'ಮನೆ ಮನೆಗೂ ಯೋಗ' ಅಭಿಯಾನಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಲ್ಯಾನ್, ಸಚಿವರ ಹೇಳಿಕೆ ಕುತೂಹಲ!

Kannadaprabha News   | Kannada Prabha
Published : May 14, 2026, 08:03 AM ISTUpdated : May 14, 2026, 08:06 AM IST
Mane manegoo yoga campaign yoga day

ಸಾರಾಂಶ

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 'ಮನೆ ಮನೆಗೂ ಯೋಗ, ಎಲ್ಲರಿಗೂ ಯೋಗ' ಪರಿಕಲ್ಪನೆಯಡಿ ರಾಜ್ಯಾದ್ಯಂತ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮುಖ್ಯ ಕಾರ್ಯಕ್ರಮ ಜೂ.21 ರಂದು ವಿಧಾನಸೌಧದ ಆವರಣದಲ್ಲಿ ನಡೆಯಲಿದ್ದು, ಸುಮಾರು 5000 ಯೋಗಪಟುಗಳು ಭಾಗವಹಿಸಲಿದ್ದಾರೆ.

ಬೆಂಗಳೂರು (ಮೇ.14): ರಾಜ್ಯದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ಮನೆ ಮನೆಗೂ ಯೋಗ, ಎಲ್ಲರಿಗೂ ಯೋಗ’ ಎಂಬ ಪರಿಕಲ್ಪನೆಯಲ್ಲಿ ಗ್ರಾಮೀಣ ಭಾಗದವರೆಗೆ ಯೋಗದ ಕುರಿತು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. 

ಇದಕ್ಕಾಗಿ ಜೂ.21ರ ಯೋಗ ದಿನಾಚರಣೆ ದಿನ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಯೋಗದ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು. ಮುಖ್ಯಕಾರ್ಯಕ್ರಮವನ್ನು ವಿಧಾನಸೌಧದ ಆವರಣದಲ್ಲಿ ಆಯೋಜಿಸಲು ಉದ್ದೇಶಿಸಿದ್ದು, ಜೂ.21 ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಸುಮಾರು 5000 ಯೋಗಪಟುಗಳು ಯೋಗಾಭ್ಯಾಸ ನಡೆಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಆರೋಗ್ಯ ಸೌಧದಲ್ಲಿ ಬುಧವಾರ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಆರೋಗ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ’ ಎಂಬ ಘೋಷವ್ಯಾಕ್ಯೆಯಡಿ ಯೋಗ ದಿನ ಆಚರಿಸಲಾಗುತ್ತಿದೆ.

ರಾಜ್ಯಪಾಲರಿಂದ ಉದ್ಘಾಟನೆ:

ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಯೋಗ ದಿನಾಚರಣೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಯೋಗಗುರುಗಳು, ಗಣ್ಯರು, ಕ್ರೀಡಾಸಾಧಕರು, ಸಿನಿ ತಾರೆಯರು ಭಾಗವಹಿಸಲಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದರು.

ಯೋಗ ಪ್ರಾತ್ಯಕ್ಷಿಕೆ:

ಕಾರ್ಯಕ್ರಮದಲ್ಲಿ ಆಯುಷ್ ಮಂತ್ರಾಲಯ ಸೂಚಿಸಿರುವ 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶಿಸುತ್ತೇವೆ.

ಯೋಗದ ಕುರಿತು ಜಾಗೃತಿ ಮೂಡಿಸಲು ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಮಾರ್ಗಸೂಚಿ ಹಾಗೂ ಅನುದಾನ ಸಹ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಮೈಸೂರಿನಲ್ಲಿ ಯೋಗ ಸ್ಪರ್ಧೆ ನಡೆಯಲಿದೆ. ಜೂನ್ ಮೊದಲ ವಾರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ‘ಆರೋಗ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ವಿಜ್ಞಾನ ಯೋಗ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಆಯುಷ್ ಆಯುಕ್ತ ಸುನೀಲ್ ಪನ್ವರ್ ಸೇರಿ ಹಲವರು ಹಾಜರಿದ್ದರು.

- ಜೂ.21ಕ್ಕೆ 5,000 ಮಂದಿಯಿಂದ ಯೋಗಾಭ್ಯಾಸ । ವಿಧಾನಸೌಧದ ಆವರಣದಲ್ಲಿ ಈ ಕಾರ್ಯಕ್ರಮ । ಈ ವೇಳೆ 45 ನಿಮಿಷದ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನ । ಗವರ್ನರ್‌ರಿಂದ ಚಾಲನೆ, ಸಿಎಂ, ಡಿಸಿಎಂ ಭಾಗಿ: ದಿನೇಶ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾಳೆ ಸುಪ್ರೀಂ ನಲ್ಲಿ ದರ್ಶನ್ ವಿಚಾರಣೆ, ನಾಳೆಯೇ ಜಾಮೀನು ಸಿಗುತ್ತಾ?
ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು?