ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ತುಷ್ಟೀಕರಣ ನೀತಿಯೇ ಕಾರಣ: ಎಂಎಲ್‌ಸಿ ರವಿಕುಮಾರ ವಾಗ್ದಾಳಿ

Published : Nov 12, 2025, 06:29 PM IST
N Ravi kumar on Delhi Red Fort blast probe

ಸಾರಾಂಶ

ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರು, ಕಾಂಗ್ರೆಸ್‌ನ ಹಿಂದಿನ ಆಡಳಿತದಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಯುಪಿಎ ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು 70% ಕಡಿಮೆಯಾಗಿವೆ ಎಂದು ಅಂಕಿ-ಅಂಶ ಸಮೇತ ವಾಗ್ದಾಳಿ ನಡೆಸಿದರು.

ಬೆಂಗಳೂರು, (ನ.12): ತಾವೇ ಬೆಳೆಸಿದ ಸಂಘಟನೆಯಿಂದ ಅವರು ಬಲಿಯಾದ ವಿಚಾರ ಅವರಿಗೆ ಗೊತ್ತಿದೆಯಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಎಂಎಲ್‌ಸಿ ಎನ್‌ ರವಿಕುಮಾರ್ ತಿರುಗೇಟು ನೀಡಿದರು.

ಕಾಂಗ್ರೆಸ್‌ನ ಹಿಂದಿನ ಆಡಳಿತದಲ್ಲಿ ಭಯೋತ್ಪಾದಕರಿಗೆ ನೀಡಿದ ಆಶ್ರಯವನ್ನು ಖಂಡಿಸಿ ತೀವ್ರ ವಾಗ್ದಾಳಿ ನಡೆಸಿದ ಅವರು, ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಕಾಂಗ್ರೆಸ್‌ನ ಕೆಲವು ಮಂತ್ರಿಗಳು ಪ್ರಧಾನಿ ಹಾಗೂ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದರೆ ನಿಮ್ಮ ಅವಧಿಯಲ್ಲಿ ಎಷ್ಟು ಘಟನೆ ನಡೆದಿತ್ತು ಒಮ್ಮೆ ಅವಲೋಕಿಸಿ. ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಕಾಲದಲ್ಲಿ ಎಷ್ಟು ಬ್ಲಾಸ್ಟ್ ಪ್ರಕರಣ ಆಗಿತ್ತು? ತಾವೇ ಬೆಳೆಸಿದ ಸಂಘಟನೆಯಿಂದ ಅವರು ಬಲಿಯಾದ ವಿಚಾರ ಅವರಿಗೆ ಗೊತ್ತಿದೆಯೇ? ಭಯೋತ್ಪಾದಕನೆಗೆ ಆಶ್ರಯ ಕೊಟ್ಟವರು ಯಾರು? ಉಗ್ರರ ಲಾಲನೆ ಪಾಲನೆ ಮಾಡಿದವರು ಯಾರು? ಭಯೋತ್ಪಾದನೆ ಮಟ್ಟ ಹಾಕಲು ವಾಜಪೇಯಿ ಸರ್ಕಾರ ಕೋಕಾ ಕಾಯ್ದೆ ತಂದಿತ್ತು. ಆಗ ಕೋಕಾ ಕಾಯ್ದೆ ತೆಗೆದು ಹಾಕಿದ್ದು ಯಾರು? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರ ಬಂದ ಮೇಲೆ 70% ಉಗ್ರ ಕೃತ್ಯ ಬಂದ್:

ದೆಹಲಿ ಕಾರು ಬ್ಲಾಸ್ಟ್ ಗೆ ಪ್ರಧಾನಿ, ಗೃಹ ಸಚಿವರನ್ನ ಅಸಮರ್ಥರೆನ್ನುವ, ರಾಜೀನಾಮೆ ಕೇಳುವ ಕಾಂಗ್ರೆಸ್ ನಾಯಕರಿಗೆ ಅಂಕಿ-ಅಂಶ ಸಮೇತ ತಿರುಗೇಟು ನೀಡಿದ ಎನ್‌ ರವಿಕುಮಾರ್, ಯುಪಿಎ ಕಾಲದಲ್ಲಿ (2004-14) 7,217 ಘಟನೆಗಳು ನಡೆದಿದೆ. ಆದರೆ 2014ರ ನಂತರ ಈವರೆಗೂ ಎನ್‌ಡಿಎ ಕಾಲದಲ್ಲಿ 2,242 ಘಟನೆಗಳು ನಡೆದಿದೆ. ಅಂದರೆ ಮೋದಿ ಸರ್ಕಾರ ಬಂದ ಮೇಲೆ 70% ಭಯೋತ್ಪಾದನೆ ಕೃತ್ಯ ನಿಂತಿದೆ. ಉಗ್ರರು ದೇಶದೊಳಗೆ ಕೃತ್ಯವೆಸಗಲು ಹೆದರುತ್ತಿದ್ದಾರೆ. ಬಾಯಿ ಚಪಲಕ್ಕೆ ಮಾತಾಡೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ಪ್ರಧಾನಿ, ಅಮಿತ್ ಶಾ ಅವರು ಹೊರದೇಶದಿಂದ ಗಡಿದಾಟಿ ಬರುವ ಭಯೋತ್ಪಾದಕರನ್ನ ತಡೆದಿದ್ದಾರೆ. ಆದ್ರೆ ಬಂದವರನ್ನು ಪೋಷಿಸೋ ಕೆಲಸ ಮಾಡುವವರು ಇಲ್ಲಿದ್ದಾರೆ. ಮನೆಗಳಲ್ಲಿ ಇನ್ಶಿಟಿಟ್ಯೂಟ್‌ಗಳಲ್ಲಿ ಪೋಷಿಸೋ ಕೆಲಸ ಮಾಡುತ್ತಿರುವವರು ದೇಶದೊಳಗೆ ಇದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ತುಷ್ಟೀಕರಣದಿಂದ ಭಯೋತ್ಪಾದಕ ದಾಳಿಗೆ ಕಾರಣ ಎಂದು ಆರೋಪಿಸಿದರು.

ಜಮೀರ್ ಹೇಳಿಕೆಗೆ ತಿರುಗೇಟು:

'ನಮ್ಮ ಅಲ್ಪಸಂಖ್ಯಾತ ಸಮುದಾಯದವರು 99% ಈ ಕೃತ್ಯದಲ್ಲಿಲ್ಲ ಎಂಬ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ಎನ್‌ ರವಿಕುಮಾರ್, ನಿಮ್ಮ ಸಮುದಾಯದವರು ಭಯೋತ್ಪಾದನೆ ಕೃತ್ಯದಲ್ಲಿಲ್ಲ ಎನ್ನುತ್ತೀರಿ. ಆದ್ರೆ ಸಿಕ್ಕಿರೋ ಎಲ್ಲಾ ಟೆರರಿಸ್ಟ್‌ಗಳೆಲ್ಲ ಮುಸ್ಲಿಮರೇ ಆಗಿದ್ದಾರೆ. ಅವರಿಗೆ ಟೆರರಿಸ್ಟ್ ಆಕ್ಟಿವಿಟಿ ಮಾಡಿ ಪೋಷಿಸೋ ಕೆಲಸ ಮಾಡ್ತಿರೋರು ಯಾರು? ಇದಕ್ಕೆ ಹೊಣೆ ಕಾಂಗ್ರೆಸ್ ಮತ್ತು ಅವರ ತುಷ್ಟೀಕರಣ ನೀತಿಯೇ ಆಗಿದೆ. ಈಗ ಬಂಧಿತ ಉಗ್ರರಿಂದ 2,900 k.g RDX ಅನ್ನ ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನ, ಗುಜರಾತ್, ಜಮ್ಮು, ಹರಿಯಾಣದಲ್ಲಿ ಈಗಾಗಲೇ ಹಲವರ ಬಂಧನ ಆಗಿದೆ. ಇಂಥ ಕೃತ್ಯ ನಡೆದಾಗ ಕೇಂದ್ರ ಸರ್ಕಾರದ ವಿರುದ್ಧ ಬಾಯಿಚಪಲಕ್ಕೆ ಹೇಳಿಕೆ ನೀಡಬಾರದು. ಭಯೋತ್ಪಾದಕರನ್ನ ಬೆಳೆಸುತ್ತಿರುವವರು ಯಾರು ಎಂದು ಎಂಬುದನ್ನ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಇದ್ರೆ, ಅದರ ಸಂಪೂರ್ಣ ಹೊಣೆ‌ ಕಾಂಗ್ರೆಸ್ ಪಕ್ಷ ಹೊರಬೇಕು ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ