ಟಿಪ್ಪು ವಿಚಾರ ಪಠ್ಯದಲ್ಲಿರಬೇಕು : ಡಿಸಿಎಂ ಅಶ್ವತ್ಥ್ ನಾರಾಯಣ್

By Kannadaprabha NewsFirst Published Nov 1, 2019, 11:29 AM IST
Highlights

ಟಿಪ್ಪು ಸುಲ್ತಾನ್ ವಿಚಾರಗಳು ಪಠ್ಯದಲ್ಲಿ ಇರಬೇಕು. ಅವರ ಸತ್ಕಾರ್ಯಗಳು ಜನರಿಗೆ ತಿಳಿಯಬೇಕು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ರಾಮನಗರ [ನ.01]: ಟಿಪ್ಪು ಸುಲ್ತಾನ್ ವಿಚಾರಗಳು ಪಠ್ಯ ಪುಸ್ತಕದಲ್ಲಿ ಇರಬೇಕು. ಅವರು ಮಾಡಿರುವ ಸತ್ಕಾರ್ಯಗಳು ಜನರಿಗೆ ತಿಳಿಯಬೇಕು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು

ರಾಮನಗರದಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್ ಟಿಪ್ಪುವಿನ ವಿಚಾರಗಳು ಪಠ್ಯದಲ್ಲಿ ಇರಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಅವರ ವಿಚಾರಗಳನ್ನು ತೆಗೆದರೆ ಮತ್ತೆ ಮತ್ತೆ ಅವರ ಬಗ್ಗೆ ಹೇಳುತ್ತಿರಬೇಕಾಗುತ್ತದೆ ಎಂದರು. 

 ಜನರಿಗೆ ಟಿಪ್ಪುವಿನ ವಿಚಾರಗಳು ತಿಳಿಯಬೇಕು ಎಂದು ಅದು ಪಠ್ಯ ಪುಸ್ತಕದಲ್ಲಿ ಇರಬೇಕು.ಟಿಪ್ಪುವಿಚಾರಗಳನ್ನು ಸಮಾಜದಲ್ಲಿ ಚರ್ಚೆಗೆ ತಂದವರು ಕಾಂಗ್ರೆಸಿನವರು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಿಸಬೇಕೆನ್ನುವ ವಿಚಾರದ ಬಗ್ಗೆಯೂ ಮಾತನಾಡಿದ ಅವರು ಇದರಲ್ಲಿ ಹೊದೇನಿಲ್ಲ. ಹಿಂದಿನ ಸರ್ಕಾರಗಳು ಇದ್ದ ಅವಧಿಯಲ್ಲಿಯೂ ಕೂಡ ರಾಷ್ಟ್ರಧ್ವಜವನ್ನು ಹಾರಿಸಿ ಆಚರಣೆ ಮಾಡಲಾಗಿದೆ. ಆದರೆ ಸಂಘಸಂಸ್ಥೆಗಳು, ಸಂಘಟನೆಗಳು ಕನ್ನಡ ಕನ್ನಡ ಬಾವುಟ ಹಾರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು. 

ಟಿಪ್ಪು ಪಠ್ಯದ ಕುರಿತು ನಿರ್ಧರಿಸಲು ಮಹತ್ವದ ಸಭೆ...

ಆದರೆ ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ ಇತಿಹಾಸವನ್ನು ತೆಗೆದು ಹಾಕುವ ಕುರಿತಂತೆ ಆಡಳಿತ ಹಾಗೂ ವಿಪಕ್ಷಗಳ ನಾಯಕರ ನಡುವೆ ಭಾರಿ ಯುದ್ಧವೇ ನಡೆಯುತ್ತಿದೆ. 

ಸರ್ಕಾರದ ನಾಯಕರಿಂದ ಟಿಪ್ಪು ವಿಚಾರ ತೆಗೆಯುವ ತಯಾರಿ ನಡೆದಿದ್ದು ಈ ಸಂಬಂಧ ಇದೇ ನವೆಂಬರ್ 7 ರಂದು ಮಹತ್ವದ ಸಭೆಯೊಂದು ಕೂಡ ನಡೆಯುತ್ತಿದೆ. 

click me!