ಯುವಕರು ಕ್ವಾರಿಯಲ್ಲಿ ಬಿದ್ದು ದುರ್ಮರಣಕ್ಕೀಡಾದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಗಣಿ-ಭೂವಿಜ್ಞಾನ ಇಲಾಖೆ

Published : Jul 01, 2024, 01:51 PM IST
ಯುವಕರು ಕ್ವಾರಿಯಲ್ಲಿ ಬಿದ್ದು ದುರ್ಮರಣಕ್ಕೀಡಾದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಗಣಿ-ಭೂವಿಜ್ಞಾನ ಇಲಾಖೆ

ಸಾರಾಂಶ

ಧಾರವಾಡ ಜಿಲ್ಲೆಯಾದ್ಯಂತ ಗಣಿಗಾರಿಗೆ ಎಗ್ಗಿಲ್ಲದೆ ನಡೆಯುತ್ತಿದೆ ಇದರ ವಿಚಾರವಾಗಿ ಕಳೆದ ಜೂನ್ 19 ರಂದು ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ನಡೆಸಿದ್ದ ಗಣಿಗಾರಿಕೆಯ ಕ್ವಾರಿ ಯೊಂದರಲ್ಲಿ ಈಜಲೂ ಹೋಗಿದ್ದ ಇಬ್ಬರು ಯುವಕರು ಕ್ವಾರಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು ಇದರಂತೆ ಜಿಲ್ಲೆಯಲ್ಲಿ ಸಾಕಷ್ಡು ಕ್ವಾರಿಗಳು ಇರುವ ಹಿನ್ನಲೆಯಿಂದ ಮುನ್ನಚ್ಚರಿಕೆಯ ಕ್ರಮವನ್ನ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಎಚ್ಷೆತ್ತುಕ್ಕೊಂಡಿದೆ.

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಜು.1) : ಧಾರವಾಡ ಜಿಲ್ಲೆಯಾದ್ಯಂತ ಗಣಿಗಾರಿಗೆ ಎಗ್ಗಿಲ್ಲದೆ ನಡೆಯುತ್ತಿದೆ ಇದರ ವಿಚಾರವಾಗಿ ಕಳೆದ ಜೂನ್ 19 ರಂದು ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ನಡೆಸಿದ್ದ ಗಣಿಗಾರಿಕೆಯ ಕ್ವಾರಿ ಯೊಂದರಲ್ಲಿ ಈಜಲೂ ಹೋಗಿದ್ದ ಇಬ್ಬರು ಯುವಕರು ಕ್ವಾರಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು ಇದರಂತೆ ಜಿಲ್ಲೆಯಲ್ಲಿ ಸಾಕಷ್ಡು ಕ್ವಾರಿಗಳು ಇರುವ ಹಿನ್ನಲೆಯಿಂದ ಮುನ್ನಚ್ಚರಿಕೆಯ ಕ್ರಮವನ್ನ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಎಚ್ಷೆತ್ತುಕ್ಕೊಂಡಿದೆ.

ಸದ್ಯ ಕಳೆದ ಜೂನ್ 17 ರ ಘಟನೆ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಬಾರದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚೆತ್ತುಕ್ಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನ ನೀಡಿದ್ದಾರೆ.ಎಲ್ಲ ಕ್ವಾರಿ ಮಾಲಿಕರ ಜೊತೆ ಸಭೆ ಮಾಡಿ ಕ್ವಾರಿಯ ಸೂತ್ತಲೂ ಬಂದೂಬಸ್ತನ್ನ ಮಾಡಬೇಕು ಕ್ವಾರಿಯ ಸೂತ್ತಲೂ ಕುರಿಗಾಹಿಗಳು,ದನಕರುಗಳು,ಕ್ವಾರಿಯಲ್ಲಿ ಬಿದ್ದು ಯಾವುದೆ ಅಹಿತಕರ ಘಟನೆಗಳು ಆಗಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇಂದು ತಮ್ಮ ಕಚೇರಿಯಲ್ಲಿ ಎಲ್ಲ ಕ್ವಾರಿ ಮಾಲಿಕರನ್ನ ಕರೆಸಿ ಎರಡು ಘಂಟೆಯವರೆಗೂ  ಸಭೆ ಮಾಡಿ ಖಡಕ್ ಎಚ್ಚರಿಕೆಯನ್ನ ನೀಡಿದರು.

ದಾರಿ ತಪ್ಪಿದ ಮಗನಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬದ್ದಿ ಅವರು ಕ್ವಾರಿ ಮಾಲಿಕರ ಜೊತೆ  ಸಭೆ ಮಾಡಿ, ಕ್ವಾರಿಯ ಸೂತ್ತಲೂ ಬಂದೂಬಸ್ತ ಮಾಡಿಕ್ಕೊಳ್ಳಬೇಕು ತಂತಿ ಬೇಲಿ ಹಾಕಬೆಕು,ಕ್ವಾರಿಯ ಸುತ್ತಲೂ ತಗಡಿನ ಶೆಡ್ಡಗಳನ್ನ ನಿರ್ಮಾಣ ಮಾಡಬೇಕು ಎಂದು ಹೇಳಿದರು.ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆದೇಶದಂತೆ ಎಲ್ಲ ಕ್ವಾರಿ ಮಾಲಿಕರು ಇಲಾಖೆಯ ಆದೇಶಗಳನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು ಜೊತೆಗೆ ಎಲ್ಲ ಬಂದೂಬಸ್ತನೊಂದಿಗೆ ಕೃಷರ್ ನಡೆಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ಜೊತೆಗೆ ಯಾವ ಕ್ವಾರಿ ಮಾಲಿಕರು ಸರಿಯಾಗಿ ಬಂದೂಬಸ್ತ ಮಾಡದೆ ಹೋದರೆ ಅಂತಹ ಕ್ವಾರಿಗಳ ಜನ ಜಾನುವಾರುಗಳು ಮನುಷ್ಯರು ಎನಾದರೂ ನೀರಲ್ಲಿ ಬಿದ್ದು ಸಾವನ್ನಪ್ಪಿದರೆ ಆ ಸಾವಿನ ಹೊಣೆಯನ್ನ ಕ್ವಾರಿ  ಮಾಲಿಕೆ ಜವಾಬ್ದಾರರೆಂದು ಸಭೆಯಲ್ಲಿ ಖಡಕ್ ನಿರ್ಣಯವನ್ನ ತೆಗೆದುಕ್ಕೊಳ್ಳಲಾಯಿತು..

ನೀರಾವರಿ ಪರಿಕರ ಪಡೆಯುವ ಕಾಲಮಿತಿ 7ರಿಂದ 5 ವರ್ಷಕ್ಕೆ ಇಳಿಕೆ: ಸಚಿವ ಚಲುವರಾಯಸ್ವಾಮಿ

ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಲಿಕರ ಜೊತೆ ಸಭೆಯನ್ನ ನಡೆಸಿ ಖಡಕ್ ಆದ ನಿರ್ಣಯಗಳನ್ನ ಮಾಲಿಕರ ಎದುರೆ ತೆಗೆದುಕ್ಕೊಳ್ಳಲಾಯಿತು.ಸಭೆಯಲ್ಲಿ ಇಲಾಖೆಯ ಅಧಿಕಾರಿಯಾದ ಹಿರಿಯ ಭೂ ವಿಜ್ಞಾನಿ ಉಮೇಶ ಬಗರಿ ಭೂ ವಿಜ್ಞಾನಿ ಮಹೇಶ, ಬಿಂದೂ, ಮತ್ತಿತರರು ಅಧಿಕಾರಿಗಳು ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!