
ಸುಜಾತಾ ಭಟ್ ಎಂದು ಬಂದಿರುವ ಮಹಿಳೆಯ ಹೆಸರು ಸುಜಾತಾ ಉಪಾಧ್ಯಾಯ ಉಡುಪಿ ಬಳಿಯ ಪರಿಕ ಗ್ರಾಮದವರು. ಮೂರು ಜನ ಅಕ್ಕತಂಗಿಯರ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಿಳೆ ಆಗಿದ್ದಾರೆ. ಆದರೆ, ಸುಜಾತಾ ಭಟ್ ಅವರು ನೇರವಾಗಿ ವಿರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗಡೆ ವಿರುದ್ಧ ಆರೋಪ ಮಾಡುತ್ತಿರುವುದೇಕೆ? ಎಂಬುದನ್ನು ಹುಡುಕಿ ಹೊರಟಾಗ ರಿಯಲ್ ಎಸ್ಟೇಟ್ ಉದ್ಯಮದ ವಿವಾದವೊಂದು ತಳುಕು ಹಾಕಿಕೊಳ್ಳುತ್ತದೆ. ಆದರೆ, ಸುಜಾತಾ ಭಟ್ ಅವರ ಬಗ್ಗೆ ಅವರ ಬಾವ ಮಹಾಬಲೇಶ್ವರ ಅವರು ಹೇಳಿದ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ...
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತು ದೂರು ಕೊಡುತ್ತಾನೆ. ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ಎಸ್‌ಐಟಿ ರಚಿಸುತ್ತದೆ. ಆದರೆ, ಮತ್ತೊಂದು ಕಡೆಗೆ ಸುಜಾತಾ ಭಟ್ ಎನ್ನುವ ಮಹಿಳೆ ನನ್ನ ಮಗಳು 22 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆ ಆಗಿದ್ದಾಳೆ. ಯಾರೋ ನನ್ನ ಮಗಳನ್ನು ಕಿಡ್ನಾಪ್ ಮಾಡಿ, ಕೊಲೆ ಮಾಡಿರಬಹುದು. ಇದೀಗ ನೂರಾರು ಶವಗಳನ್ನು ಹುಡುಕಾಟದಲ್ಲಿ ಮೂಳೆಗಳು ಸಿಕ್ಕಿದರೆ ಅವುಗಳನ್ನು ನನ್ನ ಡಿಎನ್‌ಎಗೆ ಮ್ಯಾಚ್ ಮಾಡಿ ಅವರ ಅಸ್ತಿಪಂಜರ ಕೊಡಿ. ಅವರ ಅಸ್ತಿಪಂಜರಕ್ಕೆ ಧಾರ್ಮಿಕ ವಿಧಿವಿಧಾನ ನೆರವೇರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುತ್ತಾರೆ. ಆದರೆ, ಈ ಸುಜಾತಾ ಭಟ್ ಯಾರು? ಆಕೆಯ ಹಿನ್ನೆಲೆಯೇನು? ಅವರ ಅಸಲಿ ಹೆಸರೇನು? ಆಕೆಯ ಕುಟುಂಬ ಸದಸ್ಯರು ಯಾರು? ಎಂಬ ಮಾಹಿತಿಯನ್ನು ಅವರ ಭಾವನೇ ಬಿಚ್ಚಿಟ್ಟಿದ್ದಾರೆ.
ಸುಜಾತಾ ಭಟ್ ಅವರ ಅಕ್ಕ ವಾರಿಜಾ ಮಧ್ಯಸ್ಥ ಅವರ ಗಂಡ ಮಹೇಶ್ವರ ಭಟ್ ಅವರು (ಸುಜಾತಾ ಭಟ್ ಭಾವ) ಮಾತನಾಡುತ್ತಾ, ಸುಜಾತಾ ಭಟ್ ನಗೆ 1988ರಿಂದ ಪರಿಚಯ. ಅವರ ಅಕ್ಕನನ್ನು ನಾನು ಮದುವೆ ಆದಾಗಿನಿಂದಲೂ ಪರಿಚಯ ಆಗಿದ್ದಾರೆ. ಇದೀಗ ಸುಜಾತಾ ಭಟ್ ಅವರು 2003ರಲ್ಲಿ ನನ್ನ ಎಂಬಿಬಿಎಸ್ ಓದುವ ಮಗಳು ಧರ್ಮಸ್ಥಳದಲ್ಲಿ ನಾಪತ್ತೆ ಆಗಿದ್ದಾಳೆ ಎಂಬ ದೂರು ನೀಡಿದ್ದಾರೆ. ಆದರೆ, ಆಕೆಗೆ ಅಸಲಿಗೆ ಮದುವೆಯೇ ಆಗಿರಲಿಲ್ಲ. ಅನೈತಿಕ ಸಂಬಂಧಕ್ಕೆ ಒಮ್ಮೆ ಗರ್ಭಿಣಿ ಆಗಿದ್ದರು. ಆದರೆ, ಅದನ್ನು ಆರೂರು ಕ್ಲಿನಿಕ್‌ನಲ್ಲಿ ತೆಗೆಸಿಕೊಂಡು ಬಂದು ಸೀತಾ ನದಿಯಲ್ಲಿ ಮಗುವನ್ನಿ ಬೀಸಾಡಿದ್ದಳು.
ಅದಾದ ನಂತರ ಉಡುಪಿ ಬಸ್ ನಿಲ್ದಾಣದಲ್ಲಿ ಅನೈತಿಕ ವ್ಯವಹಾರ ಮಾಡುವಾಗ ಸಿಕ್ಕಿಬಿದ್ದಿದ್ದಳು. ಆಗ ನಿಟ್ಟೂರು ರಿಮ್ಯಾಂಡ್ ಹೋಮ್‌ಗೆ ಹಾಕಿದ್ದರು. ಅಲ್ಲಿ ಒಂದು ವಾರ ಇದ್ದು, ಕಾಂಪೌಂಡ್‌ಗೆ ಸೇರೆ ಕಟ್ಟಿ ಅಲ್ಲಿಂದ ಪರಾರಿ ಆಗಿ ನಿಟ್ಟೂರು, ಉಡುಪಿ ಬಿಟ್ಟು ಪರಾರಿ ಆಗಿದ್ದಳು. ಎಷ್ಟು ಹುಡುಕಿದರೂ ಸಿಗಲಿಲ್ಲ. ಎಲ್ಲಿಗೆ ಹೋದಳೆಂಬುದು ಮನೆಯವರಿಗೂ ಗೊತ್ತಾಗಲಿಲ್ಲ. ಇದಾದ 3 ವರ್ಷದ ಬಳಿಕ ಬೆಂಗಳೂರಿಗೆ ಬಂದಳು. ಆಗ ಸುಜಾತಾಳ ಅಕ್ಕ ನನ್ನ ಹೆಂಡತಿ ವಾರಿಜಾ, ಆದದ್ದೆಲ್ಲಾ ಆಯ್ತು ತಂಗಿಗೊಂದು ಕೆಲಸ ಕೊಡಿಸಿ ಎಂದು ಹೇಳಿದರು. ಆಗ ನಾನು ನಮ್ಮವರದ್ದೇ ಇದ್ದ ಶೇಖರ್ ಆಸ್ಪತ್ರೆಯಲ್ಲಿ ಒಂದು ಕೆಲಸ ಕೊಡಿಸಲಾಯಿತು. ಆದರೆ, ಅಲ್ಲಿಯೂ ಒಂದು ವಾರ ಕೆಲಸ ಮಾಡಿ ಅಲ್ಲಿಂದ ಓಡಿ ಹೋದಳು.
ಪರ್ಕಳದ ಬಳಿಯ ಪರಿಕಾರ ಎಂಬ ಕುಟುಂಬ ಇವರದ್ದು. ಅವರ ಅಪ್ಪನಿಗೆ ಮೂರು ಜನ ಮಕ್ಕಳು. ಸುಜಾತಾ ಕೊನೆಯವಳು ಆಗಿದ್ದಾಳೆ. ಇವರನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಅವರ ಸಹೋದರನೇ ಸುಜಾತಾಳನ್ನು ಯಾರೂ ಮನೆಗೆ ಸೇರಿಸಬೇಡಿ, ಮನೆಯ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಾಳೆ ಎಂದು ಎಲ್ಲ ಸಂಬಂಧಿಕರಿಗೆ ಹೇಳಿದ್ದಳು. ಆದರೆ, ಅವರ ಅಕ್ಕ ವಾರಿಜಾಳೊಂದಿಗೆ ಬೆಂಗಳೂರಿಗೆ ವಾಸವಿದ್ದ, ಕೋರ್ಟ್ ಬಳಿ ಒಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆವು. ನಮ್ಮ ಅಂಗಡಿಗೆ ಒಮ್ಮೆ ಬಂದಳು. ಆಗ ಭಾವ ನಾನು ರಿಪ್ಪನ್‌ಪೇಟೆ ಅವರನ್ನು ಮದುವೆ ಆಗಿದ್ದೇನೆ. ನಿಮಗೆ ಏನಾದರೂ ಬೇಕಾದರೆ ಕೇಳಿ ಕೊಡ್ತೇನೆ ಎಂದು ಹೇಳಿದ್ದಳು.
ಇದಾದ 3 ವರ್ಷಗಳ ನಂತರ ಪುನಃ ನಮ್ಮನೆಗೆ ಬಂದು ಭಾವ ನಾನು ಜಡ್ಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಏನಾದರೂ ಸಹಾಯ ಬೇಕಾ ಕೇಳಿ. ಈ ಚೆಕ್ ತಗೊಳಿ, ನೀವು ಹಣ ತೆಗೆದುಕೊಳ್ಳಿ ಎಂದು ಹೇಳಿದಳು. ಆದರೆ, ನಾನು ಜಡ್ಜ್ ಮನೆಯ ಚೆಕ್ ತೆಗೆದುಕೊಂಡರೆ ನನ್ನ ಜೈಲಿಗೆ ಹಾಕಬಹುದು ಎಂಬ ಅನುಮಾನದಿಂದ ನಿನ್ನ ಸಹಾಯ ಬೇಡವೆಂದು, ಇನ್ನೊಮ್ಮೆ ಇಲ್ಲಿಗೆ ಬರಬೇಡ ಎಂದು ಹೇಳಿ ಕಳಿಸಿದೆ. ಅದೇ ಕೊನೆ, 2002-03ರ ನಂತರ ಈವರೆಗೆ ನನಗೆ ಸಿಕ್ಕಲೇ ಇಲ್ಲ ಎಂದು ಸುಜಾತಾ ಅವರ ಬಾವ ಮಹಾಬಲೇಶ್ವರ ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ