ಅಬ್ಬಾ.. ಇದು 20 ಕೋಟಿಯ 110 ಕೆಜಿ ತೂಕದ ದೈತ್ಯ ಶ್ವಾನ!

By Govindaraj SFirst Published Jan 23, 2023, 8:23 AM IST
Highlights

ಬೆಂಗಳೂರಿನ ಶ್ವಾನ ಪ್ರಿಯರಾದ ಸತೀಶ್‌ ಕ್ಯಾಡಬಾಮ್ಸ್‌ ಅವರು ‘ಹೈದರ್‌ ಕ್ಯಾಡಬಾಮ್ಸ್‌’ ಶ್ವಾನವನ್ನು ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿಗೆ ಬಂದಿದ್ದ ಅಷ್ಟೂಶ್ವಾನಗಳಲ್ಲಿ ಹೈದರ್‌ ನಾಯಿ ಬಗ್ಗೆ ಜನ ಕುತೂಹಲ ತೋರಿದರು. 

ಬಳ್ಳಾರಿ (ಜ.23): ನಗರದ ವಾಡ್ರ್ಲಾ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನ ಸ್ಪರ್ಧೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು 150 ವಿವಿಧ ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ ಸಹ ಬೆಂಗಳೂರಿನಿಂದ ಬಂದಿದ್ದ ಸುಮಾರು 20 ಕೋಟಿ ಮೌಲ್ಯದ್ದೆಂದು ಅಂದಾಜಿಸಲಾದ ‘ಕೊಕೇಶಿಯನ್‌ ಶೆಫರ್ಡ್‌’ ಶ್ವಾನ ‘ಹೈದರ್‌ ಕ್ಯಾಡಬಾಮ್ಸ್‌’ ಎಲ್ಲರ ಗಮನ ಸೆಳೆಯಿತು.

ಶ್ವಾನ ಸ್ಪರ್ಧೆ ಮುಗಿಯುವ ಹೊತ್ತಿಗೆ ಬೆಂಗಳೂರಿನ ಹವಾನಿಯಂತ್ರಿತ ವಾಹನದಲ್ಲಿ ಆಗಮಿಸಿದ್ದ ಕೊಕೇಶಿಯನ್‌ ಶೆಫರ್ಡ್‌ ಶ್ವಾನ ಸಿಂಹದ ಹೆಜ್ಜೆ ಇರಿಸಿಕೊಂಡು ಮೈದಾನ ಪ್ರವೇಶಿಸಿತು. .20 ಕೋಟಿ ಮೌಲ್ಯದ ನಾಯಿ ವೀಕ್ಷಣೆಗೆಂದೇ ಕುತೂಹಲದಿಂದ ಕಾದಿದ್ದ ಶ್ವಾನಪ್ರಿಯರು ದೈತ್ಯಾಕಾರದ ಶ್ವಾನ ಪ್ರವೇಶವಾಗುತ್ತಿದ್ದಂತೆಯೇ ಹರ್ಷೋದ್ಗಾರದ ಮೂಲಕ ಸ್ವಾಗತಿಸಿಕೊಂಡರು.

ಗ್ರಾಮವಾಸ್ತವ್ಯ ನಂತರ ದಲಿತರ ಮನೇಲಿ ಅಶೋಕ್‌ ಉಪಾಹಾರ

ಪ್ರದರ್ಶನದಲ್ಲಿ ಹೈದರ್‌ ಕ್ಯಾಡಬಾಮ್ಸ್‌ ನದ್ದೇ ಹವಾ: ಬೆಂಗಳೂರಿನ ಶ್ವಾನ ಪ್ರಿಯರಾದ ಸತೀಶ್‌ ಕ್ಯಾಡಬಾಮ್ಸ್‌ ಅವರು ‘ಹೈದರ್‌ ಕ್ಯಾಡಬಾಮ್ಸ್‌’ ಶ್ವಾನವನ್ನು ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿಗೆ ಬಂದಿದ್ದ ಅಷ್ಟೂಶ್ವಾನಗಳಲ್ಲಿ ಹೈದರ್‌ ನಾಯಿ ಬಗ್ಗೆ ಜನ ಕುತೂಹಲ ತೋರಿದರು. ಕೆಲವರು ಅದರೊಂದಿಗೆ ಸೆಲ್ಫಿಗೆ ಮುಗಿ ಬಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಶಾಸಕ ಸೋಮಶೇಖರ್‌ ರೆಡ್ಡಿ ಸಹ ದುಬಾರಿ ನಾಯಿ ಜೊತೆ ಸೆಲ್ಫಿ ಪಡೆದು ಸಂಭ್ರಮಿಸಿದರು.

ಜಗತ್ತಿನಲ್ಲೇ ಸೂಪರ್‌ ನ್ಯಾಚುರಲ್‌ ಡಾಗ್‌ ಎನ್ನಲಾಗುವ ಈ ಶ್ವಾನ 110 ಕೆಜಿ ತೂಕವಿದೆ. ಇದೊಂದು ಅತಿ ಹೆಚ್ಚು ಗಾತ್ರದ ಶ್ವಾನವಾಗಿದೆ. ಬೆಂಗಳೂರು ಮೂಲದ ಉದ್ಯಮಿ ಸತೀಶ್‌ ಅವರ ಬಳಿ ಬೆಂಗಳೂರಿನ ಉದ್ಯಮಿಯೊಬ್ಬರು ಈ ನಾಯಿಗೆ 20 ಕೋಟಿ ನೀಡುವುದಾಗಿ ಹೇಳಿದ್ದರಿಂದ ಈ ನಾಯಿಗೆ 20 ಕೋಟಿ ಮೌಲ್ಯ ಬಂದಿದೆ ಎಂದು ಹೇಳಲಾಗುತ್ತಿದೆ.

ಈ ನಾಯಿಗೆ ಪ್ರತಿ ದಿನ 3 ಕೆಜಿ ಚಿಕನ್‌, ಅರ್ಧ ಕೆಜಿ ಸಿದ್ಧ ಆಹಾರ, 6 ಮೊಟ್ಟೆ ನೀಡಲಾಗುತ್ತಿದೆ. ಇದರ ಮರಿಗಳು 6 ಲಕ್ಷ ಬೆಲೆಗೆ ಮಾರಾಟವಾಗುತ್ತವೆ. ರಷ್ಯಾ ಮೂಲದ ಈ ಶ್ವಾನ ಮಾಲಿಕರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಬಳ್ಳಾರಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಯಾವುದೇ ಹಣ ಪಡೆಯದೆ ಉಚಿತವಾಗಿಯೇ ಬಂದಿದ್ದೇನೆ ಎನ್ನುತ್ತಾರೆ ಇಂಟರ್‌ ನ್ಯಾಷನಲ್‌ ಸೆಲೆಬ್ರೆಟಿ ಡಾಗ್‌ ಬ್ರೀಡರ್‌ ಸತೀಶ್‌ ಕ್ಯಾಡಬಾಮ್ಸ್‌ .

ಹಿಟ್ಲರ್‌ ರೀತಿ ಮೋದಿಯೂ ಪತನ: ಸಿದ್ದರಾಮಯ್ಯ ಭವಿಷ್ಯ

ಇನ್ನು ಶ್ವಾನ ಪ್ರದರ್ಶನದಲ್ಲಿ ಹಲವರು ತಮ್ಮ ನೆಚ್ಚಿನ ನಾಯಿಗಳ ಜತೆ ಮೈದಾನಕ್ಕೆ ಆಗಮಿಸಿ ಸ್ಪರ್ಧೆಗೊಡ್ಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಶ್ವಾನಗಳೊಂದಿಗೆ ಆಗಮಿಸಿದ್ದರೆ, ಕೊಕೇಶಿಯನ್‌ ಶೆಫರ್ಡ್‌ ಶ್ವಾನ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

click me!