ಬೆಂಗಳೂರಿಗೆ ಮೋದಿ, ಹಲವು ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್ ನಿಷೇಧ: ಇಲ್ಲಿದೆ ಪರ್ಯಾಯ ಮಾರ್ಗಗಳು

By Suvarna News  |  First Published Jun 19, 2022, 6:14 PM IST

* ಜೂನ್20ರಂದು ಬೆಂಗಳೂರಿಗೆ ಪ್ರಧಾನಿ ಆಗಮನ
* ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ
* ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ


ಬೆಂಗಳೂರು, (ಜೂನ್.18): ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಜೂನ್20) ಬೆಂಗಳೂರಿಗೆ ಅಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಅದರಲ್ಲೂ ಪ್ರಮುಖವಾಗಿ ಟ್ರಾಫಿಕ್ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಮೋದಿ ಸಂಚರಿಸುವ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 12:30 ರಿಂದ 03:00 ಗಂಟೆಯ ವರೆಗೆ ಸಂಚಾರ ನಿಷೇಧಿಸಲಾಗಿದೆ. ಹಾಗೇ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದ್ದು. ಅದಕ್ಕೆ ಬದಲಿ ಮಾರ್ಗಗಳಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಹಾಗಾದ್ರೆ  ಆ ರಸ್ತೆಗಳು ಯಾವುವು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

Tap to resize

Latest Videos

 * ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧಿಸಲಾಗಿದ್ದು, ಬದಲಿಗೆ ಮಾರ್ಗವಾಗಿ ನೈಸ್ ರಸ್ತೆ ಮುಖಾಂತರ ನೈಸ್ ಕಛೇರಿ - ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ - ಸೋಂಪುರ ಟೋಲ್ ಮುಖಾಂತರ ಕೆಂಗೇರಿ & ಮೈಸೂರು ಕಡೆಗೆ ಅವಕಾಶ.

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ; ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳಿಗೆ ರಜೆ ಘೋಷಣೆ

* ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್ ವರೆಗೆ ನಿಷೇಧಿಸಲಾಗಿದ್ದು, ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್‌- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ ಮಾಡಿಕೊಡಲಾಗಿದೆ.

* ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧವಿದ್ದು. ಆರ್‌.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ - ನಾಗರಭಾವಿ ಕಡೆಗೆ ಅವಕಾಶ

* ಕೆಂಗುಂಟೆ ಜಂಕ್ಷನ್ - ನಮ್ಮೂರ ತಿಂಡಿ - ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ.
*  ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ

* ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್‌ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ

ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು
* ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‌ನಾಗ್‌ ಸರ್ಕಲ್ ನಿಂದ ರಾಬಿನ್‌ ಥಿಯೇಟರ್ ವರೆಗೆ
* ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್‌ ಬ್ಲಾಕ್ ಜಂಕ್ಷನ್ ವರೆಗೆ
* ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್‌ ವರೆಗೆ

ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ 
* ಕಾಳಿಕಾಂಭ ರಸ್ತೆ & ಪಾರ್ಕ್ ರಸ್ತೆ
* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ
* 6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ & ಪಾರ್ಕ್‌ ರಸ್ತೆ)
* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ವರೆಗೆ

ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇದವಿರುವ ಸ್ಥಳಗಳು‌
(ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06-00 ಗಂಟೆಯ ವರೆಗೆ)

 * ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ 
* ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ
* ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ
* ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು,
* ಮೈಸೂರು ರಸ್ತೆ ನೈಸ್ ರೋಡ್ ಬಳಿ 

ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ
* ಮಾಗಡಿ ಮುಖ್ಯರಸ್ತೆ ಮೂಲಕ ನೈಸ್‌ ರಸ್ತೆ (ಕ್ರ.ಸಂ 1 ರಿಂದ 4) ನೈಸ್ ರಸ್ತೆಯ ಮುಖಾಂತರ
* ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ
* ಹೊಸಕೋಟೆ ಟೋಲ್‌ ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ
* ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಅವಕಾಶ
 

click me!