ಪಹಲ್ಗಾಂ ಘಟನೆ ಕಾರಣ ಕಾಶ್ಮೀರಿಗರ ನಿಂದನೆ ಬೇಡ: ರವಿಶಂಕರ್‌ ಗುರೂಜಿ ಮನವಿ

Published : Apr 30, 2025, 05:18 AM ISTUpdated : Apr 30, 2025, 05:19 AM IST
ಪಹಲ್ಗಾಂ ಘಟನೆ ಕಾರಣ ಕಾಶ್ಮೀರಿಗರ ನಿಂದನೆ ಬೇಡ: ರವಿಶಂಕರ್‌ ಗುರೂಜಿ ಮನವಿ

ಸಾರಾಂಶ

ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪಹಲ್ಗಾಂ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗರನ್ನು ನಿಂದನೆಗೆ ಗುರಿಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

ಬೆಂಗಳೂರು (ಏ.30) ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪಹಲ್ಗಾಂ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗರನ್ನು ನಿಂದನೆಗೆ ಗುರಿಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಅಹಿಂಸೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
'ಅಹಿಂಸೆ ದೌರ್ಬಲ್ಯವಲ್ಲ, ಅದು ಮನಸ್ಸಿನ ಸ್ಥಿತಿ. ದೇಶ ರಕ್ಷಣೆಗಾಗಿ ಅಥವಾ ಯಾರನ್ನಾದರೂ ಅಪಾಯದಿಂದ ಕಾಪಾಡಲು ನಡೆಸುವ ಹೋರಾಟ ಹಿಂಸೆಯಾಗುವುದಿಲ್ಲ. ನಿಜವಾದ ಶತ್ರುಗಳು ಧರ್ಮಾಂಧತೆ ಮತ್ತು ಮೂಲಭೂತವಾದ. ಇವುಗಳನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು' ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.

ಇದನ್ನೂ ಓದಿ: ಪಹಲ್ಗಾಂ ಉಗ್ರ ದಾಳಿ: ಮಗುವಿನ ಹಠದಿಂದ ಪಾರಾದ ಕುಟುಂಬ! ಅಂದು ಆಗಿದ್ದೇನು?

ಪಹಲ್ಗಾಂ ದಾಳಿಯ ಕಾರಣದಿಂದ ಕಾಶ್ಮೀರಿಗರನ್ನು ಗುರಿಯಾಗಿಸಿ ನಿಂದಿಸುವುದು ಸರಿಯಲ್ಲ ಎಂದ ಗುರೂಜಿ ಅವರು, 'ಈ ಮೂಲಕ ಎಲ್ಲರಿಗೂ ಮನವಿ ಮಾಡುತ್ತೇನೆ, ಕಾಶ್ಮೀರಿಗರನ್ನು ನಿಂದನೆಗೆ ಒಳಪಡಿಸಬೇಡಿ'ಎಂದು ಕೋರಿದ್ದಾರೆ. ಈ ಮನವಿಯ ಮೂಲಕ ರವಿಶಂಕರ್ ಗುರೂಜಿ ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯ ಸಂದೇಶವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್