ಆಂಧ್ರಪ್ರದೇಶದಲ್ಲಿ ಕಂದಕಕ್ಕೆ ಬಿದ್ದ ಬಸ್| ಪಶ್ಚಿಮ ಗೋದಾವರಿ ಸಮೀಪ ಪ್ರಪಾತಕ್ಕೆ ಉರುಳಿದ್ದ ಬಸ್| ಕರ್ನಾಟಕ ಮೂಲದ ನಾಲ್ವರು ಸಾವು| ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ನಾಲ್ವರು ದುರ್ಮರಣ.
ಹೈದರಾಬಾದ್, [ಅ.15]: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪ್ರವಾಸಿ ಬಸ್ವೊಂದು ಕಂದಕಕ್ಕೆ ಉರುಳಿ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ 8 ಜನರ ಪೈಕಿ ಕರ್ನಾಟಕ ನಾಲ್ವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಕೆ.ರಮೇಶ್ (56) ಹಾಗೂ ಕೆ.ಅಮೃತವಾಣಿ (48) ಮೃತರು. ಇನ್ನು ಚಿತ್ರದುರ್ಗದವರೇ ಆದ ಎಂ.ಗಾಯಿತ್ರಮ್ಮ (52) ಹಾಗೂ ಎಂ.ಶ್ವೇತಾ (25) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
undefined
ಕೊಪ್ಪಳದಲ್ಲಿ ಮನೆಯ ಚಾವಣಿ ಕುಸಿತ: ಒಂದೇ ಕುಟುಂಬದ ಮೂವರ ಸಾವು
ಆಂಧ್ರದ ಪ್ರವಾಸಿ ಸ್ಥಳವಾದ ಭದ್ರಾಚಲಂ ದೇವಸ್ಥಾನಕ್ಕೆ ತೆರಳಿದ್ದರು. ಆದ್ರೆ, ಯಾತ್ರಿಕರ ಬಸ್ ಮರೇಡುಮಿಲ್ಲಿ-ಚಿಂಟೂರು ಘಾಟಿ ರಸ್ತೆಯಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಕಂದಕಕ್ಕೆ ಬಿದ್ದು ಅವಘಡ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬಸ್ನಲ್ಲಿ 20-25 ಜನರಿದ್ದರು. ಅದರಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರೆಡುಮಿಲ್ಲಿ -ಚಿಂಟೂರು ರಸ್ತೆ ತುಂಬ ಇಕ್ಕಟ್ಟಾಗಿದೆ. ಅಲ್ಲದೆ ಇತ್ತೀಚಿನ ಮಳೆಯಿಂದ ಹಾಳಾಗಿದೆ. ಈಗಲೂ ಕೂಡ ಆ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ವಾಹನ ಸಂಚಾರದ ವೇಳೆ ರಸ್ತೆಯೂ ಸರಿಯಾಗಿ ಕಾಣುವುದಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಂದಕದಲ್ಲಿ ಬಿದ್ದವರನ್ನು ಸ್ಫಳೀಯರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಇದೇ ಸುದ್ದಿಯನ್ನು ತೆಲುಗುನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ