ರೆಡ್ಡಿ ಡೀಲ್ ಕಂಪನಿಗೂ ಕಾಂಗ್ರೆಸ್ ನಾಯಕರಿಗೂ ನಂಟು..?

By Web DeskFirst Published Nov 9, 2018, 9:04 AM IST
Highlights

ರೆಡ್ಡಿ ಡೀಲ್ ಪ್ರಕರಣದ ವಿವಾದಿತ ಕಂಪನಿ ಆ್ಯಂಬಿಡೆಂಟ್ ಜೊತೆ ಕಾಂಗ್ರೆಸ್ ನಾಯಕರಿಗೂ ಸಂಬಂಧವಿದೆ ಎನ್ನುವ ಫೋಟೊ ವೈರಲ್ ಆಗಿದ್ದು ಆದರೆ ಕಂಪನಿಯೊಂದಿಗೆ ಯಾವುದೇ ನಂಟಿಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. 

ಬೆಂಗಳೂರು : ವಿವಾದಕ್ಕೆ ಒಳಗಾಗಿರುವ ಆ್ಯಂಬಿಡೆಂಟ್ ಕಂಪೆನಿಯ ಮಾಲೀಕರ ಜತೆ ಯಾವುದೇ ಸಂಬಂಧ ಹೊಂದಿಲ್ಲ ಮತ್ತು ಅವರ ವೈಯಕ್ತಿಕ ಪರಿ ಚಯವೂ ತಮಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಆ್ಯಂಬಿಡೆಂಟ್ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದ ದಿನೇಶ್ ಗುಂಡೂರಾವ್ ಹಾಗೂ ರಾಮಲಿಂಗಾರೆಡ್ಡಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಆ್ಯಂಬಿಡೆಂಟ್ ಸಂಸ್ಥೆಯ ಮಾಲೀಕರೊಂದಿಗೂ ನನಗೂ ಯಾವುದೇ ವೈಯಕ್ತಿಕ ಸಂಬಂಧ ಇಲ್ಲ. ನನಗೆ ಸಂಸ್ಥೆಯ ಮಾಲೀಕರ ಪರಿಚಯವೂ ಇಲ್ಲ. 

ಅವರೊಂದಿಗೆ ಯಾವುದೇ ವ್ಯವಹಾರವನ್ನು ನಾನು ಮಾಡಿಲ್ಲ. ಹಲವರು ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಾರೆ. ಅದೇ ರೀತಿ ಆ್ಯಂಬಿಡೆಂಟ್ ಕಂಪೆನಿಯವರು ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಿದ್ದರು. ಹೀಗಾಗಿ ಹೋಗಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ನನಗೂ  ಕಂಪೆನಿಗೂ ಸಂಬಂಧ ವಿಲ್ಲ- ರೆಡ್ಡಿ: ಇನ್ನು ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಆ್ಯಂಬಿಡೆಂಟ್ ಸಂಸ್ಥೆಯು ನನ್ನನ್ನು ಒಂದು ನೂತನ ಮೊಬೈಲ್ ಬಿಡುಗಡೆ ಕಾರ್ಯ ಕ್ರಮಕ್ಕೆ ಆಹ್ವಾನಿಸಿತ್ತು. 

ಬೆಂಗಳೂರು ಸಚಿವನಾಗಿ ನಾನು ಆ ಕಾರ್ಯ ಕ್ರಮಕ್ಕೆ ಹೋಗಿದ್ದೇನೆ. ಅಷ್ಟೇ ಹೊರತು ನನಗೂ ಆ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧ ವಿಲ್ಲ. ಸಂಸ್ಥೆಯ ಮಾಲೀಕರಿಗೆ ನನಗೂ ಯಾವುದೇ ವೈಯಕ್ತಿಕ ಪರಿಚಯ ಇಲ್ಲ. ಸಚಿವನಾಗಿದ್ದಾಗ ಹಲವಾರು ಕರ್ಯಕ್ರಮಗಳಿಗೆ ನನಗೆ ಆಹ್ವಾನ ಬಂದಿರು ತ್ತದೆ. ಅದೇ ರೀತಿ ಈ ಸಂಸ್ಥೆಯಿಂದ ಕೂಡ ಆಹ್ವಾನ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

click me!