ಛತ್ತೀಸ್‌ಗಢದ ಸುಕ್ಮಾದಲ್ಲಿ 10 ನಕ್ಸಲರನ್ನ ಬೀದಿ ಹೆಣ ಮಾಡಿದ ಭದ್ರತಾ ಪಡೆ!
ಶುಕ್ರವಾರ ಮುಂಜಾನೆ ಭಂಡಾರ್‌ಪದರ್‌ನ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ.
ನವದೆಹಲಿ (ನ.22): ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಜೊತೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ನಕ್ಸಲರು ಬೀದಿ ಹೆಣವಾಗಿದ್ದಾರೆ. ಭದ್ರತಾ ಸಿಬ್ಬಂದಿಗಳು ನಕ್ಸಲರ ವಶದಲ್ಲಿ ಶಸಸ್ತ್ರಾಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ ಎಕೆ 47 ರೈಫಲ್ ಕೂಡ ಸೇರಿದೆ. ಶುಕ್ರವಾರ ಮುಂಜಾನೆ ಭಂಡಾರ್‌ಪದರ್‌ನ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಬಸ್ತಾರ್‌ನ ಇನ್ಸ್‌ಪೆಕ್ಟರ್ ಜನರಲ್ ಪಿ ಸುಂದರರಾಜ್ ಅವರು ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲಾ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸೇನಾಪಡೆಗಳು AK-47 ಹಾಗೂ ಇತರ ಶಸ್ತ್ರಾಸ್ತ್ರಗಳ ಜೊತೆಗೆ INSAS ಮತ್ತು ಸ್ವಯಂ-ಲೋಡಿಂಗ್ ರೈಫಲ್ ಅನ್ನು ಸಹ ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಭದ್ರತಾ ಪಡೆಗಳನ್ನು ಶ್ಲಾಘನೆ ಮಾಡಿದ್ದಾರೆ. ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದು, ಅಭಿವೃದ್ಧಿಗೆ ಅನುಕೂಲ ಮಾಡುವುದು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುಕ್ಮಾ ಜಿಲ್ಲೆಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 10 ನಕ್ಸಲೀಯರನ್ನು ಹೊಡೆದುರುಳಿಸಿದ್ದಾರೆ. ರಾಜ್ಯ ಸರ್ಕಾರ ನಕ್ಸಲಿಸಂ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದೆ. ಬಸ್ತಾರ್‌ನಲ್ಲಿ ಅಭಿವೃದ್ಧಿ, ಶಾಂತಿ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಯ ಯುಗವು ಬಸ್ತಾರ್‌ಗೆ ಮರಳಿದೆ' ಎಂದು ಹೇಳಿದ್ದಾರೆ.
"ಮಾರ್ಚ್ 2026 ರೊಳಗೆ ಛತ್ತೀಸ್‌ಗಢದಿಂದ ನಕ್ಸಲೀಯರನ್ನು ತೊಡೆದುಹಾಕಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿಗದಿಪಡಿಸಿದ ಗುರಿಯನ್ನು ಪೂರೈಸುವತ್ತ ನಾವು ಯೋಜಿತ ರೀತಿಯಲ್ಲಿ ಮುನ್ನಡೆಯುತ್ತಿದ್ದೇವೆ' ಎಂದಿದ್ದಾರೆ.
ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್ ಮಾಡ್ತಿದ್ದೀರಾ' ಅನ್ನೋದಾ?
ಹಾಲಿ ವರ್ಷ 200 ನಕ್ಸಲರ ಬೇಟೆ: ಈ ವರ್ಷದ ಜನವರಿಯಿಂದ ಕನಿಷ್ಠ 257 ನಕ್ಸಲರನ್ನು ಕೊಲ್ಲಲಾಗಿದ್ದು, 861 ಮಂದಿಯನ್ನು ಬಂಧಿಸಲಾಗಿದೆ ಮತ್ತು 789 ಇತರರು ಶರಣಾಗಿದ್ದಾರೆ. 2010ರಲ್ಲಿ ದಾಖಲೆಯ ಗರಿಷ್ಠ 1005 ನಕ್ಸಲರನ್ನು ಕೊಲ್ಲಲಾಗಿತ್ತು.2026ರ ವೇಳೆಗೆ ಛತ್ತೀಸ್‌ಗಢ ಸಂಪೂರ್ಣವಾಗಿ ನಕ್ಸಲರಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಗುರಿಯನ್ನು ಮುಟ್ಟಲು ಭದ್ರತಾ ಪಡೆಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿವೆ.
ರೆಡ್ ಡ್ರೆಸ್‌ನಲ್ಲಿ ಶಿಲಾ ಬಾಲಿಕೆಯಾದ ನಿವೇದಿತಾ ಗೌಡ, ಕಾಮೆಂಟ್ ಸೆಕ್ಷನ್ ಮಾತ್ರ ನೋಡೋದಲ್ಲ!