ಧರ್ಮಸ್ಥಳದ 13ನೇ ಸ್ಥಳದ 2ನೇ ಭಾಗದ ಉತ್ಖನನ ಅಂತ್ಯ, 18 ಅಡಿ ಅಗೆದರೂ ಕಳೇಬರ ಇಲ್ಲ

Published : Aug 13, 2025, 05:29 PM IST
dharmasthala case

ಸಾರಾಂಶ

ಧರ್ಮಸ್ಥಳದಲ್ಲಿ ಶವ ಶೋಧನೆಯ ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು 13ನೇ ಪಾಯಿಂಟ್‌‌ನ 2ನೇ ಭಾಗದ ಉತ್ಖನನ ನಡೆಸಲಾಗಿದ್ದು, ಯಾವುದೇ ಕಳೇಬರ ಪತ್ತೆಯಾಗಿಲ್ಲ. ಬರೋಬ್ಬರಿ 18 ಅಡಿ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ

ಧರ್ಮಸ್ಥಳ (ಆ.13) ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವ ಶೋಧನೆ ಕಾರ್ಯಕ್ಕೆ ಇದೀಗ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಮುಸುಕುದಾರಿ ದೂರುದಾರು ಗುರುತಿಸಿದ ಸ್ಥಳಗಳಲ್ಲಿ ಯಾವುದೇ ಶವಗಳು ಪತ್ತೆಯಾಗುತ್ತಿಲ್ಲ. 13ನೇ ಪಾಯಿಂಟ್‌ನಲ್ಲಿ ಹಲವು ಶವಗಳನ್ನು ಹೂತು ಹಾಕಿದ್ದೇನೆ ಎಂದಿದ್ದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ದೂರುದಾರ ಹಾಗೂ ಈ ಪ್ರಕರಣ ಹಿಂದೆ ಷಡ್ಯಂತ್ರ ಅಡಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ದೂರುದಾರ ಗುರುತಿಸಿದ 13ನೇ ಪಾಯಿಂಟ್‌ನ ಎರಡನೇ ಭಾಗದ ಉತ್ಖನನವನ್ನು ಇಂದು (ಆ.13) ಮಾಡಲಾಗಿದೆ. ಹಿಟಾಚಿ ಮೂಲಕ ಬರೋಬ್ಬರಿ 18 ಅಡಿ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

ಕುತೂಹಲ ಕೆರಳಿಸಿದ 13ನೇ ಪಾಯಿಂಟ್

ಆಗಸ್ಟ್ 12ರಂದು 13ನೇ ಪಾಯಿಂಟ್‌ನಲ್ಲಿ ಎರಡು ಹಿಟಾಚಿ ಮೂಲಕ ಉತ್ಖನ ಕಾರ್ಯ ನಡೆಸಲಾಗಿತ್ತು. 12 ಪಾಯಿಂಟ್ ಉತ್ಖನನ ಬಳಿಕ ಸ್ನಾನಘಟ್ಟದ ಬಳಿಯೇ ಇದ್ದ 13ನೇ ಪಾಯಿಂಟ್ ಉತ್ಖನನ ಬದಲು ಕಲ್ಲೇರಿ, ಬೊಳಿಯಾರು ಕಾಡಿನಲ್ಲಿ ಉತ್ಖನನ ಮಾಡಲಾಗಿತ್ತು. ಹೀಗಾಗಿ 13ನೇ ಪಾಯಿಂಟ್ ಕುತೂಹಲ ಹೆಚ್ಚಿಸಿತ್ತು. ಇದೀಗ ದೂರುದಾರ ಗುತುಸಿದ 13ನೇ ಪಾಯಿಂಟ್ ಹಾಗೂ ಇಂದು 13ನೇ ಪಾಯಿಂಟ್ 2ನೇ ಭಾಗದ ಉತ್ಖನನ ಅಂತ್ಯಗೊಂಡಿದೆ. ಎಷ್ಟೇ ಅಗೆದರೂ ಯಾವುದೇ ಅಸ್ಥಿಪಂಜರದ ಕುರುಹು ಪತ್ತೆಯಾಗಿಲ್ಲ.

13ನೇ ಪಾಯಿಂಟ್‌ನ 2 ಕಡೆ ಅತೀ ದೊಡ್ಡ ಉತ್ಖನನ

ಪಾಯಿಂಟ್ 13ರಲ್ಲಿ ಎರಡು ದಿನಗಳ ಕಾಲ ಉತ್ಖನನ ಕಾರ್ಯಾಚರಣೆ ನಡೆಸಲಾಗಿದೆ. ಎರಡು ದಿನಗಳಲ್ಲಿ ಅತೀ ದೊಡ್ಡ ಗುಂಡಿ ಅಗೆದು ಕಾರ್ಯಾಚರಣೆ ನಡಸಲಾಗಿದೆ. 13ನೇ ಪಾಯಿಂಟ್‌ನ ಎರಡು ಭಾಗದಲ್ಲಿ 32 ಅಡಿ ಉದ್ದ, 28 ಅಗಲ ಹಾಗೂ 18 ಅಡಿ ಆಳಕ್ಕೆ ಉತ್ಖನನ ಮಾಡಲಾಗಿದೆ. ಆದರೆ ಒಂದು ಮೂಳೆಯೂ ಪತ್ತೆಯಾಗಿಲ್ಲ.

13ನೇ ಪಾಯಿಂಟ್‌ನ 2ನೇ ಭಾಗದ ಗುಂಡಿ ಮುಚ್ಚಿದ ಕಾರ್ಮಿಕರು

13ನೇ ಪಾಯಿಂಟ್‌ನ 2ನೇ ಭಾಗದಲ್ಲಿ ಉತ್ಖನನ ಕಾರ್ಯ ಅಂತ್ಯಗೊಂಡಿದೆ. ಮಳೆ ನೀರು ತುಂಬಿಕೊಳ್ಳುವ ಮೊದಲು ಗುಂಡಿ ಮುಚ್ಚಲು ಕಾರ್ಮಿಕರು ಮುಂದಾಗಿದ್ದಾರೆ. ಹಿಟಾಚಿ ಮೂಲಕ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

ನಾಳೆಯಿಂದ ನಡೆಯುತ್ತಾ ಉತ್ಖನನ ಕಾರ್ಯ?

ಧರ್ಮಸ್ಥಳದಲ್ಲಿ ಶವಶೋಧನೆ ಕಾರ್ಯಾಚರಣೆಗೆ ವಿರೋಧಗಳು ವ್ಯಕ್ತವಾಗುತ್ತಿದೆ. ಇತ್ತ ಕಳೇಬರ ಸಿಗುತ್ತಿಲ್ಲ. ನಿನ್ನೆ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮ್ಯ ಈ ಕುರಿತು ಚರ್ಚಿಸಿದ್ದಾರೆ. 13ನೇ ಪಾಯಿಂಟ್‌ನಲ್ಲೂ ಕಳೇಬರ ಪತ್ತೆಯಾಗದಿದ್ದರೆ, ಶವ ಶೋಧನೆ ಕಾರ್ಯಾಚರಣೆ ನಿಲ್ಲಿಸುವ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಹೀಗಾಗಿ ಮುಸುಕುದಾರಿ ತೋರಿಸುವ ಹೊಸ ಜಾಗಗಳನ್ನು ನಾಳೆಯಿಂದ ಉತ್ಖನನ ಕಾರ್ಯ ನಡೆಯುತ್ತೋ ಇಲ್ಲವೋ ಅನ್ನೋ ಗೊಂದಲ, ಅನುಮಾನಗಳು ಇದೀಗ ಶುರುವಾಗಿದೆ.

ಪರಮೇಶ್ವರ್ ಭೇಟಿಯಾದ ಪ್ರಣವ್ ಮೋಹಾಂತಿ

ಎಸ್ಐಟಿ ತನಿಖಾ ಮುಖ್ಯಸ್ಥ ಪ್ರವಣ್ ಮೊಹಾಂತಿ ಗೃಹ ಸಚಿವ ಪರಮೇಶ್ವರ್ ಭೇಟಿಯಾಗಿ ಚರ್ಚಿಸಿದ್ದಾರೆ. ಎಸ್ಐಟಿ ಇದುವರಿಗಿನ ತನಿಖೆ, ಉತ್ಖನನ ಕಾರ್ಯಾಚರಣೆ, ಹೊಸ ದೂರು ದಾಖಲು ಸೇರಿದಂತೆ ಹಲವು ವಿಚಾರಗಳ ಕುರಿತು ಪರಮೇಶ್ವರ್ ಮಾಹಿತಿ ಪಡೆದಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮ್ಯ ಭೇಟಿಯಾಗಿರುವ ಪರಮೇಶ್ವರ್ ಇದೇ ಧರ್ಮಸ್ಥಳ ಎಸ್ಐಟಿ ಶವ ಶೋಧನೆ ವಿಚಾರ ಚರ್ಚಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!