಾನವಾಗಿ ನೋಡಿಕ್ಕೊಳ್ಳಬೇಕು. ಕಾಂಗ್ರೆಸ್‌ನ ಕೋಮುವಾದಿಗಳಿಂದ ರಾಜ್ಯದಲ್ಲಿ ಸ್ವಾಸ್ಥ್ಯ ಇಲ್ಲದಾಗಿದೆ ಎಂದರು.

Tap to resize

Latest Videos

ಪೊಲೀಸರು ಹಾಗೂ ವಕೀಲರ ನಡುವೆ ಬಹಿರಂಗ ಸಂಘರ್ಷಕ್ಕೆ ವಿರಾಮ ?  ಹೈಕೋರ್ಟ್ ಸೂಚನೆ ಏನು?

ಮುಸ್ಲಿಂ ಸಮುದಾಯಕ್ಕೆ‌ ₹10 ಸಾವಿರ ಕೋಟಿ ಖರ್ಚು ಮಾಡುವ ಸಾಮರ್ಥ್ಯ ಇದೆಂಬ ಸಿದ್ಧ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಬರಗಾಲ, ರೈತರ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ಕೊಡಲು ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕಿವಿಗೆ ಹೂ ಇಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿಪಕ್ಷ ನಾಯಕ ಆರ್.ಅಶೋಕಕ್ಕಿಂತ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಶಾಸಕರು ಬೆಂಬಲ ಕೊಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಾಸಕರು ಯತ್ನಾಳ ಅವರ ಬಳಿ ಸಮಸ್ಯೆ ಹೇಳಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.

ಭವಾನಿ ರೇವಣ್ಣರ ಗಲಾಟೆ ಬೆನ್ನಲ್ಲೇ ಎಚ್‌ಡಿ ರೇವಣ್ಣರ ವಿರುದ್ಧ ಅವಹೇಳನಕಾರಿ ಮಾತಾಡಿದ ಶಾಸಕ ಶಿವಲಿಂಗೇಗೌಡ!

ಅಶೋಕಕ್ಕಿಂತ ಬಸನಗೌಡ ಪಾಟೀಲಗೆ ಶಾಸಕರ ಬೆಂಬಲ ಹೆಚ್ಚು. ಯತ್ನಾಳ್ ಯತ್ನಾಳನೆ, ಆದರೆ ಅಶೋಕ. ಆರ್.ಆಶೋಕನೆ ಎಂದರು.

click me!