ಎಲ್ಲಿ ಹೋದರು ಚಿಂಚೋಳಿ ಕಾಂಗ್ರೆಸ್ ಶಾಸಕ ?

Published : Feb 06, 2019, 09:41 AM IST
ಎಲ್ಲಿ ಹೋದರು ಚಿಂಚೋಳಿ ಕಾಂಗ್ರೆಸ್ ಶಾಸಕ ?

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದು ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೆ ಅತೃಪ್ತರ ಗುಂಪು ಹಾಜರಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

ಕಲಬುರಗಿ : ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾದವ್ ನಾಪತ್ತೆಯಾಗಿದ್ದು ಇದೀಗ ಅವರು ಎಲ್ಲಿ ತೆರಳಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಇಂದಿನಿಂದ [ಫೆ.6] ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಅತೃಪ್ತರ ಗುಂಪಿನಲ್ಲಿದ್ದ ಜಾಧವ್ ಅಧಿವೇಶನಕ್ಕೆ ರಾಜರಾಗುವುದು ಅನುಮಾನವಾಗಿದೆ. 

ಬೆಂಗಳೂರಿನ ನಿವಾಸದಲ್ಲಿಯೂ ಇಲ್ಲವೆಂದು ಸ್ವತಃ ಉಮೇಶ್ ಜಾದವ್ ಪುತ್ರಿಯೇ ಮಾಹಿತಿ ನೀಡಿದ್ದಾರೆ.  ಅತೃಪ್ತ ಶಾಸಕರ ಟೀಮ್ ನಲ್ಲಿ‌ ಜಾಧವ್ ಕಾಣಿಸಿಕೊಂಡಿದ್ದು,  ಕಾಂಗ್ರೆಸ್ ನಾಯಕರ ಕೈಗೂ ಸಿಗದಂತೆ ಓಡಾಡುತ್ತಿದ್ದಾರೆ.  

ಈಗಾಗಲೇ ಕಾಂಗ್ರೆಸ್ ಮುಖಂಡರಿಗೆ ಅಧಿವೇಶನಕ್ಕೆ ಹಾಜರಾಗುವಂತೆ ಪಕ್ಷದಿಂದ ವಿಪ್ ಜಾರಿ ಮಾಡಿದ್ದು, ಉಮೇಶ್ ಜಾಧವ್ ಗೂ ಕೂಡ ವಿಪ್ ನೀಡಲಾಗಿದೆ. 

ಅಲ್ಲದೆ ಜನವರಿ ತಿಂಗಳಲ್ಲಿ ನಡೆದ ಶಾಸಕಾಂಗ ಸಭೆಗೆ ಆಗಮಿಸದಿರುವುದಕ್ಕೂ  ಖುದ್ದಾಗಿ ಹಾಜರಾಗಿ ಕಾರಣ ತಿಳಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!