ಗೋಮೂತ್ರ ಚಿಕಿತ್ಸೆಯಿಂದ ಕ್ಯಾನ್ಸರ್‌ ಗುಣಮುಖ!

Published : Apr 10, 2022, 04:40 AM IST
ಗೋಮೂತ್ರ ಚಿಕಿತ್ಸೆಯಿಂದ ಕ್ಯಾನ್ಸರ್‌ ಗುಣಮುಖ!

ಸಾರಾಂಶ

* ಗೋಮೂತ್ರ ಚಿಕಿತ್ಸೆಯಿಂದ ಕ್ಯಾನ್ಸರ್‌ ಗುಣಮುಖ * ಗುಜರಾತ್‌ನಲ್ಲಿ ಗೋಮೂತ್ರದ ಚಿಕಿತ್ಸೆ ಯಶಸ್ವಿ * ದಕ್ಷಿಣ ಕರ್ನಾಟಕದಲ್ಲಿ ನಂಬಿಕೆ ಕಡಿಮೆ * ಸ್ವದೇಶಿ ಮೇಳದಲ್ಲಿ ಪಂಚಗವ್ಯದ ಬಗ್ಗೆ ಮಾಹಿತಿ

ಬೆಂಗಳೂರು(ಏ.10); ಭಾರತೀಯ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಸಾಕಷ್ಟುಸುಧಾರಣೆಯಾಗಿದ್ದು, ಉನ್ನತ ಮಟ್ಟದ ಹಾಗೂ ಗುಣಮಟ್ಟದ ಚಿಕಿತ್ಸಾ ವ್ಯವಸ್ಥೆಯು ಲಭ್ಯವಿದೆ ಎಂದು ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಅರುಣ್‌ಕುಮಾರ್‌ ತಿಳಿಸಿದರು.

ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಆಯೋಜಿಸಲಾಗಿದ್ದ ಆಯುರ್ವೇದ ಶಿಬಿರದಲ್ಲಿ ಅವರು ಮಾತನಾಡಿದರು.

ಆಯುರ್ವೇದ ಚಿಕಿತ್ಸೆಯು ಸಂಪ್ರದಾಯ ಮುರಿಯದೇ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಲವಾರು ಅತಿಕ್ರಮಗಳನ್ನು ಮತ್ತು ವಿದೇಶದ ಮತ್ತು ಸ್ಥಳೀಯ ಒತ್ತಡಗಳನ್ನು ಸೈರಿಸಿಕೊಂಡು ಮುನ್ನಡೆದಿದೆ. ಆಯುರ್ವೇದವು ಕೇವಲ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆ ಮಾತ್ರವಾಗಿರದೆ ಜೀವನ ಕ್ರಮವೂ ಆಗಿದೆ. ಆಯುರ್ವೇದದ ಚಿಕಿತ್ಸಾ ಪದ್ಧತಿಯಲ್ಲಿ ವೈಜ್ಞಾನಿಕತೆಯನ್ನೂ ಬಳಕೆ ಮಾಡಿಕೊಂಡು ಸಾಂಪ್ರದಾಯಿಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರಕೃತಿ ದತ್ತವಾಗಿ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಕಷಾಯ, ಗುಳಿಗೆಗಳನ್ನು ತಯಾರಿಸುತ್ತಿದ್ದು, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಪಂಚಗವ್ಯ ಚಿಕಿತ್ಸೆ ಶಿಬಿರದಲ್ಲಿ ಪಂಚಗವ್ಯದಿಂದ (ದೇಸೀ ಹಸುವಿನ ಗೋ ಮೂತ್ರದಿಂದ ತಯಾರಿಸಿದ ಔಷಧಿ) ತಯಾರಿಸಿದ ಔಷಧಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವದೇಶಿ ಗೋಸೇವಾ ಗತಿವಿಧಿಯ ಭಾರತಿ ಮಾತನಾಡಿ, ದೇಸೀ ಹಸುವಿನ ಗೋ ಮೂತ್ರದಲ್ಲಿ ಕ್ಯಾನ್ಸರ್‌ ವಾಸಿ ಮಾಡುವ ಚಿಕಿತ್ಸೆಯನ್ನು ಪ್ರಚುರ ಪಡಿಸಲು ವೈದ್ಯ ಡಿ.ಪಿ.ರಮೇಶ್‌ ಅವರು ದೇಶದೆಲ್ಲೆಡೆ ಸಂಚರಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಅಲ್ಲಿನ ಜನರಲ್ಲಿ ಈ ಬಗ್ಗೆ ಹೆಚ್ಚು ನಂಬಿಕೆ ಇದೆ. ದಕ್ಷಿಣ ಕರ್ನಾಟಕದಲ್ಲಿ ಗೋಮೂತ್ರದಿಂದ ಕ್ಯಾನ್ಸರ್‌ ವಾಸಿ ಮಾಡುವ ಬಗ್ಗೆ ಜನರಲ್ಲಿ ನಂಬಿಕೆ ಕಡಿಮೆ ಇದೆ. ಆದ್ದರಿಂದ ವೈದ್ಯ ರಮೇಶ್‌ ಅವರು ಕರ್ನಾಟಕದಲ್ಲಿ ಹೆಚ್ಚು ಶಿಬಿರಗಳನ್ನು ಆಯೋಜಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಪಂಚಗವ್ಯ ಚಿಕಿತ್ಸಾ ಶಿಬಿರದಲ್ಲಿ ವೈದ್ಯೆ ಸುಭಾಷಿಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ

ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಸ್ವದೇಶಿ ವಸ್ತು ಭಂಡಾರ ತರಬೇತಿ ಕಾರ್ಯಗಾರ ನಡೆಯಲಿದೆ. ಮಧ್ಯಾಹ್ನ 3.15ರಿಂದ 4.30ರವರೆಗೆ ‘ಜಗತ್ತಿಗೆ ಭಾರತದ ಕೊಡುಗೆ-ಆಯುರ್ವೇದ’ ವಿಷಯ ಕುರಿತು ಆಯುರ್ವೇದ ತಜ್ಞ ಗಿರಿಧರ ಕಜೆ ಅವರು ಉಪನ್ಯಾಸ ನೀಡಲಿದ್ದಾರೆ. ರಾತ್ರಿ 7.15ರಿಂದ 9ರವರೆಗೆ ‘ಯಕ್ಷಗಾನ’ ಸುದರ್ಶನ ಗರ್ವಭಂಗ ಸಾಂಸ್ಕೃತಿಕ ಕಾರ್ಯಕ್ರಮವನ್ನು ರವಿಶಂಕರ್‌ ಬಡಿಕ್ಕಿಲ ಮತ್ತು ತಂಡದವರು ಪ್ರದರ್ಶಿಸಲಿದ್ದಾರೆ.

ಇಂದು ಮೇಳ ಮುಕ್ತಾಯ

ಏ.6ರಂದು ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಆರಂಭಗೊಂಡ ಸ್ವದೇಶಿ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಭೇಟಿ ನೀಡಿದ್ದು, ಲಕ್ಷಾಂತರ ರುಪಾಯಿ ವಹಿವಾಟು ನಡೆದಿದೆ. ಏ.10ಕ್ಕೆ ಸ್ವದೇಶಿ ಮೇಳ ಮುಕ್ತಾಯಗೊಳ್ಳಲಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಶನಿವಾರ ಒಂದೇ ದಿನ 10ರಿಂದ 15 ಸಾವಿರಕ್ಕೂ ಅಧಿಕ ಜನರು ಮೇಳಕ್ಕೆ ಬಂದಿದ್ದು, ಶೇ.60ಕ್ಕಿಂತ ಹೆಚ್ಚು ಮಂದಿ ಮಳಿಗೆಗಳಲ್ಲಿ ವಿವಿಧ ವಸ್ತು, ತಿಂಡಿ ತಿನಿಸುಗಳನ್ನು ಖರೀದಿಸಿದ್ದಾರೆ ಎಂದು ಸ್ವದೇಶಿ ಜಾಗರಣ ಮಂಚ್‌-ಕರ್ನಾಟಕ ಪ್ರಮುಖ್‌ ಕಿಶೋರ್‌ ಪಟವರ್ಧನ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ