
ಬೆಂಗಳೂರು (ಆ.18): ಹಿಂದೂ ಧರ್ಮದ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮುಂದೆ ಬಂದಿರುವ ಅನಾಮಿಕ ತಾನಾಗಿಯೇ ಮುಂದೆ ಬಂದಿಲ್ಲ. ಆ... ಒಂದು ಗುಂಪು ನನಗೆ ಬುರುಡೆ ಕೊಟ್ಟು ಎಸ್ಐಟಿ ಮುಂದೆ ಶರಣಾಗಲು ಹೇಳಿತ್ತು. ಬುರುಡೆ ಕೊಟ್ಟು ಅವರು ಹೇಳಿದಂತೆ ನಾನು ಹೇಳಿದ್ದೇನೆ ಎಂದು ವಿಶೇಷ ತನಿಖಾ ತಂಡದ ಮುಮದೆ ಹೇಳಿದ್ದಾನೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (ವಿಶೇಷ ತನಿಖಾ ತಂಡ) ಮುಂದೆ ಹಾಜರಾದ ದೂರುದಾರ ಅನಾಮಿಕ, ತಾನು ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ನೀಡಿರುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ತನಿಖಾಧಿಕಾರಿಗಳು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಹೇಳಿಕೆಯ ಪ್ರಮುಖ ಅಂಶಗಳು:
ಈ ಹೇಳಿಕೆಯ ನಂತರ, ಎಸ್ಐಟಿ ಅಧಿಕಾರಿಗಳು ದೂರುದಾರನ ಸಂಪೂರ್ಣ ವಿಡಿಯೋ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ, ಪ್ರಕರಣದ ಮುಂದಿನ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ದೂರುದಾರ ಅನಾಮಿಕನ ಈ ಸ್ಫೋಟಕ ಹೇಳಿಕೆಯು ಪ್ರಕರಣದ ಆಳವಾದ ತನಿಖೆಗೆ ಒತ್ತಾಯಿಸುತ್ತಿದೆ. ಈ ಮೂಲಕ, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ತಲೆ ಬುರುಡೆ ಕೊಟ್ಟು, ನೂರಾರು ಶವ ಹೂತಿದ್ದೇನೆ ಎಂದಿದ್ದ ಅನಾಮಿಕ:
ಅನಾಮಿಕ ವ್ಯಕ್ತಿ ಪೊಲೀಸರಿಗೆ ಕೊಟ್ಟ ಬುರುಡೆ ಹಾಗೂ ಅದನ್ನು ಹೊರಗೆ ತೆಗೆದ ವಿಡಿಯೋವನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಈ ಬುರುಡೆ ಎಲ್ಲಿ ಸಿಕ್ಕಿದೆ ಎಂದು ಕೇಳಿದಾಗ, ಇದೊಂದೇ ಅಲ್ಲ ಇಂತಹ ನೂರಾರು ಹೆಣ್ಣು ಮಕ್ಕಳ ಶವಗಳನ್ನು ನಾನು ಧರ್ಮಸ್ಥಳದ ಸುತ್ತಮುತ್ತಲೂ ಹೂತಿದ್ದೇನೆ. ನಿಮಗೆ ಶವಗಳನ್ನು ಹೂತಿರುವ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಸಿತ್ತು. ಆದರೆ, ಅನಾಮಿಕ ತೋರಿಸಿದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎರಡರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಆತ ತೋರಿಸಿದ ಯಾವುದೇ ಜಾಗದಲ್ಲಿ ಮಹಿಳೆಯರ ಅಸ್ತಿಪಂಜರ ಸಿಕ್ಕಿಲ್ಲ. ಇದೀಗ ಅನಾಮಿಕ ವ್ಯಕ್ತಿಯನ್ನು ತೀವ್ರ ವಿಚಾರಣೆ ಮಾಡಿದಾಗ ಒಂದು ನನಗೆ ಬುರುಡೆ ಕೊಟ್ಟು, ಎಸ್ಐಟಿ ಮುಂದೆ ಹೀಗೆ ಹೇಳುವಂತೆ ತಿಳಿಸಿತ್ತು. ಇದಾದ ನಂತರ ನಾನು ಎಸ್‌ಐಟಿ ಮುಂದೆ ಬುರುಡೆ ಕೊಟ್ಟು ಶರಣಾಗಿದ್ದೆ ಎಂದು ತಿಳಿಸಿದ್ದಾನೆ.
ಇನ್ನು ಅನಾಮಿಕ ವ್ಯಕ್ತಿ ಪೊಲೀಸರಿಗೆ ತಂದುಕೊಟ್ಟ ತಲೆ ಬುರುಡೆ ಎಲ್ಲಿಂದ ತಂದಿದ್ದೀಯ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ಉತ್ತರ ಕೊಡದ ಅನಾಮಿಕ ವ್ಯಕ್ತಿ ಬಂಗ್ಲೆಗುಡ್ಡ, ಬೋಳಿಯಾರು, ಕಲ್ಲೇರಿ, ಕಾಡು ಎಂದೆಲ್ಲಾ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಇದರಿಂದ ಎಸ್‌ಐಟಿ ಆತನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಅನಾಮಿಕ ವ್ಯಕ್ತಿ ತಂದುಕೊಟ್ಟ ತಲೆಬುರುಡೆ ಕೂಡ ಪುರುಷನದ್ದು, ಎಂದು ಎಫ್‌ಎಸ್‌ಎಲ್ ವರದಿಯಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ