AIIMS Hospital: ಕರ್ನಾಟಕಕ್ಕೆ ದಿಲ್ಲಿ ಮಾದರಿ ಏಮ್ಸ್‌ ಆಸ್ಪತ್ರೆ: ಕೇಂದ್ರ ಭರವಸೆ

By Girish Goudar  |  First Published May 19, 2022, 5:13 AM IST

*   ಆರೋಗ್ಯ ಸಚಿವ ಸುಧಾಕರ್‌ ಕೋರಿಕೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ
*   ಬೆಂಗಳೂರು ಉತ್ತರ ತಾಲೂಕಿನಲ್ಲಿ ನಿಮ್ಹಾನ್ಸ್‌ ಕ್ಯಾಂಪಸ್‌ ಸ್ಥಾಪನೆಗೆ ಡಿಪಿಆರ್‌ ಸಲ್ಲಿಕೆ
*  ಸಚಿವ ಮನ್‌ ಸುಖ್‌ ಮಾಂಡವೀಯ ಅವರಿಗೆ ಧನ್ಯವಾದ ಸಲ್ಲಿಸಿದ ಸುಧಾಕರ್ 
 


ನವದೆಹಲಿ(ಮೇ.19): ರಾಜ್ಯದ ಆರೋಗ್ಯ ಕ್ಷೇತ್ರದ ಮತ್ತಷ್ಟು ಬಲವರ್ಧನೆಗಾಗಿ ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆ ಆರಂಭಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಏಮ್ಸ್‌ ಸ್ಥಾಪನೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಏಮ್ಸ್‌ ಸಂಸ್ಥೆಯೊಂದನ್ನು ಆರಂಭಿಸಬೇಕೆಂದು ಸಚಿವ ಸುಧಾಕರ್‌, ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ‘ರಾಜ್ಯದಲ್ಲಿ ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಸಾಕಷ್ಟು ಬೆಳೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಮೆಡಿಕಲ… ಕಾಲೇಜುಗಳಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಏಮ್ಸ್‌ ಸಂಸ್ಥೆ ಸ್ಥಾಪಿಸುವುದು ಸೂಕ್ತವಾಗಿದೆ’ ಎಂದು ಸುಧಾಕರ್‌, ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

Tap to resize

Latest Videos

Tomato Flu ಕೋವಿಡ್‌ಗೂ ಟೊಮೆಟೋ ಜ್ವರಕ್ಕೂ ಸಂಬಂಧವಿಲ್ಲ, ಸುಧಾಕರ್‌!

ಉತ್ತರ ತಾಲೂಕಿನಲ್ಲಿ ನಿಮ್ಹಾನ್ಸ್‌ ಕ್ಯಾಂಪಸ್‌:

ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ ನಿಮ್ಹಾನ್ಸ್‌ ಸಂಸ್ಥೆಯ ಹೊಸ ಕ್ಯಾಂಪಸ್‌ ನಿರ್ಮಾಣ ಕುರಿತೂ ಡಾ. ಸುಧಾಕರ್‌ ಚರ್ಚೆ ನಡೆಸಿದರು. 2021 ರಲ್ಲಿ ಹೊಸ ಮೆಡಿಕಲ್‌ ಕಾಲೇಜು ಸ್ಥಾಪಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಇದರ ಬದಲು, ನಿಮ್ಹಾ®್ಸ… ಪಿಜಿ ಸಂಸ್ಥೆ ಆರಂಭಿಸುವಂತೆ ಆರ್ಥಿಕ ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಅದರಂತೆ, 2,100 ಕೋಟಿ ರೂ. ವೆಚ್ಚದಲ್ಲಿ 2,344 ಹಾಸಿಗೆಯ ಕಟ್ಟಡ ಹಾಗೂ ಪಿಜಿ ಕೇಂದ್ರವನ್ನು 8 ವರ್ಷಗಳಲ್ಲಿ ನಿರ್ಮಿಸುವ ಪ್ರಸ್ತಾವವನ್ನು 2022 ರ ಫೆಬ್ರವರಿಯಲ್ಲಿ ಸಲ್ಲಿಸಲಾಗಿತ್ತು. ಆದರೆ ಇದನ್ನು ಪರಿಷ್ಕರಿಸುವಂತೆ ಸಮಿತಿಯು ಸಲಹೆ ನೀಡಿತ್ತು. ಆದ್ದರಿಂದ 538 ಹಾಸಿಗೆಗಳ ಪಾಲಿ ಟ್ರಾಮಾ ಕೇಂದ್ರ ಹಾಗೂ ಪಿಜಿ ಸೆಂಟರ್‌ ನಿರ್ಮಿಸುವ ಡಿಪಿಆರ್‌ ಸಿದ್ಧಪಡಿಸಿ ನೀಡಲಾಗಿದೆ. ಈ ಯೋಜನೆಯಲ್ಲಿ ಕಟ್ಟಡ ನಿರ್ಮಾಣಕ್ಕೆ 489 ಕೋಟಿ ರು. ಖರ್ಚಾಗಲಿದ್ದು, 260.76 ಕೋಟಿ ರು. ವೈದ್ಯಕೀಯ ಉಪಕರಣಗಳಿಗೆ ಹಾಗೂ ವಾರ್ಷಿಕ 159 ಕೋಟಿ ರು. ಮಾನವ ಸಂಪನ್ಮೂಲಕ್ಕೆ ಖರ್ಚಾಗಲಿದೆ.

ಸುಧಾಕರ್‌ ಕೃತಜ್ಞತೆ:

‘ರಾಜ್ಯಕ್ಕೆ ಏಮ್ಸ್‌ ಸಂಸ್ಥೆಯನ್ನು ನೀಡಲು ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರಕ್ಕೆ, ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಆರೋಗ್ಯ ಸಚಿವ ಮನ್‌ ಸುಖ್‌ ಮಾಂಡವೀಯ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸಂಸ್ಥೆಯು ರಾಜ್ಯದಲ್ಲಿ ಸ್ಥಾಪನೆಯಾದರೆ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮತ್ತಷ್ಟುಮುಂಚೂಣಿಗೆ ಬರಲು ಹಾಗೂ ರಾಜ್ಯದ ಜನರಿಗೆ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯಲು ಸಹಾಯಕವಾಗಲಿದೆ’ ಎಂದು ಸುಧಾಕರ್‌ ಹೇಳಿದ್ದಾರೆ.

ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!

ಸಚಿವರು ಸಲ್ಲಿಸಿದ ಇತರೆ ಮನವಿಗಳು:

- ನರ್ಸಿಂಗ್‌ ಹಾಗೂ ಅಲೈಡ್‌ ಆರೋಗ್ಯ ವಿಜ್ಞಾನಗಳು, ಆರೋಗ್ಯ ಸೇವೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಇಂದಿನ ಅಗತ್ಯ
- ಆಸ್ಪತ್ರೆಗಳ ಆಡಳಿತ ನಿರ್ವಹಣೆಯ ಬಗ್ಗೆ ವೈದ್ಯರಿಗೆ ತರಬೇತಿ ನೀಡುವುದು ಅವಶ್ಯಕ. ವೈದ್ಯರ ತರಬೇತಿ ಕಾರ್ಯಕ್ರಮದಲ್ಲಿ, ಆಸ್ಪತ್ರೆಯ ಆಡಳಿತದ ಪಠ್ಯವನ್ನು ಕೂಡ ಸೇರಿಸಬೇಕಿದೆ. ಇದರಲ್ಲಿ ಪಿಪಿಪಿ ಮಾದರಿಯನ್ನು ಅನುಸರಿಸಬಹುದು.
- ಸರ್ಕಾರಿ ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನೀಡುವ ಅನುದಾನವು ಖಾಸಗಿ ಮೆಡಿಕಲ… ಕಾಲೇಜುಗಳನ್ನು ಹೊಂದಿರದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ನಿಯಮವನ್ನು ಸಡಿಲಿಸಿದರೆ ಸೂಕ್ತ.
- ಸೀಟು ಹಂಚಿಕೆ ವೇಳೆ ಡೀಮ್‌್ಡ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಕೌನ್ಸಿಲಿಂಗ್‌ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಇರುವುದಿಲ್ಲ. ಈ ನಿಯಮವನ್ನು ಬದಲಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ನೀಡಲು ಕ್ರಮ ವಹಿಸಬೇಕಿದೆ.
- ಆಹಾರ ಸುರಕ್ಷತೆ ಮತ್ತು ಗುಣಮಟ್ಟಹಾಗೂ ಫಾರ್ಮಸಿ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸುವ ಅಗತ್ಯವಿದೆ.
- ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೂಪಿಸಿವ ಯೋಜನೆಗಳಲ್ಲಿ ಸ್ಥಳೀಯ ಹಾಗೂ ಪ್ರಾದೇಶಿಕ ಆರೋಗ್ಯ ಸಮಸ್ಯೆಗಳಿಗೆ ಒತ್ತು ನೀಡಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು.
 

click me!