EDಯಿಂದ ಬಚಾವಾಗಲು ಒಂದು ಹೆಜ್ಜೆ ಮುಂದೆ ಹೋದ ಡಿಕೆ ಶಿವಕುಮಾರ್ ತಾಯಿ, ಪತ್ನಿ

By Web Desk  |  First Published Oct 15, 2019, 10:04 PM IST

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕುಟುಂಬಕ್ಕೆ ಇಡಿ ಬೆನ್ನುಬಿದ್ದಿದೆ. ಇದೀಗ ತಾಯಿ ಹಾಗೂ ಹೆಂಡ್ತಿಗೂ ಇಡಿ ಕಂಟಕ ಎದುರಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಗೌರಮ್ಮ, ಉಷಾ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.


ಬೆಂಗಳೂರು/ನವದೆಹಲಿ, [ಅ.15]:  ಇಡಿ ಸಮನ್ಸ್ ರದ್ದು ಕೋರಿ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರು ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ. 

ಕೋಟ್ಯಂತರ ರು. ಹಣ​ಕಾ​ಸಿನ ವ್ಯವ​ಹಾ​ರ ನಡೆ​ಸಿ​ದ ಡಿಕೆಶಿ ತಾಯಿ ಗೌರಮ್ಮ!

Tap to resize

Latest Videos

undefined

ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಗೌರಮ್ಮ ಮತ್ತು ಉಷಾಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ಗೌರಮ್ಮ ಇಂದು [ಮಂಗಳವಾರ] ದೆಹಲಿಯ ಇಡಿ ಕಚೇರಿಗೆ ಹಾಜರಾಗಬೇಕಿತ್ತು. ಆದ್ರೆ ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದಾರೆ.

ಡಿಕೆ ಶಿವಕುಮಾರ್ ಪತ್ನಿ, ತಾಯಿಗೂ ಇಡಿ ಬುಲಾವ್..!

ಇನ್ನು ಉಷಾ ಅವರಿಗೆ ಅ.17ರಂದು ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ನೀಡಿದೆ. ಇದೀಗ ಈ ಸಮನ್ಸ್ ರದ್ದು ಕೋರಿ ಗೌರಮ್ಮ ಹಾಗೂ ಉಷಾ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ನಾಳೆ [ಬುಧವಾರ] ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.

ವಿಚಾರಣೆಯಿಂದ ಬಚಾವಾಗಲು ಈ ತಂತ್ರ ರೂಪಿಸಿದ್ದು, ಕೋರ್ಟ್ ಏನು ಹೇಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. ಇದೇ ರೀತಿ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಿದ್ದರು.ಅದನ್ನು ರದ್ದು ಕೋರಿ ಡಿಕೆಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಕೋರ್ಟ್ ಡಿಕೆಶಿ ಅರ್ಜಿಯನ್ನು ವಜಾ ಮಾಡಿತ್ತು.

click me!