14 ಸಚಿವರ ಸೇರ್ಪಡೆ ಕುರಿತು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮೀಟಿಂಗ್, ಯಾರು ಹೆಸರು ಫೈನಲ್?

Published : Jun 02, 2026, 09:49 PM IST
 DK Shivakumar

ಸಾರಾಂಶ

ಕರ್ನಾಟಕ ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಡಿಕೆಶಿ ಜೊತೆ ಸಚಿವ ಸಂಪುಟ ಸೇರುತ್ತಿರುವ ಕುರಿತು ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ನಡೆಯುತ್ತಿದೆ. 14+1 ಆಯ್ಕೆ ಕುರಿತು ರಾಹುಲ್ ನೀಡಿದ ಸೂಚನೆ ಏನು?

ದೆಹಲಿ (ಜೂ.02) ಕರ್ನಾಟಕ ಹೊಸ ಸಂಪುಟದಲ್ಲಿ ಯಾರು ಸಚಿವರಾಗಿ ಮುಂದುವರಿಯುತ್ತಾರೆ, ಯಾರಿಗೆ ಕೊಕ್? ನೀಡಲಾಗುತ್ತದೆ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ನಾಳೆ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಶಾಸಕಾಂಗ ಪಕ್ಷದಲ್ಲಿ ಡಿಕೆ ಶಿವಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲಿ ಯಾರೆಗೆಲ್ಲಾ ಮಂತ್ರಿಭಾಗ್ಯ ಅನ್ನೋ ಚರ್ಚೆ ಅಂತಿಮ ಘಟ್ಟ ತಲುಪಿದೆ. ದೆಹಲಿಯಲ್ಲಿ ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ಆರಂಭಗೊಂಡಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಮೀಟಿಂಗ್ ನಡೆಸುತ್ತಿದೆ.

ಪರಮೇಶ್ವರ್‌ಗೆ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ

ಈ ಮಹತ್ವದ ಮೀಟಿಂಗ್‌ನಲ್ಲಿ ಡಾ.ಜಿ ಪರಮೇಶ್ವರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಖಾತೆ ನಿಭಾಯಿಸಿದ ಪರಮೇಶ್ವರ್‌ಗೆ ಖಾತೆ ಬದಲಾಯಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

14 ಮಂದಿ ಸಂಪುಟ ಸೇರ್ಪಡೆದೆ ಸಿದ್ದರಾಮಯ್ಯ ಪಟ್ಟ

ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಸಂಪುಟ ಚರ್ಚೆಯಲ್ಲಿ ಸಿದ್ದರಾಮಯ್ಯ ಕೆಲ ಸೂಚನೆ ನೀಡಿದ್ದಾರೆ. 14 ಮಂದಿ ಸೇರ್ಪಡೆಯಾಗಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ 9 ಮಂದಿಗೆ ಮಾತ್ರ ಅವಕಾಶ ಎಂದು ಡಿಕೆ ಶಿವಕುಮಾರ್ ವಾದ ಮಂಡಿಸಿದ್ದಾರೆ. ಹೀಗಾಗಿ ಚರ್ಚೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ.

ರಾಹುಲ್ ಗಾಂಧಿ ನೀಡಿದ ಸೂಚನೆಗಳೇನು?

ಡಿಕೆ ಶಿವಕುಮಾರ್ ಸಂಪುಟ ಸೇರ್ಪಡೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ 5 ಹೊಸ ಮುಖಗಳಿಗೆ ಅವಕಾಶ ನೀಡಲು ಸೂಚಿಸಿದ್ದಾರೆ. ಇತ್ತ 14+1 ಆಯ್ಕೆಯಲ್ಲಿ 5 ಹೊಸಬರು ಇರಬೇಕು ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪಟ್ಟು ಹಿಡಿದಂತೆ 14 ಮಂದಿ ಮೊದಲ ಹಂತದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ.

ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರುವ ಸಂಭಾವ್ಯರ ಪಟ್ಟಿ

  • ಡಾ.ಜಿ ಪರಮೇಶ್ವರ
  • ಕೆಜೆ ಜಾರ್ಜ್
  • ಪ್ರಿಯಾಂಕ ಖರ್ಗೆ
  • ಎಂಬಿ ಪಾಟೀಲ್
  • ಸತೀಶ್ ಜಾರಕಿಹೊಳಿ
  • ಕೃಷ್ಣ ಬೈರೆಗೌಡ
  • ರಾಮಲಿಂಗಾ ರೆಡ್ಡಿ
  • ಯುಟಿ ಖಾದರ್
  • ಯತೀಂದ್ರ ಸಿದ್ದರಾಮಯ್ಯ
  • ಭೈರತಿ ಸುರೇಶ್
  • ಈಶ್ವರ ಖಂಡ್ರೆ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
ಮಂಗಳೂರು ಪಾಲಿಕೆ ಚುನಾವಣೆ ವಿಳಂಬ, 15 ತಿಂಗಳಾದರೂ ಚುನಾವಣೆ ನಡೆಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್