ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಷ್ಟೆಲ್ಲ ಅಭಿ​ವೃದ್ಧಿ ಸಾಧ್ಯ​ವಾ​ಯ್ತು: ಸಿಎಂ ಬೊಮ್ಮಾಯಿ

By Kannadaprabha News  |  First Published Sep 3, 2022, 7:00 AM IST

ಸಿಆ​ರ್‌​ಝಡ್‌ ಮಾಸ್ಟ​ರ್‌​ಪ್ಲ್ಯಾ​ನ್‌​ಗೆ ಒಪ್ಪಿ​ಗೆ, ನವ ಕರ್ನಾ​ಟ​ಕದ ಅಭಿ​ವೃ​ದ್ಧಿ​ಯೊಂದಿಗೆ ನವಭಾರ​ತದ ಅಭಿ​ವೃದ್ಧಿ ಆಗ​ಲಿದೆ: ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ 


ಮಂಗ​ಳೂ​ರು(ಸೆ.03):  ಸಿಆ​ರ್‌​ಝ​ಡ್‌(ಕರಾವಳಿ ನಿಯಂತ್ರಣ ವಲಯ)ನ ಕರ್ನಾ​ಟ​ಕದ ಮಾಸ್ಟರ್‌ ಪ್ಲ್ಯಾನ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಅದರ ಆದೇಶ ಕೂಡ ದೊರೆ​ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗ​ಮಿ​ಸುವ ಹೊತ್ತಿ​ನಲ್ಲಿ ಈ ಮಹ​ತ್ವದ ಆದೇಶ ದೊರೆ​ತಿದೆ ಎಂದು ತಿಳಿ​ಸಿ​ದ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಇದಕ್ಕೆ ಕಾರ​ಣ​ಕ​ರ್ತ​ರಾ​ದ ನರೇಂದ್ರ ಮೋದಿ ಅವ​ರಿಗೆ ಅಭಿ​ನಂದನೆ ಸಲ್ಲಿ​ಸಿ​ದ​ರು. ಇದೇ ವೇಳೆ ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಂತಹ ಬಹಳಷ್ಟು ಮಹತ್ವದ ಕಾರ್ಯಗಳು ಸಾಧಿಸಲ್ಪಟ್ಟಿದೆ. ನವಕರ್ನಾಟಕದ ಅಭಿವೃದ್ಧಿಯೊಂದಿಗೆ ನವಭಾರತದ ಅಭಿವೃದ್ಧಿ ಆಗಲಿದೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಭಾಷ​ಣಕ್ಕೆ ಮೊದಲು ಮಾತ​ನಾ​ಡಿದ ಅವರು, ಗೋವಾ ಮತ್ತು ಕೇರಳ ರಾಜ್ಯ​ಗ​ಳಿ​ರುವ ಸಿಆ​ರ್‌​ಝಡ್‌ ನಿಯ​ಮ​ಗ​ಳ ಅನು​ಕೂಲ ನಮ್ಮ ರಾಜ್ಯಕ್ಕೆ ಇರ​ಲಿಲ್ಲ. ಇದ​ಕ್ಕಾಗಿ 30 ವರ್ಷಗಳ ಕಾಲ ಹೋರಾಟ ನಡೆ​ದಿತ್ತು. ಇದೀಗ ಸಿಆ​ರ್‌​ಝಡ್‌ ಮಾಸ್ಟ​ರ್‌​ ಪ್ಲ್ಯಾನ್‌ಗೆ ಒಪ್ಪಿಗೆ ದೊರೆ​ತಿ​ರು​ವು​ದ​ರಿಂದ ಅಭಿ​ವೃದ್ಧಿ ಕಾರ್ಯ ಕೈಗೊ​ಳ್ಳಲು ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ​ರು.

Tap to resize

Latest Videos

PM MODI IN MANGALURU: ಕರಾವಳಿಯಲ್ಲಿ ಪ್ರಧಾನಿ ಮೋದಿಗೆ 2 ಲಕ್ಷ ಜನರ ಸ್ವಾಗತ

ಡಬಲ್‌ ಎಂಜಿನ್‌ನಿಂದ ಸಾಧ್ಯ​ವಾ​ಯ್ತು​: 

ಡಬಲ್‌ ಎಂಜಿನ್‌ ಸರ್ಕಾರದಿಂದ ಏನಾ​ಗಿದೆ ಎಂದು ಹಲ​ವರು ಕೇಳುತ್ತಾರೆ. ಅದ​ಕ್ಕೆ ಉತ್ತರ ಇಲ್ಲೇ ಇದೆ. ಡಬಲ್‌ ಎಂಜಿ​ನ್‌ ಸರ್ಕಾರ ಇರು​ವು​ದ​ರಿಂದ​ಲೇ ಇಂದು ಸಾಗರಮಾಲಾ ಯೋಜ​ನೆ​ಯಡಿ 18 ಯೋಜ​ನೆ​ಗ​ಳನ್ನು ಮುಕ್ತಾಯ​ಗೊ​ಳಿ​ಸಿ, 950 ಕೋಟಿ ರು. ವೆಚ್ಚ​ದ 14 ಯೋಜ​ನೆ​ಗ​ಳನ್ನು ಮಂಜೂರು ಮಾಡಲು ಸಾಧ್ಯ​ವಾ​ಗಿದೆ. ಕಾರ​ವಾ​ರದ ಮಜಲಿ ಬಂದರಿನ 150 ಕೋಟಿ ರು. ಯೋಜ​ನೆಗೆ ಅನು​ಮೋ​ದನೆ ಸಿಕ್ಕಿದೆ. ಪಿಎಂ ಮತ್ಸ್ಯ ಸಂಪದ ಯೋಜ​ನೆ​ಯಡಿ ಪ್ರಥಮ ಬಾರಿ ಮೀನು​ಗಾ​ರ​ರಿಗೆ ಹೈಸ್ಪೀಡ್‌ ಡೀಪ್‌ ಸೀ ಫಿಶಿಂಗ್‌ನ 100 ಬೋಟ್‌​ಗ​ಳಿ​ಗೆ ಕೇಂದ್ರ ಸರ್ಕಾರ ಮಂಜೂ​ರಾ​ತಿ ನೀಡಿದೆ. ಇಂದು 3800 ಕೋಟಿ ರು.ಗೂ ಅಧಿಕ ಯೋಜ​ನೆ​ಗಳ ಶಿಲಾ​ನ್ಯಾಸ ಮತ್ತು ಲೋಕಾ​ರ್ಪ​ಣೆ​ಯಾ​ಗಿ​ದೆ. ಇದು ಡಬಲ್‌ ಎಂಜಿನ್‌ ಸರ್ಕಾ​ರದ ಸಾಧನೆ ಎಂದು ಮುಖ್ಯ​ಮಂತ್ರಿ ತಿರು​ಗೇಟು ನೀಡಿ​ದ​ರು.

ಮೋದಿ ಮಂಗಳೂರು ಸಮಾವೇಶಕ್ಕೆ ಎಂಟ್ರಿ ಕೊಡಲು ಉದ್ಯಮಿ ಬಿ ಆರ್‌ ಶೆಟ್ಟಿ ಹರಸಾಹಸ

ಕರಾ​ವಳಿ ಅಭಿ​ವೃದ್ಧಿ ನಿಟ್ಟಿ​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೂರ​ದೃ​ಷ್ಟಿಯ ಯೋಜ​ನೆ​ಗ​ಳನ್ನು ನೀಡಿ​ದ್ದಾರೆ. ವಿಶೇ​ಷ​ವಾಗಿ ವಿದೇಶಿ ವಿನಿ​ಮಯ ಹೆಚ್ಚ​ಳ​ವಾ​ಗ​ಬೇ​ಕಾ​ದರೆ ರಫ್ತು- ಆಮದು ಹೆಚ್ಚಾ​ಗ​ಬೇ​ಕಾ​ದರೆ ಪೋರ್ಟ್‌ ಹ್ಯಾಂಡ್ಲಿಂಗ್‌ ಕೆಪ್ಯಾ​ಸಿಟಿ ಹೆಚ್ಚಾ​ಗ​ಬೇಕು ಎನ್ನು​ವುದು ಅವರ ದೂರ​ದೃ​ಷ್ಟಿ​ಯಾ​ಗಿತ್ತು. ಅದ​ಕ್ಕಾ​ಗಿ 8 ವರ್ಷ​ಗ​ಳ ಯೋಜನೆ ಇಂದು ಪ್ರತಿ​ಫಲ ನೀಡುತ್ತಿದೆ. ಬಂದ​ರಿನ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾ​ಗು​ತ್ತಿದೆ ಎಂದು ಶ್ಲಾಘಿ​ಸಿ​ದ​ರು.

ಇದೀ​ಗ ಮಂಗ​ಳೂರು ಮತ್ತು ಕಾರ​ವಾರ ಬಂದ​ರಿನ ವಿಸ್ತ​ರಣೆ ಕಾರ್ಯ​ವನ್ನು ಕೈಗೆ​ತ್ತಿ​ಕೊ​ಳ್ಳ​ಲಾ​ಗಿ​ದೆ. ಫಿಶ​ರೀಸ್‌ ಇನ್ಸ್ಟಿ​ಟ್ಯೂ​ಶನ್‌ ಆರಂಭಿ​ಸ​ಲಿ​ದ್ದೇವೆ. ಈ ಎಲ್ಲ ಯೋಜ​ನೆ​ಗಳ ಮೂಲ​ಕ ಡಬಲ್‌ ಎಂಜಿನ್‌ ಸರ್ಕಾರವು ಕರ್ನಾ​ಟಕ ಮಾತ್ರ​ವಲ್ಲ, ಭಾರ​ತ​ವನ್ನು ಕೂಡ ಮುನ್ನ​ಡೆ​ಸು​ತ್ತಿದೆ. ನವ ಕರ್ನಾ​ಟ​ಕದ ಅಭಿ​ವೃ​ದ್ಧಿ​ಯೊಂದಿಗೆ ನವಭಾರ​ತದ ಅಭಿ​ವೃದ್ಧಿ ಆಗ​ಲಿದೆ ಎಂದ​ರು.
 

click me!