
ಗದಗ, (ಸೆ.19): ಎಮ್ಮೆಗಳ ಹಿಂದೆ ಅಡ್ಡಾಡಿದ್ರೆ ಹಾಲು ಸಿಕ್ಕುತ್ತೆ. ಎಮ್‌ಎಲ್‌ಎಗಳ ಹಿಂದೆ ಅಡ್ಡಾಡಿದ್ರೆ ಏನೂ ಸಿಕ್ಕಲ್ಲ ಎಂದು ಹಿಂಬಾಲಕ ಸಂಸ್ಕೃತಿ ಬಗ್ಗೆ ಬಾಲೆಹೊಸೂರು ದಿಂಗಾಲೇಶ್ವರ ಶ್ರೀ ಚಾಟಿ ಬೀಸಿದ್ದಾರೆ.
ಲಕ್ಕುಂಡಿಯಲ್ಲಿ ಖಾಸಗಿ ಸಂಸ್ಥೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಎಮ್ಮೆ ಹಿಂದೆ ಅಡ್ಡಾಡುವವರಿಗೆ ಬೆಲೆ ಇರುತ್ತೆ ಹೊರತಾಗಿ ಎಮ್‌ಎಲ್‌ಎ ಹಿಂದೆ ಅಡ್ಡಾಡುವವರಿಗೆ ಬೆಲೆ ಇರಲ್ಲ ಎಂದು ಭಾಷಣದಲ್ಲಿ ಪರೋಕ್ಷವಾಗಿ ಮುರಘಾ ಮಠ ಬಗ್ಗೆ ಹೇಳಿದರು.
ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ, ಇಂದಿನಿಂದ ಐಪಿಎಲ್ ಕಲರವ; ಸೆ.19ರ ಟಾಪ್ 10 ಸುದ್ದಿ!
ಮಠದ ಆಸ್ತಿ, ಹೊಲ ಮಾರುವ ಸ್ವಾಮಿಗಳನ್ನ ನಾವು ನೋಡಿದ್ದೇವೆ. ಹೊರಗಡೆ ಸಾಲ ಪಡೆದು ಒದ್ದಾಡಿದ ಸ್ವಾಮಿಗಳೂ ಇದ್ದಾರೆ ಎಂದು ದಿಂಗಾಲೇಶ್ವರ ಶ್ರೀ ಟಾಂಗ್ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ