Bengaluru: ರ‍್ಯಾಪಿಡೋ-ಬೌನ್ಸ್ ಬೈಕ್‌, ಟ್ಯಾಕ್ಸಿಗಳ ಸೇವೆ ರದ್ದತಿಗೆ ಆಗ್ರಹಿಸಿ ಆಟೋ ಚಾಲಕ ವಿಷ ಸೇವನೆ: ಆಸ್ಪತ್ರೆಗೆ ದಾಖಲು

By Sathish Kumar KH  |  First Published Jan 9, 2023, 5:11 PM IST

ಸಾರಿಗೆ ಇಲಾಖೆಯಿಂದ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡದಂತೆ ಆಗ್ರಹಿಸಿ ಶಾಂತಿನಗರದ ಸಾರಿಗೆ ಇಲಾಖೆಯ ಬಳಿ ಪ್ರತಿಭಟನೆ ಮಾಡುತ್ತಿದ್ದ ಆಟೋ ಚಾಲಕರಲ್ಲಿ ಒಬ್ಬ ಚಾಲಕ ವಿಷ ಸೇವನೆ ಮಾಡಿದ್ದಾನೆ.


ಬೆಂಗಳೂರು (ಜ.09): ಸಿಲಿಕಾನ್‌ ಸಿಟಿ ರಾಜಧಾನಿಯಲ್ಲಿ ಸಾರಿಗೆ ಇಲಾಖೆಯಿಂದ ನೀಡಿರುವ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ನಡೆಸಲಿರುವ ಆಟೋ ಚಾಲಕರ ಮುಷ್ಕರದಲ್ಲಿ ಒಇಬ್ಬ ಆಟೋ ಚಾಲಕ ವಿಷ ಸೇವನೆ ಮಾಡಿದ್ದಾನೆ. ಕೂಡಲೇ ಪೊಲೀಸರು ಮತ್ತು ಸಂಗಡಿಗರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡದಂತೆ ಆಗ್ರಹಿಸಿ ಶಾಂತಿನಗರದ ಸಾರಿಗೆ ಇಲಾಖೆಯ ಬಳಿ ಪ್ರತಿಭಟನೆ ಮಾಡುತ್ತಿದ್ದ ಆಟೋ ಚಾಲಕರಲ್ಲಿ ಒಬ್ಬ ಚಾಲಕ ವಿಷ ಸೇವನೆ ಮಾಡಿದ್ದಾನೆ. ಕೂಡಲೇ ಆಟೋ ಚಾಲಕನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ವಿಷ ಸೇವಿಸಿದ ಆಟೋ ಚಾಲಕ ಸುನೀಲ್ ಎಂದು ಗುರುತಿಸಲಾಗಿದೆ. ಸಾವಿರಾರು ಆಟೋ ಚಾಲಕರು ತಮ್ಮ ಕುಟುಂಬದಲ್ಲಿನ ಹೆಂಡತಿ, ಮಕ್ಕಳ ಸಮೇತರಗಾಗಿ ಬಂದು ಆರ್‌ಟಿಒ ಕಚೇರಿಯ ಮುಂಭಾಗ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಇನ್ನು ಬೈಕ್ ಟ್ಯಾಕ್ಸಿ ವಿರುದ್ದ ಸಮರ ಸಾರಿರುವ ಪ್ರತಿಭಟನಾ ನಿರತ ಆಟೋ ಚಾಲಕರಲ್ಲಿ ಕೆಲವರು ವಿಷದ ಬಾಟಲಿಯನ್ನು ಹಿಡಿದುಕೊಂಡು ರಸ್ತೆಯಲ್ಲಿ ಕುಳಿತುಕೊಂಡಿದ್ದರು. ಒಂದು ವೇಳೆ ಸರ್ಕಾರ ರ್ಯಾಪಿಡೋ ಬೈಕ್, ಟ್ಯಾಕ್ಸಿ ಬ್ಯಾನ್ ಮಾಡದಿದ್ದರೆ ವಿಷ ಕುಡಿಯುತ್ತೇವೆ ಎಂದು ಚಾಲಕರು ಆಗ್ರಹಿಸಿದ್ದರು. ಆದರೆ, ಒಬ್ಬ ಚಾಲಕ ವಿಷ ಸೇವಿಸಿ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ.

Tap to resize

Latest Videos

undefined

ಇಂದು ಬೆಂಗಳೂರಿಗರಿಗೆ ತಟ್ಟಲಿದೆ ಆಟೋ ಮುಷ್ಕರದ ಬಿಸಿ..!

ಆಟೋ ಚಾಲಕರಿಗೆ ನಷ್ಟ: ಸರ್ಕಾರದಿಂದ ಯಾವುದೇ ಕಾರಣಕ್ಕೂ ಬೈಕ್‌ ಟ್ಯಾಕ್ಸಿಗಳ ಸೇವೆಗಳಿಗೆ ಅನುಮತಿ ನೀಡಬಾರದು. ಬೈಕ್‌ ಟ್ಯಾಕ್ಸಿಗಳ ನಿರ್ವಹಣೆ, ಮೇಲ್ವಿಚಾರಣೆ ವೆಚ್ಚ ತುಂಬಾ ಕಡಿಮೆಯಿದ್ದು, ಪ್ರಯಾಣ ದರವೂ ಕಡಿಮೆ ಇರಲಿದೆ. ಇದರಿಂದ ಎಲ್ಲ ಗ್ರಾಹಕರು ಬೈಕ್‌ ಟ್ಯಾಕ್ಸಿಗಳ ಕಡೆ ಹೋಗುವ ಸಾಧ್ಯತೆಯಿದ್ದು, ಆಟೋಗಳಿಗೆ ನಷ್ಟ ಉಂಟಾಗಲಿದೆ. ಹೀಗಾಗಿ, ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಬೈಕ್‌ ಟ್ಯಾಕ್ಸಿಗಳು ರಸ್ತೆಗೆ ಇಳಿದರೆ ಆಟೋ ಚಾಲಕರ ಜೀವನವೇ ನಷ್ಟವಾಗಲಿದೆ ಎಂದು ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಢೀರ್‌ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್: 
ಆಟೋ ಚಾಲಕರು ಮತ್ತು ಅವರ ಕುಟುಂಬ ಸದಸ್ಯರು ಒಳಗೊಂಡಂತೆ ಸಾವಿರಾರು ಜನರು ಸಾರಿಗೆ ಇಲಾಖೆಯಿಂದ ಶಾಂತಿನಗರ ಟ್ರಾಫಿಕ್‌ ಸಿಗ್ನಲ್‌ ರಸ್ತೆವರೆಗೂ ಜಮಾವಣೆಗೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲದಂತಾಗಿದೆ. ದಿಢೀರ್‌ ಆಟೋ ಚಾಲಕರ ಪ್ರತಿಭಟನೆಯಿಂದಾಗಿ ಸಂಜೆ ವೇಳೆಯಲ್ಲಿ ಶಾಂತಿನಗರದ ಸುತ್ತಮುತ್ತ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಕಚೇರಿ ಕೆಲಸಗಳನ್ನು ಮುಗಿಸಿ ಮನೆಯತ್ತ ಹೊರಟವರು ಟ್ರಾಫಿಕ್‌ ಜಾಮ್‌ಗೆ ಸಿಕ್ಕು ನಲುಗುತ್ತಿದ್ದಾರೆ. ಇನ್ನು ಆಟೋ ಚಾಲಕರನ್ನು ಮನವೊಲಿಸಿ ರಸ್ತೆಯನ್ನು ಬಿಟ್ಟು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಆ್ಯಪ್‌ ಆಟೋ ಸೇವಾ ಶುಲ್ಕ ಶೇ.10ಕ್ಕೆ ಹೆಚ್ಚಿಸಲು ಅವಕಾಶ: ಹೈಕೋರ್ಟ್‌

ರ್ಯಾಪಿಡೋ ಚಾಲಕನನ್ನ ಥಳಿಸಿದ ಆಟೋ ಚಾಲಕರು:
ಶಾಂತಿನಗರದಲ್ಲಿ ಸಾರಿಗೆ ಇಲಾಖೆಯ ಬಳಿ ರ್ಯಾಪಿಡೋ ಬೈಕ್‌ ಚಾಲಕನೊಬ್ಬ ಬೈಕ್ ನಲ್ಲಿ ಬಿಲ್ ಅಪ್ ಗಾಗಿ ಬಂದಿದ್ದನು. ಈ ವೇಳೆ ಬೈಕ್‌ ಚಾಲಕನನ್ನು ಹಿಡಿದುಕೊಂಡು ಯಾವ ಕಂಪನಿಯ ಗುರುತಿನ ಚೀಟಿ ಇದೆ ಎಂದು ಪರಶೀಲನೆ ಮಾಡಿದ್ದಾರೆ. ಬೈಕ್‌ ಚಾಲಕನ ಬಳಿ ಮಹಿಳೆಯ ಗುರುತಿನ ಚೀಟಿ ಇದ್ದು, ಅದನ್ನೇ ಬಳಸಿಕೊಂಡು ಬೈಕ್‌ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲಿದ್ದ ಆಟೋ ಚಾಲಕರು ಬೈಕ್‌ ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ರ್ಯಾಪಿಡೋ ಚಾಲಕನನ್ನ ಸ್ಥಳದಿಂದ ಕಳಿಹಿಸಿದ್ದಾರೆ.

click me!