ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌!

By Kannadaprabha NewsFirst Published Jul 6, 2020, 7:12 AM IST
Highlights

ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌| ಬೆಡ್‌ ಇದ್ದೂ ವಾಪಸ್‌ ಕಳುಹಿಸಿದರೆ ಕೇಸ್‌ ದಾಖಲು|  ಆಸ್ಪತ್ರೆಗಳಿಗೆ ವೈದ್ಯ ಶಿಕ್ಷಣ ಸಚಿವ ಸುಧಾಕರ್‌ ಎಚ್ಚರಿಕೆ|  ದಾಖಲಿಸಿಕೊಳ್ಳದಿದ್ದರೆ 1912ಗೆ ಕರೆ ಮಾಡಿ| ಬೇರೆ ಆಸ್ಪತ್ರೇಲಿ ಅಡ್ಮಿಟ್‌ಗೆ ನೆರವು ಸಿಗಲಿದೆ

ಬೆಂಗಳೂರು(ಜು.06): ರಾಜ್ಯದ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕೊರೋನಾ ಪಾಸಿಟಿವ್‌ ಹಾಗೂ ಕೋವಿಡ್‌ ಲಕ್ಷಣಗಳಿರುವ ರೋಗಿಗಳನ್ನು ಹಾಸಿಗೆ ಖಾಲಿ ಇದ್ದರೂ ದಾಖಲಿಸಿಕೊಳ್ಳದೆ ಇದ್ದರೆ ಅಥವಾ ವಾಪಸ್‌ ಕಳಿಸಿದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಎಚ್ಚರಿಸಿದ್ದಾರೆ.

ಅಲ್ಲದೆ, ಆ ರೀತಿ ಯಾವುದೇ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದರೆ ತಕ್ಷಣ ಸಂಬಂಧಪಟ್ಟವರು ಸರ್ಕಾರದ ಸಹಾಯವಾಣಿ 1912 ಕರೆ ಮಾಡಬೇಕು. ತಕ್ಷಣ ಹಾಸಿಗೆ ಲಭ್ಯವಿರುವ ಸಮೀಪದ ಇತರೆ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

ಭಾನುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್‌ ಸೋಂಕಿತರನ್ನು ದಾಖಲಿಸಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಕೋವಿಡ್‌ ನಿಗಾ ಕೇಂದ್ರಗಳು, ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ಯಾವುದೇ ಆಸ್ಪತ್ರೆ, ಸರ್ಕಾರಿ ಅಥವಾ ಖಾಸಗಿ ಯಾವುದೇ ಕೋವಿಡ್‌ ಆಸ್ಪತ್ರೆಗಳು ಕೋವಿಡ್‌ ಸೋಂಕಿತರನ್ನಾಗಲಿ, ಕೋವಿಡ್‌ ಲಕ್ಷಣ ಇರುವರನ್ನಾಗಲಿ ದಾಖಲಿಸಿಕೊಳ್ಳಲು ನಿರಾಕರಿಸಿದರೆ ತಕ್ಷಣ ರೋಗಿ ಅಥವಾ ರೋಗಿಯ ಸಂಬಂಧಿಕರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸರ್ಕಾರದ ಕಾಲ್‌ ಸೆಂಟರ್‌ 1912ಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಹಾಸಿಗೆ ಲಭ್ಯವಿರುವ ಸಮೀಪದ ಬೇರೆ ಆಸ್ಪತ್ರೆಗೆ ದಾಖಲಿಸಲು 108 ಆಂಬುಲೆನ್ಸ್‌ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದರು.

ಇದೇ ವೇಳೆ ರೋಗಿ ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆಯಾ ಇಲ್ಲವಾ ಎಂದು ಕೂಡ 1912 ಸಿಬ್ಬಂದಿ ತಮ್ಮಲ್ಲಿರುವ ದಾಖಲೆ ಆಧಾರದ ಮೇಲೆ ಪರಿಶೀಲಿಸಲಿದ್ದಾರೆ. ಹಾಸಿಗೆ ಖಾಲಿ ಇದ್ದೂ ದಾಖಲಿಸಿಕೊಳ್ಳಲು ನಿರಾಕರಿಸಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಲಾಕ್‌ಡೌನ್‌ ಜಾರಿ ಇಲ್ಲ, ಬೆಂಗಳೂರು ಬಿಟ್ಟು ಹೋಗ್ಬೇಡಿ: ಸಚಿವರ ಮನವಿ!

ಈ ರೀತಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದ ರೋಗಿಗಳಿಗೆ ನಿಗದಿತ ಕೋಡಿವ್‌ ಚಿಕಿತ್ಸಾ ದರವನ್ನು ಸರ್ಕಾರವೇ ಭರಿಸಲಿದೆ. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದವರು ಸರ್ಕಾರ ನಿಗದಿಪಡಿಸಿರುವ ದರವನ್ನು ತಾವೇ ಪಾವತಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

click me!