ಮೆದುಳು ನಿಷ್ಕ್ರಿಯತೆ: ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳ ದಾನ

By Govindaraj S  |  First Published Aug 7, 2023, 9:03 PM IST

ಕಳೆದ ಮೂರು ದಿನಗಳ ಹಿಂದೆ ಮೆದುಳು ನಿಷ್ಕ್ರಿಯತೆಗೊಳಗಾಗಿದ್ದ ಚಿಕ್ಕಮಗಳೂರು ನಗರದ ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳನ್ನು ಇಂದು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಸಿ ಮಾಡಿ ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.07): ಕಳೆದ ಮೂರು ದಿನಗಳ ಹಿಂದೆ ಮೆದುಳು ನಿಷ್ಕ್ರಿಯತೆಗೊಳಗಾಗಿದ್ದ ಚಿಕ್ಕಮಗಳೂರು ನಗರದ ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳನ್ನು ಇಂದು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಸಿ ಮಾಡಿ ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು. ತಮ್ಮ ಪತಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ರೂಬೆನ್ ಮೋಸೆಸ್ ಅವರ ಸಮಾಜ ಸೇವೆಗೆ ಹೆಗಲಾಗಿ ನಿಂತು ಹತ್ತು ಹಲವು ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಹನಾ ಜೋನ್ಸ್ ಅವರು ಸಾವಿನಲ್ಲೂ ಸಾರ್ಥಕತೆ ಮರೆದರು. ಸದಾ ಕ್ರಿಯಾಶೀಲರಾಗಿ, ಆರೋಗ್ಯವಾಗಿದ್ದ ಸಹನಾ ಅವರಿಗೆ ಇದೇ ತಿಂಗಳು 5ರಂದು (ಶನಿವಾರ) ಬೆಳಗ್ಗೆ ತಲೆನೋವು ಕಾಣಿಸಿಕೊಂಡಿತ್ತು. 

Latest Videos

undefined

ವೈದ್ಯರು ಪರೀಕ್ಷೆ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರುವುದು ಕಂಡುಬಂದಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆ ವೇಳೆಗಾಗಲೆ ಮೆದುಳು ಸಂಪೂರ್ಣ ನಿಷ್ಕ್ರೀಯತೆಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರು ಕೈಚೆಲ್ಲಿದ್ದರು.ಈ ಹಿನ್ನೆಲೆಯಲ್ಲಿ ಪತಿ ರೂಬೆನ್ ಮೋಸೆಸ್ ಹಾಗೂ ಮನೆಯವರು ಸಹನಾ ಅವರ ಅಂಗಾಗ ದಾನಕ್ಕೆ ನಿರ್ಧರಿಸಿದ್ದರು. ಅದರಂತೆ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಎಲ್ಲಾ ರೀತಿಯ ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಅಂಗಾಗ ಕಸಿ ನಡೆಸಿದರು. ಸಹನಾ ಅವರ ಕಣ್ಣು, ಮೂತ್ರಪಿಂಡ ಹಾಗೂ ಲಿವರ್‌ಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು.

ಮಿಡಿ ಹಾಕಿದ್ರೆ ದೇವೀರಮ್ಮನ ದರ್ಶನ ಇಲ್ಲ: ದೇಗುಲದ ಹೊಸ ನಿಯಮ ಏನ್‌ ಹೇಳುತ್ತೆ?

ಝೀರೋ ಟ್ರಾಫಿಕ್: ಅಂಗಾಗಗಳನ್ನು ಸಾಗಿಸಿದ ಆಂಬುಲೆನ್ಸ್‌ಗಳಿಗೆ ನಗರದಿಂದ ಬೆಂಗಳೂರು ಹಾಗೂ ಮಂಗಳೂರಿನ ವರೆಗೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೇ ಮಾಡಿದ್ದರು.ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡರು.ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಅವರೊಂದಿಗೆ ಇತರೆ ತಜ್ಞ ವೈದ್ಯರುಗಳಾದ ಡಾ.ಪ್ರಶಾಂತ್, ಡಾ.ಚಂದ್ರಶೇಖರ್ ಸಾಲಿಮಠ್, ಡಾ.ಪ್ರಶಾಂತ್, ಡಾ.ಶ್ರೀನಿವಾಸ ಮೂರ್ತಿ, ಅರಿವಳಿಕೆ ತಜ್ಞರಾದ ಸುಶ್ಮ, ಆರ್‌ಎಂಓ ಕಲ್ಪನಾ ಇತರು ಅಂಗಾಗ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.ಅಂಗಾಂಗಗಳನ್ನು ರವಾನೆ ಮಾಡುವ ಸಂದರ್ಭದಲ್ಲಿ ಆಸ್ಪತ್ರೆ ಬಳಿ ಸೇರಿದ್ದ ಸಹನಾ ಅವರ ಬಂಧುಗಳು ಸಾರ್ವಜನಿಕರು ಕಂಬನಿ ಮಿಡಿದರು. ಕೆಲವರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗೌರವ ಸೂಚಿಸಿದರು. ಮತ್ತೊಂದೆಡೆ ಸಾವಿನ ನಂತರವೂ ನಾಲ್ಕೈದು ಜನರ ಜೀವಕ್ಕೆ ನೆರವಾದ ಬಗ್ಗೆ ಸಾರ್ಥಕಭಾವ ವ್ಯಕ್ತಪಡಿಸಿದರು.

ಶಾಸಕರ ಸಾಂತ್ವನ: ಶಾಸಕ ಎಚ್.ಡಿ.ತಮ್ಮಯ್ಯ ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಹನಾ ಅವರ ಪತಿ ರೂಬೆನ್ ಮೊಸೆಸ್ ಮತ್ತು ಬಂಧುಗಳಿಗೆ ಸಾಂತ್ವನ ಹೇಳಿದರು. ಸಹನಾ ಅವರು ತಮ್ಮ ಪತಿಯೊಂದಿಗೆ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದರು. ರೋಗಿಗಳಿಗೆ ಸಂತೈಸಿದ್ದರು. ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ. ಇತರೆ ಐದು ಮಂದಿಗೆ ಅವರು ಜೀವ ನೀಡಿದ್ದಾರೆ. ಅವರಿಗೆ ದೇವರು ಶಾಂತಿ ನೀಡಲಿ ಎಂದರು.ಸಹನಾ ನಮ್ಮ ಸಮಾಜಕ್ಕೆ ಹೆಮ್ಮೆಯಾಗಿದ್ದರು. ಇದಲ್ಲದೆ ನೋವಿನಲ್ಲಿ ಅಂಗಾಗದಾನ ಮಾಡಲು ನಿರ್ಧರಿಸಿರುವ ಅವರ ಕುಟುಂಬ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಅಂಗಾಂಗ ಕಸಿ ಕಾರ್ಯದಲ್ಲಿ ಯಶಸ್ವಿಯಾಗಿರುವ ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ವಾರ್ಡ್‌ಗೆ ಹೆಸರು: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ನಮ್ಮ ಜಿಲ್ಲೆಯ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಮತ್ತು ಸಹನಾ ಜೀನ್ಸ್ ಅವರ ಹೆಸರನ್ನು ನೂತನ ಮೆಡಿಕಲ್ ಕಾಲೇಜು ಕಟ್ಟಡದಲ್ಲಿ ಯಾವುದಾದರೂ ಎರಡು ಕೊಠಡಿಗಳಿಗೆ ನಾಮಕರಣ ಮಾಡುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು. ಸಹನಾ ಅವರ ಮೆದುಳು ನಿಷ್ಕ್ರೀಯಗೊಂಡಿದೆ ಎನ್ನುವುದು ದೃಢಪಟ್ಟ ನಂತರ ರಾಜ್ಯ ಜೀವನ ಸಾರ್ಥಕತೆ ಸಂಸ್ಥೆಗಳ ಜೊತೆಗೆ ಸಮನ್ವಯ ಸಾಧಿಸಿ ಬೆಂಗಳೂರು ಮತ್ತು ಮಂಗಳೂರಿನ 2 ಆಸ್ಪತ್ರೆಗಳಿಗೆ ಅಂಗಾಗಗಳನ್ನು ರವಾನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ತಿಳಿಸಿದರು. 

ಆರಗ ಜ್ಞಾನೇಂದ್ರ ಸಭ್ಯಸ್ಥರಂತೆ ಮುಖವಾಡ ಧರಿಸಿರುವ ಗೋಮುಖ ವ್ಯಕ್ತಿ: ಶಾಸಕ ತಮ್ಮಯ್ಯ

ಎರಡನೇ ಬಾರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ: ಸಹನಾ ಜೋನ್ಸ್ ಅವರ ಅಂಗಾಗ ಕಸಿ ಮಾಡುವ ಮೂಲಕ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯು ಎರಡನೇ ಬಾರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.ಈ ಮೊದಲು ಬಸ್‌ನಿಂದ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರೀಯತೆಗೊಳಗಾಗಿದ್ದ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಅವರ ಅಂಗಾಗಗಳನ್ನು ಕಸಿ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಾಧನೆ ಮಾಡಿದ ಮೊದಲ ಆಸ್ಪತ್ರೆ ಎಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಇದೇ ಕಾರಣಕ್ಕೆ ಮೊನ್ನೆಯಷ್ಟೇ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದನ್ನಿಲ್ಲಿ ಸ್ಮರಿಸಬಹುದು.

click me!