ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನ ನೇಮಿಸಿದ ರಾಜ್ಯ ಸರ್ಕಾರ

By Web Desk  |  First Published Oct 15, 2019, 8:53 PM IST

ಒಟ್ಟು 3 ಪ್ರಾಧಿಕಾರ ಮತ್ತು 13 ಅಕಾಡೆಮಿಗಳಿಗೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯರಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವ ಅಕಾಡೆಮಿಗೆ ಯಾರು ಅಧ್ಯಕ್ಷರು? ಪಟ್ಟಿ ಈ ಕೆಳಗಿನಂತಿದೆ.


ಬೆಂಗಳೂರು, [ಅ.15]: ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷ ಹಾಗೂ ಸದಸ್ಯರನ್ನ ನೇಮಕ ಮಾಡಲಾಗಿದೆ.

ಒಟ್ಟು 3 ಪ್ರಾಧಿಕಾರ ಮತ್ತು 13 ಅಕಾಡೆಮಿಗಳಿಗೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯರಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು [ಮಂಗಳವಾರ] ಆದೇಶ ಹೊರಡಿಸಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಟಿ.ಎಸ್ ನಾಗಾಭರಣ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಯಾವ ಅಕಾಡೆಮಿಗೆ ಯಾರು ಅಧ್ಯಕ್ಷರಾಗಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

* ಮೂರು ಪ್ರಾಧಿಕಾರದ ಅಧ್ಯಕ್ಷರು

1. ಕನ್ನಡ ಅಭಿವೃದ್ದಿ ಪ್ರಾಧಿಕಾರ- ಟಿ. ಎಸ್ ನಾಗಾಭರಣ

2.ಕುವೆಂಪು ಭಾಷಾ ಭಾರತಿ ಪ್ರಾಧಿಕಾರ- ಅಜರ್ಕಳ ಗಿರೀಶ್ ಭಟ್

3. ಕನ್ನಡ ಪುಸ್ತಕ ಪ್ರಾಧಿಕಾರ - ಡಾ. ಎಂ.ಎನ್ ನಂದೀಶ್ ಹಂಜೆ

* 13 ಅಕಾಡೆಮಿ ಅಧ್ಯಕ್ಷರುಗಳ ಹೆಸರುಗಳು
1. ಕನ್ನಡ ಸಾಹಿತ್ಯ ಅಕಾಡೆಮಿ - ಡಾ. ಬಿ.ವಿ ವಸಂತ ಕುಮಾರ್

2. ಕರ್ನಾಟಕ ನಾಟಕ ಅಕಾಡೆಮಿ - ಭೀಮಸೇನ

3. ಕರ್ನಾಟಕ ಸಂಗೀತ- ನೃತ್ಯ ಅಕಾಡೆಮಿ - ಆನೂರು ಅನಂತ ಕೃಷ್ಣ ಶರ್ಮ

4. ಕರ್ನಾಟಕ ಶಿಲ್ಪಕಲಾ ಅಕಾಡೆಮಿ - ವೀರಣ್ಣ ಅರ್ಕಸಾಲಿ

5. ಕರ್ನಾಟಕ ಲಲಿತಾ ಕಲಾ ಅಕಾಡೆಮಿ - ಡಿ. ಮಹೇಂದ್ರ

6. ಕರ್ನಾಟಕ ಯಕ್ಷಗಾನ ಅಕಾಡೆಮಿ- ಪ್ರೊ. ಎಂ.ಎ ಹೆಗ್ಡೆ

7. ಕರ್ನಾಟಕ ಜಾನಪದ ಅಕಾಡೆಮಿ- ಮಂಜಮ್ಮ ಜೋಗತಿ

8. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ- ದಯಾನಂದ ಕತ್ತಲಸರ

9. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ- ಡಾ. ಪಾರ್ವತಿ ಅಪ್ಪಯ್ಯ

10. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ - ಡಾ. ಜಗದೀಶ್ ಪೈ

11. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ - ರಹೀಂ ಉಚ್ಚಿಲ

12. ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ - ಲಕ್ಷ್ಮೀ ನಾರಾಯಣ ಕಜೆಗದ್ದೆ

13. ಕರ್ನಾಟಕ ಬಯಲಾಟ ಅಕಾಡೆಮಿ - ಸೊರಬಕ್ಕನವರ್ ಹಾವೇರಿ.

click me!