ಸಿ.ಟಿ.ರವಿ ಬಂಧನ, ಪೊಲೀಸರ ವರ್ತನೆ ಹಿಂದೆ ಡಿಕೆ ಶಿವಕುಮಾರ ಕೈವಾಡವಿದೆ: ಈಶ್ವರಪ್ಪ ಆರೋಪ

By Kannadaprabha News  |  First Published Dec 26, 2024, 6:57 AM IST

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಪೊಲೀಸರ ಕ್ರಮವನ್ನು ಟೀಕಿಸಿದ ಅವರು, ಸಿಐಡಿ ತನಿಖೆ ಬದಲು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.


ಶಿವಮೊಗ್ಗ (ಡಿ26) ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪೋಲಿಸ್ ವೈಫಲ್ಯವನ್ನು ಕಾಂಗ್ರೆಸ್ ನವರು ಎಲ್ಲರೂ ಟೀಕೆಯನ್ನು ಮಾಡುತ್ತಿದ್ದಾರೆ.

ರವಿಗೆ ನೋಟಿಸ್ ಕೊಡಲಿಲ್ಲ ವಿಧಾನಸಭೆ ಇರಬೇಕಾದ್ರೆ ಅಲ್ಲೇ ಬಂಧನ ಮಾಡುತ್ತಾರೆ.

Tap to resize

Latest Videos

undefined

ಸೆಕ್ಯೂರಿಟಿಯ ನಪ ಹೇಳಿ ಇಡೀ ರಾತ್ರಿ ಕಾಡು ಮೇಡು ಗುಡ್ಡಗಳಲ್ಲಿ ಸುತ್ತಾಡಿಸುತ್ತಾರೆ. ಕಾಡು ಮೇಡು ಸುತ್ತಿಸಿ ಸೆಕ್ಯೂರಿಟಿ ಕೊಡಲಾಗುತ್ತದೆ ಎಂದು ಕಾನೂನು ತರಲಿ ಎಂದು ಹರಿಹಾಯ್ದರು. ಸಿ.ಟಿ.ರವಿ ಅವರ ಪ್ರಕರಣವನ್ನು ಸಿಐಡಿಗೆ ಸರ್ಕಾರ ವಹಿಸಿದ್ದು ಸರಿಯಲ್ಲ. ರಾಜ್ಯ ಸರ್ಕಾರದ ಕೈಯಲ್ಲಿ ಸಿಐಡಿ ಇದೆ. ಯಾರು ಕಾನೂನುಬಾಹಿರವಾಗಿ ಮಂತ್ರಿ ಒಬ್ಬರು ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಸಿಐಡಿ ಹೇಳುತ್ತಾ? ನನಗೆ ಇದು ಗೊತ್ತೇ ಇಲ್ಲ ಎಂದು ಗೃಹ ಮಂತ್ರಿ ಪರಮೇಶ್ವರರವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅಂತಾ ಕಾಯ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

ಮುಖ್ಯಮಂತ್ರಿಗಳು ಕೂಡ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಕೆಲಸವನ್ನು ಮಾಡಿರುವುದು ಡಿ.ಕೆ. ಶಿವಕುಮಾರ್ ಅವರೇ ಮಾಡಿದ್ದಾರೆ ಎಂದು ಅನಿಸುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆತ್ಮೀಯತೆಗೆ ಈ ಕೆಲಸವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಅವರನ್ನು ಬಂಧಿಸಿದರೆ ಎಲ್ಲ ವಿಚಾರ ಹೊರಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಿಐಡಿಯವರು ಡಿ.ಕೆ. ಶಿವಕುಮಾರ್ ಅವರನ್ನು ಎನ್ಕ್ವೈರಿ ಮಾಡುತ್ತಾರಾ? ನ್ಯಾಯಾಂಗ ತನಿಖೆ ಆಗಿದ್ದರೆ ಇದಕ್ಕೆ ಒಂದು ರೂಪ ಬರುತ್ತಿತ್ತು

ಸಭಾಪತಿಗಳು ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು.

ನನ್ನ ಒಪ್ಪಿಗೆ ತೆಗೆದುಕೊಳ್ಳದೆ ಪೊಲೀಸಿನವರು ಒಳಗೆ ಬಂದು ರವಿಯರನ್ನ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ರವಿ ಅವರು ಯಾವುದೇ ಅಶ್ಲೀಲ ಪದಗಳನ್ನು ಬಳಸಿಲ್ಲ ಎಂದು ಸಭಾಪತಿಗಳು ನೇರವಾಗಿ ಹೇಳಿದ್ದಾರೆ ಎಂದು ಕುಟುಕಿದರು.

ಸಿ.ಟಿ.ರವಿ ಅವರು ಸದನದಲ್ಲಿ ಯಾವುದೇ ಆಶ್ಲೀಲ ಪದ ಬಳಸಿಲ್ಲ ಎಂದು ಹೇಳುತ್ತಾರೆ. ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದ್ದಾರೆ. ಆದರೂ ಸರ್ಕಾರ ಈ ಪ್ರಕರಣವನ್ನು ಯಾಕೆ ಇಷ್ಟು ಎಳೆದಾಡುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಗೂಂಡಾಗಳನ್ನು ಬಿಟ್ಟು ರವಿಯವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದವರು ಯಾರು ? ಎಲ್ಲವೂ ಬಯಲಿಗೆ ಬರಬೇಕಾಗಿದೆ. ಅದು ಸಿಐಡಿಯಿಂದ ಸಾಧ್ಯವಿಲ್ಲ. ಅದಕ್ಕೆ ನ್ಯಾಯಾಂಗ ತನಿಖೆಗೆ ಸೂಕ್ತ ಎಂದರು.

ರಾಜ್ಯದಲ್ಲಿ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ: ಈಶ್ವರಪ್ಪ

ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಇದನ್ನು ಇಲ್ಲಿಗೆ ಬಿಡಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಹೇಳುತ್ತಿದ್ದಾರೆ. ನನ್ನ ಪ್ರಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಯಾಕೆ ರವಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದರು ಆ ಗುಂಡಾಗಳಿಗೆ ಆದೇಶ ಕೊಟ್ಟವರು ಯಾರು, ಪೊಲೀಸ್ ಅವರಿಗೆ ಪದೇಪದೇ ಕರೆ ಮಾಡುತ್ತಿದ್ದರು ಯಾರು, ಎಂಬುದು ಹೊರ ಬರಬೇಕಾದರೆ ಇದನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

click me!