ಕಾಂಗ್ರೆಸ್ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಕೊನೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಸೆಪ್ಟಂಬರ್ 4ರಿಂದಲೂ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಡಿಕೆಶಿಗೆ ಮುಕ್ತಿ ಸಿಕ್ಕಿದೆ. ಆದ್ರೆ ಕೋರ್ಟ್ ಡಿಕೆಶಿಗೆ ಜಾಮೀನು ನೀಡಿದ್ದು ಒಂದೇ ಒಂದು ಕಾರಣಕ್ಕೆ. ಏನದು..? ಮುಂದೆ ಓದಿ..
ನವದೆಹಲಿ/ಬೆಂಗಳೂರು, (ಅ.23): ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಇಂದು (ಬುಧವಾರ) ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಡಿಕೆಶಿಗೆ ಬಿಗ್ ರಿಲೀಫ್: ಕೊನೆಗೂ ತಿಹಾರ್ ಜೈಲಿನಿಂದ ಹೊರಕ್ಕೆ
undefined
ಆದ್ರೆ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಕೊಡುವ ಸಂದರ್ಭದಲ್ಲಿ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ. ಅನಾರೋಗ್ಯದ ಕಾರಣದಿಂದಷ್ಟೇ ಡಿಕೆಶಿಗೆ ಜಾಮೀನು ನೀಡುತ್ತಿರುವುದಾಗಿ ದೆಹಲಿ ಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್ ಅವರು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
25 ಲಕ್ಷ ರೂ. ಬಾಂಡ್ ಇಡಬೇಕು. ಡಿಕೆಶಿ ತಮ್ಮ ಪಾಸ್‌ಪೋರ್ಟ್ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು, ಅಗತ್ಯಬಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ಡಿಕೆಶಿಗೆ ಆರೋಗ್ಯದಲ್ಲಿ ಏರುಪೇರು: ದೆಹಲಿ ಆಸ್ಪತ್ರೆಗೆ ದಾಖಲು!
ಕೋರ್ಟ್ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದ ಬಳಿಕ ದೆಹಲಿ ಹೈಕೋರ್ಟ್ ಆದೇಶ ರೋಸ್ ಅವೆನ್ಯೂ ರಸ್ತೆಯ ಇಡಿ ವಿಶೇಷ ನ್ಯಾಯಾಲಯಕ್ಕೆ ರವಾನೆಯಾಗುತ್ತೆ.
ಈ ವೇಳೆ ಡಿಕೆಶಿ ಪರ ವಕೀಲರು ಇಬ್ಬರು ಶ್ಯೂರಿಟಿಗಳನ್ನು ವಿಶೇಷ ನ್ಯಾಯಾಲಯಕ್ಕೆ ಒದಗಿಸಬೇಕು. ಆ ಬಳಿಕ, ಇಡಿ ವಿಶೇಷ ನ್ಯಾಯಾಲಯ ಡಿಕೆಶಿ ಅವರನ್ನು ಬಿಡುಗಡೆ ಮಾಡಿ ಎಂದು ತಿಹಾರ್ ಜೈಲಿಗೆ ಆದೇಶ ಪ್ರತಿ ಕಳುಹಿಸುತ್ತಾರೆ. ನಂತರವಷ್ಟೇ ಡಿಕೆಶಿ ತಿಹಾರ್ ಜೈಲಿನಿಂದ ಹೊರಬರಲಿದ್ದಾರೆ.
'ನವೆಂಬರ್‌ನಿಂದ ಮೋದಿಗೆ ಗಂಡಾಂತರ, ಡಿಕೆಶಿ ಸಿಎಂ ಆಗೋದು ನಿಶ್ಚಿತ'
ಡಿಕೆಶಿ ಕೈಹಿಡಿದ ಅನಾರೋಗ್ಯ
ಹೌದು...ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರಂದು ಇಡಿ ವಶಕ್ಕೆ ನೀಡಲಾಗಿತ್ತು. ಬಳಿಕ ಡಿಕೆಶಿ ಆಗಾಗ ಅನಾರೋಗ್ಯ ಕಾಡುತ್ತಲೇ ಇತ್ತು. ಬಿ.ಪಿ, ಶುಗರ್ ಅವರನ್ನು ಕಾಡುತ್ತಲೇ ಇತ್ತು.
ಇದ್ರಿಂದ ಕೋರ್ಟ್ ಸೂಚನೆ ಮೇರೆಗೆ ಡಿಕೆಶಿ ಅವರನ್ನು ನವದೆಹಲಿಯಲ್ಲಿರುವ ಆರ್‌ಎಂಎಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ದೆಹಲಿ ಹೈಕೋರ್ಟ್ ಅನಾರೋಗ್ಯವನ್ನೇ ಪರಿಗಣಿಸಿ ಡಿಕೆಶಿಗೆ ಜಾಮೀನು ನೀಡಿದೆ.
ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: