ಸುತ್ತೂರು ಜಾತ್ರೆ ಇದೊಂದು ಐತಿಹಾಸಿಕ ಸಾಂಸ್ಕೃತಿಕ ಸಭೆ ಇದ್ದಹಾಗೆ ನಮ್ಮನ್ನೆಲ್ಲರನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡ್ತಾರೆ. ನಾವು ವಿಧಾನಸೌಧದಲ್ಲಿರುತ್ತೇವೆ. ಅದಾದ ಬಳಿಕ ಇಂಥ ಸಭೆಗಳಲ್ಲಿ ಸೇರುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಮೈಸೂರು (ಫೆ.10): ಸುತ್ತೂರು ಜಾತ್ರೆ ಇದೊಂದು ಐತಿಹಾಸಿಕ ಸಾಂಸ್ಕೃತಿಕ ಸಭೆ ಇದ್ದಹಾಗೆ ನಮ್ಮನ್ನೆಲ್ಲರನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡ್ತಾರೆ. ನಾವು ವಿಧಾನಸೌಧದಲ್ಲಿರುತ್ತೇವೆ. ಅದಾದ ಬಳಿಕ ಇಂಥ ಸಭೆಗಳಲ್ಲಿ ಸೇರುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಮಹಾಸ್ವಾಮಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ, ಮಠದಲ್ಲಿ ಜಾತಿ ಧರ್ಮ ಲೆಕ್ಕ ಹಾಕುವುದಿಲ್ಲ. ಎಲ್ಲರನ್ನು ಸರಿಸಮವಾಗಿ ನೋಡ್ತಾರೆ. ನಮ್ಮ ಮೈಸೂರು ಮಹಾರಾಜರು ಅರಮನೆ ಕಟ್ಟಿದ್ದಾರೆ. ಸುತ್ತೂರು ಶ್ರೀಗಳು ಅರಿವಿನಮನೆ ಕಟ್ಟಿದ್ದಾರೆ. ಇದನ್ನ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಶ್ರೀಗಳು ಹೇಳಿದ್ರು. ಇದು ಸುತ್ತೂರ ಮಠಕ್ಕೆ ಇರುವ ಪರಂಪರೆ. ನಾವು ಮನೆಯನ್ನ ಕಾಪಾಡುವ ರೀತಿ ಮಠ ಕಾಪಾಡಬೇಕು ಅಂತ ಹಿರಿಯರು ಹೇಳುತ್ತಿದ್ದರು. ಹೀಗಾಗಿ ನಾವು ಮಠಗಳನ್ನು ಕಾಪಾಡಬೇಕು. ಗ್ರಾಮೀಣ ಕ್ರೀಡೆಗಳನ್ನ ನಾವು ಮರೆಯಬಾರದು ಅಂತಹ ಕ್ರೀಡೆಗಳನ್ನು ಸುತ್ತೂರು ಜಾತ್ರೆಯಲ್ಲಿ ಆಯೋಜನೆ ಮಾಡಿದ್ದಾರೆ ಎಂದರು.
ಮಾಂಸಾಹಾರ ತಿಂದು ಸಿಎಂ ಸುತ್ತೂರು ಮಠಕ್ಕೆ ಹೋಗಿಲ್ಲ: ಬಿಜೆಪೀದು ಬರೀ ಇದೇ ಆಯ್ತು: ಎಂಬಿ ಪಾಟೀಲ್ ಗರಂ
ಒಳ್ಳೆಯ ಸಂಸ್ಕಾರ, ನಡತೆಯನ್ನು ಕಲಿತು ಬಿಟ್ಟುಹೋಗಬೇಕು. ನಾವು ಇಂದು ಏನೇ ಗಳಿಸಿದ್ರೂ ಅದನ್ನು ನಾವು ತೆಗೆದುಕೊಂಡು ಹೋಗುವುದಿಲ್ಲ, ಹೋಗಲು ಸಾಧ್ಯವಿಲ್ಲ. ನಾನು ಈ ಹಿಂದೆ ಮೇಕೆದಾಟು ಪಾದಯಾತ್ರೆ ಮಾಡುವ ಸಂಧರ್ಭದಲ್ಲಿ ಶ್ರೀಗಳ ಆಶಿರ್ವಾದ ಪಡೆಯಲು ಬಂದಿದ್ದೆ. ಆಗ ಮಕ್ಕಳಿಂದ ನನಗೆ ಆಶಿರ್ವಾದ ಮಾಡಿಸಿದ್ರು ಅದರಿಂದ ಖುಷಿಯಾಗಿದ್ದೆ.ಮೇಕೆದಾಟು ವಿಚಾರವಾಗಿ ಶ್ರೀಗಳು ಮಾಡಿದ ಆಶಿರ್ವಾದ ಮರೆಯಲು ಸಾಧ್ಯವಿಲ್ಲ ಎಂದರು.