ಮಾಜಿ ಅಗ್ನಿವೀರರಿಗೆ ಸೆಕ್ಯುರಿಟಿ ಗಾರ್ಡ್‌ ಕೆಲಸ: ಡಿಕೆಶಿ ಆಕ್ರೋಶ

By Kannadaprabha News  |  First Published Jun 19, 2022, 11:30 PM IST

*  ಬಿಜೆಪಿ ಸಚಿವರು, ಶಾಸಕರ ಮಕ್ಕಳನ್ನು ಅಗ್ನಿಪಥ್‌ಗೆ ಸೇರಿಸಿ
*  ದೇಶಭಕ್ತ ಸೈನಿಕರನ್ನು ನಾಲ್ಕು ವರ್ಷದ ಬಳಿಕ ಬೀದಿಗೆ ತಳ್ಳಲಿರುವ ಕೇಂದ್ರ ಸರ್ಕಾರ 
*  ಬಡವರ ಮಕ್ಕಳು ಗಾರ್ಡ್‌ ಕೆಲಸ ಮಾಡಬೇಕಾ? 
 


ಬೆಂಗಳೂರು(ಜೂ.19): ಬಿಜೆಪಿ ಶಾಸಕರು ಹಾಗೂ ಸಚಿವರು ತಮ್ಮ ಮಕ್ಕಳನ್ನು ಅಗ್ನಿಪಥ್‌ ಯೋಜನೆಯಡಿ ಸೈನ್ಯಕ್ಕೆ ಸೇರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ ನೀಡಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್‌ ಯೋಜನೆ ದೇಶಭಕ್ತ ಸೈನಿಕರನ್ನು ನಾಲ್ಕು ವರ್ಷದ ಬಳಿಕ ಬೀದಿಗೆ ತಳ್ಳಲಿದೆ ಎಂದರು.

Tap to resize

Latest Videos

ನಾನು ಒಬ್ಬ ಹಿಂದೂ, 400 ದೇವಾಲಯ ಜೀರ್ಣೋದ್ಧಾರ ಮಾಡಿಸಿದ್ದೇನೆ, ಡಿಕೆಶಿ ಡಿಚ್ಚಿ

ಬಿಜೆಪಿ ನಾಯಕರೊಬ್ಬರು ಅಗ್ನಿಪಥ್‌ ಯೋಜನೆ ಕುರಿತು ಮಾತನಾಡುತ್ತಾ 4 ವರ್ಷದ ಬಳಿಕ ಸೆಕ್ಯೂರಿಟಿ ಗಾರ್ಡ್‌, ಫೈರ್‌ ಫೋರ್ಸ್‌ನಲ್ಲಿ ಕೆಲಸ ಆಗುತ್ತದೆ ಎಂದಿದ್ದಾರೆ. 17 ವರ್ಷಕ್ಕೆ ಯುವಕರನ್ನು ಸೇನೆಗೆ ಆಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಇದು ಸೈನಿಕರಿಗೆ ಮಾಡುವ ಅಪಮಾನವಲ್ಲವೇ? ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಸಚಿವರು, ಶಾಸಕರು ತಮ್ಮ ಮಕ್ಕಳನ್ನು ಇದಕ್ಕೆ ಸೇರಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಮೊದಲು ಬಿಜೆಪಿ ಶಾಸಕರ ಶಾಸಕರ ಮಕ್ಕಳನ್ನು ಕಳುಹಿಸಿ. ನಿಮ್ಮ ಮಕ್ಕಳು ಮಾತ್ರ ಡಾಕ್ಟರ್‌, ಎಂಜಿನಿಯರ್‌, ಪೊ›ಫೆಸರ್‌ಗಳಾಗಬೇಕು. ಬೇರೆ ಬಡವರ ಮಕ್ಕಳು ಗಾರ್ಡ್‌ ಕೆಲಸ ಮಾಡಬೇಕಾ? ಇದಕ್ಕೆ ನಮ್ಮ ವಿರೋಧವಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಇದೀಗ ಯುವಕರ ಶೋಷಣೆಗೆ ಮುಂದಾಗಿದ್ದೀರಿ ಎಂದು ಕಿಡಿ ಕಾರಿದರು.
 

click me!