* ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ನಿಶ್ಚಿತ
* ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಸರಿದೂಗಿಸುವ ಕೆಲಸ ಮಾಡ್ತೇವೆ
* ಜನಪರ ಯೋಜನೆ ಜಾರಿಗೆ ತಂದ ಯಡಿಯೂರಪ್ಪ
ದಾವಣಗೆರೆ(ಸೆ.19): ಇಲ್ಲಿಯವರೆಗೆ ಯಾವ ಪ್ರಧಾನಿ ಸ್ವಚ್ಛತೆ ಬಗ್ಗೆ ಮಾತನಾಡಿದ್ದರಾ?. ಎಲ್ಲರಿಗೂ ಗೊತ್ತಿತ್ತು ಸ್ವಚ್ಛತೆ ಇಲ್ಲ ಅಂತ. ಆದರೆ, ಪ್ರಧಾನಿ ಮೋದಿಯವರು ಸಣ್ಣ ವಿಚಾರವನ್ನು ತುಂಬಾ ಚೆನ್ನಾಗಿ ರೂಪಿಸಿದ್ದಾರೆ. ಸ್ವಚ್ಛ್ ಭಾರತದ ಮೂಲಕ ಇಡೀ ದೇಶವನ್ನ ಒಂದುಗೂಡಿಸಿದ್ದಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಲವಾರು ಯೋಜನೆಗಳು ಮನೆ ಮನೆ ಮುಟ್ಟಬೇಕು. ರೈತರ ಆದಾಯ ದ್ವಿಗುಣವಾಗಬೇಕು. ಆ ಬಗ್ಗೆ ಪ್ರಧಾನ ಮಂತ್ರಿಗಳು ಬದ್ಧತೆ ತೋರಿಸಿದ್ದಾರೆ. ರೈತರ ಆದಾಯ ದ್ವಿಗುಣ, ಬೆಳೆ ಪದ್ಧತಿ, ಬೀಜ ಸುಧಾರಣಾ. ಒಲಿಂಪಿಕ್ ಗೇಮ್ಸ್ ಬಗ್ಗೆ ಯಾವ ಪ್ರಧಾನಿ ಮಾಡಿರಲಿಲ್ಲ. ಅದಕ್ಕೆ ಖೇಲೋ ಇಂಡಿಯಾ ಅಂತಹ ಪ್ರೊಗ್ರಾಮ್‌ಗಳನ್ನ ಮಾಡಿದ್ದಾರೆ ಅಂತ ತಿಳಿಸಿದ್ದಾರೆ.
ಜನಪರ ಯೋಜನೆ ಜಾರಿಗೆ ತಂದ ಬಿಎಸ್‌ವೈ
ಯಡಿಯೂರಪ್ಪ ನಾಯಕತ್ವದಿಂದಲೇ ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದೇವೆ. ಜನರ ಧ್ವನಿಯಾಗಿ ರಾಜ್ಯ ಸುತ್ತಾಡಿ ಹೋರಾಟ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಳ್ಳಿ ಮನೆಯಲ್ಲಿ ಕಾರ್ಯಕರ್ತರನ್ನ ಪಡೆಯಲು ಧಣಿವರಿಯದ ಶ್ರಮವಿದೆ. ಯಡಿಯೂರಪ್ಪನವರು ಎಲ್ಲ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಹಾಲು ಉತ್ಪಾದನೆ ಸೈಕಲ್ ಕಾರ್ಯಕ್ರಮ, ಭಾಗ್ಯಲಕ್ಷ್ಮಿ ಅಂತ ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಕರ್ನಾಟಕದ ಜನರ ಜೀವನ ಗುಣಮಟ್ಟದ ಕಾರ್ಯಕ್ರಮಗಳನ್ನು ಮುನ್ನೆಡೆಸಿಕೊಂಡ ಹೋಗಬೇಕಿದೆ. ಯಡಿಯೂರಪ್ಪನವರ ಪ್ರೇರಣೆಯಿಂದ ರಾಜ್ಯದ ಎಲ್ಲ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡುತಿದ್ದೇವೆ. ಇದೇ ವರ್ಷ 20 ಲಕ್ಷ ರೈತ ಮಕ್ಕಳಿಗೆ ಶಿಷ್ಯವೇತನ ಸಿಗುತ್ತಿದೆ. ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಜನಸ್ಪಂದನ ಸರ್ಕಾರ ಇರಬೇಕು ಅನ್ನೋ ಕಾರಣಕ್ಕೆ ಬಿಎಸ್‌ವೈ ಅವರು ವಿಜಯ್ ಭಾಸ್ಕರ್ ಆಯೋಗ ಮಾಡಿದ್ದರು. ಹೀಗೆ ಹತ್ತು ಹಲವು ವಿಚಾರಗಳಿಗೆ. ಜನರ ನಂಬಿಕೆ ವಿಶ್ವಾಸವನ್ನ ಬಿಜೆಪಿ ಆದರ್ಶಗಳನ್ನು ಉಳಿಸಿಕೊಂಡು ಹೋಗುತ್ತೇವೆ. 2023ರ ಚುನಾವಣೆಯನ್ನು ಕಾರ್ಯಕರ್ತರು ಎದೆ ಯುಬ್ಬಿಸಿಕೊಂಡು ಹೋಗುವ ವಾತಾವರಣವನ್ನ ನಿರ್ಮಾಣ ಮಾಡುತ್ತೇವೆ ಅಂತ ಬಹಳ ಆತ್ಮವಿಶ್ವಾಸದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ.
'ಪಂಚಮಸಾಲಿ ಸ್ವಾಮೀಜಿ ಶಾಪದಿಂದ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ'
ಮಂದಿರ ವಿಚಾರದಲ್ಲಿ ಕೆಲ ಭಕ್ತರಿಗೆ ನೋವಾಗಿದೆ: ಸಿಎಂ
ಮಂದಿರದ ತೆರವು ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮುಂದಿನ ಪರಿಣಾಮಗಳನ್ನು ಯೋಚನೆ ಮಾಡಿದ ಶಾಂತಿ ಕದಡುವ ಪ್ರಯತ್ನಗಳು ನಡೆದಿವೆ. ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ ಇದು ನಡೆದಿದೆ. ದೇಶ ಅಭದ್ರ ಮಾಡುವ ಕೆಲ ಸಂಗತಿಗಳು ನಡೆಯುತ್ತವೆ ಇದಕ್ಕೆ ಕೆಲ ಅಧಿಕಾರಿಗಳೂ ಸಹ ಕೈ ಜೋಡಿಸಿದ್ದಾರೆ. ಮಂದಿರದ ವಿಚಾರದಲ್ಲಿ ಹಲವಾರು ನಾಯಕರು ಸಂಘಟನೆ, ಕಾನೂನು ಪಂಡಿತರೊಡನೆ ಚರ್ಚೆ ಮಾಡಿದ್ದೇನೆ. ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇನೆ. ಮಂದಿರದ ವಿಹಾರದಲ್ಲಿ ಕೆಲ ಭಕ್ತರಿಗೆ ನೋವಾಗಿದೆ. ಅಲ್ಲಿನ ಭಕ್ತರ ಮನಸ್ಸಿಗೆ ನೋವಾಗದಂತೆ ಸರಿಪಡಿಸುವ ಕೆಲಸವನ್ನ ಮಾಡುತ್ತೇವೆ ಅಂತ ನಮ್ಮ ಮಿತ್ರರಿಗೆ ಕರೆ ಕೊಡುತ್ತೇನೆ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನ ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಸರಿದೂಗಿಸುವ ಕೆಲಸವನ್ನ ಮಾಡುತ್ತೇವೆ. ನಿಮ್ಮದೇ ಹಿತಚಿಂತನೆಯ ಸರ್ಕಾರವಿದೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ನಿಶ್ಚಿತ
ಬಿಬಿಎಂಪಿಯಲ್ಲಿ ಬಿಜೆಪಿ ಸರ್ವಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಈ ಸಂಬಂಧ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಅಧಿಕಾರ ಹಿಡಿಯಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.