ನಾನು ನಿನ್ನೆತಾನೇ ಮೊಮ್ಮಗಳ ನಾಮಕರಣ ಮಾಡಿಕೊಂಡು ಒಳ್ಳೆ ಮೂಡ್‌ನಲ್ಲಿ ಬಂದಿದ್ದೇನೆ, ಈ ರೀತಿ ಪ್ರಶ್ನೆ ಕೇಳ್ತೀರಾ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ಅಸ್ತು ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆದ ಘಟನೆ ನಡೆಯಿತು.
ಬೆಳಗಾವಿ (ಅ.19): ನಾನು ನಿನ್ನೆತಾನೇ ಮೊಮ್ಮಗಳ ನಾಮಕರಣ ಮಾಡಿಕೊಂಡು ಒಳ್ಳೆ ಮೂಡ್‌ನಲ್ಲಿ ಬಂದಿದ್ದೇನೆ, ಈ ರೀತಿ ಪ್ರಶ್ನೆ ಕೇಳ್ತೀರಾ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ಅಸ್ತು ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆದ ಘಟನೆ ನಡೆಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾನೂನಾತ್ಮಕವಾದ ಹೋರಾಟ ಮಾಡೋದಕ್ಕೆ ಡಿಕೆ ಶಿವಕುಮಾರ ಸಮರ್ಥರಿದ್ದಾರೆ. ಸಿಬಿಐ ತನಿಖೆಯನ್ನು ಅವರು ನಿಭಾಯಿಸುತ್ತಾರೆ. ನಮ್ಮ ದೇಶದ ಸಂವಿಧಾನದ ಬಗ್ಗೆ ನಮಗೆ ಗೌರವವಿದೆ. ಈ ವಿಚಾರಣೆಯಲ್ಲಿ ಖಂಡಿತವಾಗಿಯೂ ಜಯಶಾಲಿಯಾಗಿ ಹೊರಗೆ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಎಚ್‌ಡಿ ಕುಮಾರಸ್ವಾಮಿ ಮಹಾಭಾರತದ ಶಕುನಿ ಇದ್ದಹಾಗೆ: ಕಾಂಗ್ರೆಸ್ ವಾಗ್ದಾಳಿ
ಡಿಸಿಎಂ ಡಿಕೆ ಶಿವಕುಮಾರ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರು ಬಾರದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಈ ವಿಚಾರದಲ್ಲಿ ಮುಜುಗರ ಅನ್ನುವಂಥದ್ದು ಏನೂ ಇಲ್ಲ. ಅದನ್ನ ಹೊರತುಪಡಿಸಿ ರಾಜಕಾರಣ ಮಾಡಬೇಕು. ನನಗೆ ಮೊದಲೇ ದಿನಾಂಕ ಫಿಕ್ಸ್ ಆಗಿತ್ತು, ಹೀಗಾಗಿ ಭದ್ರಾವತಿಗೆ ಹೋಗಿದ್ದೆ. ನಮ್ಮ ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿದ್ರು. ದಸರಾ ಹಬ್ಬದ ಸಂದರ್ಭದಲ್ಲಿ ಕೆಲಸಗಳು ಇರುತ್ತವೆ ಕೆಲವರು ಬ್ಯುಸಿ ಇದ್ದರು. ಈಗಾಗಲೇ ಎಲ್ಲರೂ ಈ ಬಗ್ಗೆ ಮಾತಾಡಿದ್ದಾರೆ. ನಾನು ಕೂಡ ಅಧ್ಯಕ್ಷರ ಗಮನಕ್ಕೆ ತಂದು ಭದ್ರಾವತಿಗೆ ಹೋಗಿದ್ದೆ. ಬೆಳಗಾವಿ ರಾಜಕೀಯ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಜೊತೆ ಯಾವುದೇ ಭಿನ್ನಾಬಿಪ್ರಾಯ ಇಲ್ಲ. ಭಿನ್ನಾಭಿಪ್ರಾಯ ಇದೆ ಎನ್ನುತ್ತಿರುವುದು ನಿಜವಾಗಲೂ ನನಗೂ ಆಶ್ಚರ್ಯವಾಗುತ್ತಿದೆ ಎಂದರು.
ನಮ್ಮಲ್ಲಿ ಏನೇ ಸಮಸ್ಯೆ ಇದ್ರೂ ನಾವು ಹಂಚಿಕೊಳ್ಳುತ್ತೇವೆ, ಅವರು ಹಂಚಿಕೊಳ್ಳುತ್ತಾರೆ. ನಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಎಲ್ಸಿ ಚುನಾವಣೆಯಿಂದ ಇಲ್ಲಿಯ ತನಕ ಒಂದೇ ಒಂದು ವಿಷಯದಲ್ಲಿ ನಮ್ಮ ನಡುವೆ ಬಿನ್ನಾಭಿಪ್ರಾಯಗಳು ಇಲ್ಲ. ಇದನ್ಮ ಗಟ್ಟಿ ಧ್ವನಿಯಲ್ಲಿ ನಾನು ಸ್ಪಷ್ಟಪಡಿಸುತ್ತೇನೆ. ನಾನು ಈ ಸ್ಥಾನಕ್ಕೆ ಬರುವುದಕ್ಕೆ ಎಷ್ಟು ಕಷ್ಟಪಟ್ಟಿದ್ದೇನೆ. ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆದ್ದು ಈ ಸ್ಥಾನಕ್ಕೆ ಬಂದಿದ್ದೇನೆ.
ಇಷ್ಟೆಲ್ಲಾ ಆದರೂ ಕೂಡ ಪದೇ ಪದೇ ನನ್ನ ಹೆಸರನ್ನ ಎಳೆದು ತರುವುದು ಸೂಕ್ತ ಅಲ್ಲ. ಸತೀಶ್ ಜಾರಕಿಹೊಳಿ ಅವರು ಹೇಳಿರುವ ಕಾಂಪ್ರಮೈಸ್ ಯಾವುದು ಅಂತಾ ನನಗೆ ಗೊತ್ತಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಸತೀಶ್ ಜಾರಕಿಹೊಳಿ ಕಾಂಪ್ರಮೈಸ್ ಅಂತ ಹೇಳಬೇಡಿ. ನನಗೆ ಒಳ್ಳೆ ಖಾತೆಯನ್ನು ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿಯನ್ನ ನನಗೆ ಕೊಟ್ಟಿದ್ದಾರೆ. ನಮ್ಮ ಫೋಕಸ್ ಏನೇ ಇದ್ದರೂ ಕೂಡ ಲೋಕಸಭಾ ಚುನಾವಣೆ ಎಂದರು.
ಸತೀಶ್ ಜಾರಕಿಹೊಳಿ ನಮ್ಮ ನಾಯಕರು. ಅವರು ಆರು ಬಾರಿ ಶಾಸಕರು, ನಾನು ಎರಡು ಬಾರಿ ಶಾಸಕಿಯಾಗಿಕ ಮೊದಲ ಬಾರಿ ಸಚಿವೆ ಆಗಿದ್ದೇನೆ. ಅವರು ಅನುಭವಸ್ಥರು, ಕಾಂಪ್ರಮೈಸ್ ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಒಳ್ಳೆ ಭಾವನೆಯಿಂದ ಹೇಳಿರಬಹುದು. ಅವರು ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆ. ನನ್ನ ಕ್ಷೇತ್ರದಲ್ಲಿ ಅವರಿಗೆ ಬೇಕಾದ ಅಧಿಕಾರಿಗಳನ್ನ ಹಾಕಿದಾಗ ನಾವು ಎಸ್ ಎನ್ನುತ್ತೇವೆ. ನಾವು ಒಬ್ಬರನ್ನ ಹಾಕಿದಾಗ ಅವರು ಎಸ್ ಎನ್ನುತ್ತಾರೆ ಇದು ಕಾಂಪ್ರಮೈಸ್. ಇನ್ನೊಮ್ಮೆ ಸತೀಶ್ ಜಾರಕಿಹೊಳಿಯವರನ್ನು ಹೋಗಿ ಕೇಳಿ, ಕಾಂಪ್ರಮೈಸ್ ಅನ್ನುವಂತ ವಿಚಾರ ಯಾವ ಕಾರಣಕ್ಕೆ ಅಂತ. ಲಕ್ಷ್ಮೀ ಹೆಬ್ಬಾಳ್ಕರ್ ಇಂದ ಜಿಲ್ಲಾಡಳಿತ ವಿಚಾರಕ್ಕೆ ಏನಾದರೂ ತೊಂದರೆ ಆಗ್ತಿದ್ಯಾ? ನಿಮಗೆ ಏನಾದರೂ ತೊಂದರೆ ಆಗ್ತಿದೆಯಾ ಅಂತ ಅವರನ್ನೇ ಕೇಳಿ ಸ್ಪಷ್ಟಪಡಿಸಿಕೊಳ್ಳಿ ಎಂದರು.
ಬೆಳಗಾವಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಧ್ಯಕ್ಷರನ್ನು ಯಾಕೆ ತೆಗೆದುಕೊಂಡು ಬರ್ತೀರಾ? ಕೊರೋನಾ ವೇಳೆ ಅಧ್ಯಕ್ಷ ಸ್ಥಾನವನ್ನ ತೆಗೆದುಕೊಂಡವರು ಅವರು. ಇಡೀ ರಾಜ್ಯದ ಮೂಲೆ ಮೂಲೆಯಲ್ಲಿ ಸುತ್ತಾಡಿ ಸಂಘಟನೆ ಮಾಡಿ 135 ಸೀಟುಗಳನ್ನು ತಂದಿದ್ದಾರೆ. ಹಸ್ತಕ್ಷೇಪ ಏನು ಮಾಡಿದ್ದಾರೆ ಅಂತ ತೋರಿಸಿ ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು.
ಇನ್ನು ಸತೀಶ್ ಜಾರಕಿಹೊಳಿ ಮೈಸೂರು ಪ್ರವಾಸ ಸಂಬಂಧ ಪ್ರತಿಕ್ರಿಯಿಸಿದ ಸಚಿವೆ, ಸತೀಶ್ ಜಾರಕಿಹೊಳಿ ಮೈಸೂರು ಪ್ರವಾಸಕ್ಕೆ ನನ್ನನ್ನೂ ಕರೆದಿದ್ದರು. ಟ್ರೈನ್ ಬುಕ್ ಮಾಡ್ತಾ ಇದ್ದೀವಿ ನೀವೂ ಬರಬೇಕು ಅಂತ ಹೇಳಿದ್ರು. ನಾನೂ ಬರ್ತಿನಿ ಅಂತಾ ಒಪ್ಪಿಕೊಂಡಿದ್ದೆ. 15ನೇ ತಾರೀಕು ರಾತ್ರಿ ಹೋಗುವುದಿತ್ತು.ಆದರೆ ಶುಗರ್ ಫ್ಯಾಕ್ಟರಿ ಬಾಯ್ಲರ್ ಪೂಜೆ ಇದೆ ಅಂತ ಬರಲು ಆಗಲ್ಲ ಅಂತ ತಿಳಿಸಿದೆ. ಹೀಗಿರುವಾಗ ನನ್ನನ್ನೂ ಡಿಕೆ ಶಿವಕುಮಾರ ವಿರುದ್ಧ ಅಂತಾ ಹೇಳಲು ಸಾಧ್ಯವೇ? ಸತೀಶ್ ಜಾರಕಿಹೊಳಿ ಮುತ್ಸದ್ಧಿ ರಾಜಕಾರಣಿ. ಅವರೊಬ್ಬರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಈ ಮಟ್ಟಕ್ಕೆ ಹೇಳಿದ್ದು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದರು.
ಬೆಳಗಾವಿ ಟಿಕೆಟ್ ವಿಚಾರಕ್ಕೆ ಸತೀಶ್ ಜಾರಕಿಹೊಳಿಯವರಿಗೆ ಪೈಪೋಟಿ ನಡೆದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಒಂದು ಕಡೆಯಾದರೂ ನಾನು ನನ್ನ ಮಗನಿಗೆ ಲೋಕಸಭೆ ಟಿಕೆಟ್ ಬೇಕು ಅಂತ ಹೇಳಿದ್ದೇನಾ? ಅಥವಾ ಅರ್ಜಿ ಹಾಕಿದ್ದೇನಾ ತೋರಿಸಿ ಎಂದರು.
ಜೆಡಿಎಸ್ ರಾಜ್ಯ ಘಟಕಗಳನ್ನು ವಿಸರ್ಜಿಸಿದ ಹೆಚ್.ಡಿ. ದೇವೇಗೌಡ: ಹೊಸ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ!
ಗೆದ್ದಿರುವ ಶಾಸಕರು, ಸೋತಿರುವ ಶಾಸಕರು ಜಿಲ್ಲಾ ಮುಖಂಡರು ಹೈಕಮಾಂಡ್ ಪಕ್ಷದ ಅಧ್ಯಕ್ಷರು ರಾಜ್ಯದ ಮುಖ್ಯಮಂತ್ರಿಗಳು ಕೂತು ಅಂತಿಮವಾಗಿ ತೀರ್ಮಾನ ಮಾಡಬೇಕು. ಇದು ಪಾರ್ಲಿಮೆಂಟ್ ಟಿಕೆಟ್, ಬಸ್ ಟಿಕೆಟ್ ಅಲ್ಲ. ಚಿಕ್ಕೋಡಿ ಬೆಳಗಾವಿ ಪಾರ್ಲಿಮೆಂಟ್ ಗೆಲ್ಲೋದೊಂದೇ ನಮ್ಮ ಗುರಿ ಇದೆ. ಇದರ ಹೊರತಾಗಿ ನನ್ನ ಮತ್ತೆ ಸತೀಶ್ ಜಾರಕಿಹೊಳಿ ಅವರ ಮಧ್ಯೆ ಯಾವುದೇ ಪೈಪೋಟಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ನೇಮಕ ವಿಚಾರಕ್ಕೆ, ಈಗಾಗಲೇ ಬಹಳಷ್ಟು ಪ್ರಶ್ನೆ ಕೇಳಿದ್ದೀರಾ, ಬಹಳಷ್ಟು ದೊಡ್ಡವಳನ್ನಾಗಿ ಮಾಡಬೇಡಿ ಎಂದು ಮಾಧ್ಯಮಗಳಿಗೆ ಕೈಮುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.